Advertisement

ನಮ್ಮದು ಗೆಲ್ಲುವ ಏಕದಿನ: ಖಾದರ್‌​​​​​​​

12:30 AM Jan 17, 2019 | Team Udayavani |

ಮಂಗಳೂರು: ಬಿಜೆಪಿಯವರು ಟೆಸ್ಟ್‌ ಮ್ಯಾಚ್‌ ಆಡುತ್ತಾರೆ. ನಾವು ವನ್‌ ಡೇ ಮ್ಯಾಚ್‌ ಆಡಿ ಗೆಲೆ¤àವೆ- ಇದು ಆಪರೇಶನ್‌ ಕಮಲ ಪ್ರಕರಣ ಬಗ್ಗೆ ಸಚಿವ ಯು.ಟಿ. ಖಾದರ್‌ ಪ್ರತಿಕ್ರಿಯೆ.

Advertisement

ಪತ್ರಿಕಾಗೋಷ್ಠಿಯಲ್ಲಿ ಅವರು, ಬಿಜೆಪಿಯ ಎಲ್ಲ ಪ್ರಯತ್ನ ವ್ಯರ್ಥ. ರಾಜ್ಯ ಸರಕಾರದ ಅಸ್ತಿತ್ವಕ್ಕೆ ಭಯವಿಲ್ಲ ಎಂದರು. 156 ತಾಲೂಕುಗಳು ಬರಪೀಡಿತ ಆಗಿರುವಾಗ ಅದರ ಬಗ್ಗೆ ಹಾಗೂ ಬಜೆಟ್‌ಗೆ ಸಿದ್ಧತೆ ಸಂದರ್ಭದಲ್ಲಿ ಜನರ ಸಮಸ್ಯೆಗಳಿಗೆ ಧ್ವನಿಯಾಗ ಬೇಕಾದವರು ರೆಸಾರ್ಟ್‌ ನಲ್ಲಿ ಕುಳಿತುಕೊಂಡು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಬಿಬಿಎಂಪಿಯಲ್ಲಿ 4 ಮಂದಿ ಕಾರ್ಪೊರೇಟರ್‌ಗಳನ್ನು ಹಿಡಿದಿಟ್ಟು ಕೊಳ್ಳಲು ಬಿಜೆಪಿಯರಿಗೆ ಸಾಧ್ಯ ವಾಗಿಲ್ಲ; ಹಾಗಿರುವಾಗ 15 ಮಂದಿ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವೇ ಎಂದು ವ್ಯಂಗ್ಯವಾಡಿದರು. 

ಯಾವ ತ್ಯಾಗಕ್ಕೂ ಸಿದ್ಧ 
ಪಕ್ಷದಲ್ಲಿನ ಅತೃಪ್ತರ ಮನವೊಲಿಸಲು ಪಕ್ಷದ ವರಿಷ್ಠರು ಸಚಿವ ಸ್ಥಾನ ತ್ಯಾಗ ಮಾಡಲು ಕೇಳಿಕೊಂಡಿದ್ದಾರೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ, ಅಂತಹ ಪ್ರಸ್ತಾಪ ಬಂದಿಲ್ಲ. ನನಗೆ ಹೆಸರು, ಅಧಿಕಾರ ದೊರಕಿರುವುದು ಕಾಂಗ್ರೆಸ್‌ನಿಂದ. ಹಾಗಾಗಿ ಪಕ್ಷಕ್ಕಾಗಿ ಯಾವುದೇ ತ್ಯಾಗಕ್ಕೂ ಸಿದ್ಧ ಎಂದರು. ಕುತ್ತಿಗೆಗೆ ಹಗ್ಗ ಹಾಕಿ ಗಲ್ಲು ಶಿಕ್ಷೆ ನೀಡುವುದಾಗಿ ಹೇಳಿದರೂ ಕಾಂಗ್ರೆಸ್‌ ಬಿಟ್ಟು ಹೋಗುವುದಿಲ್ಲ ಎಂದರು. 

58 ಕೋಟಿ ರೂ. ಬಿಡುಗಡೆ 
ಪ್ರಕೃತಿ ವಿಕೋಪ ಪರಿಹಾರಕ್ಕೆ ಸಂಬಂಧಿಸಿ ದ.ಕ. ಜಿಲ್ಲೆಗೆ ಮತ್ತೆ 58 ಕೋಟಿ ರೂ. ಅನುದಾನ ಬಿಡುಗಡೆ ಆಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ  6 ಕೋಟಿ ರೂ. ನೀಡಲಾಗಿದೆ ಎಂದು ಸಚಿವರು ತಿಳಿಸಿದರು.

Advertisement

ಬಜೆಟ್‌ ಪೂರ್ವ ಸಭೆ 
ಬಜೆಟ್‌ಗೆ ಸಂಬಂಧಿಸಿ ಜಿಲ್ಲಾ  ಮಟ್ಟದ ಪೂರ್ವಭಾವಿ ಸಭೆ ನಡೆಸಲಾಗಿದ್ದು, ಸಭೆಯಲ್ಲಿ  ವಿವಿಧ ಬೇಡಿಕೆಗಳ ಬಗ್ಗೆ  ಚರ್ಚಿಸಿ ಕೈಗೊಂಡ ನಿರ್ಣಯಗಳನ್ನು ಸಿಎಂಗೆಸಲ್ಲಿಸಲಾಗುವುದು ಮುಖ್ಯಮಂತ್ರಿ ಯವರು ಬಜೆಟ್‌ಗೆ ಪೂರ್ವ ಭಾವಿಯಾಗಿ ವಿವಿಧ ಇಲಾಖೆಗಳ ಸಭೆ ನಡೆಸಲಿದ್ದು, ಈ ಸಂದರ್ಭದಲ್ಲಿ ಜಿಲ್ಲೆಯ ಬೇಡಿಕೆಗಳ ಕುರಿತಂತೆ ಚರ್ಚಿಸಿ ತೀರ್ಮಾನ ಕೈಗೊಳ್ಳುವರು ಎಂದು ಸಚಿವ ಖಾದರ್‌ ತಿಳಿಸಿದರು.

ಕಾಂಗ್ರೆಸ್‌ ಮುಖಂಡರಾದ ಈಶ್ವರ ಉಳ್ಳಾಲ, ರಮೇಶ್‌ ಶೆಟ್ಟಿ, ಸಂತೋಷ್‌ ಕುಮಾರ್‌, ಸಾಹುಲ್‌ ಹಮೀದ್‌ ಪತ್ರಿಕಾಗೋಷ್ಠಿಯಲ್ಲಿದ್ದರು.

ನಳಿನ್‌ ಹೇಳಿಕೆ ಹಸಿ ಸುಳ್ಳು
ಮಂಗಳೂರು:
ವಿಜಯ ಬ್ಯಾಂಕ್‌ ವಿಲೀನ ಪ್ರಸ್ತಾವ ಹಿಂದಿನ ಯುಪಿಎ ಸರಕಾರದ್ದು ಹಾಗೂ ಹಣಕಾಸು ಸ್ಥಾಯೀ ಸಮಿತಿಯಲ್ಲಿ ಇದನ್ನು ಸಂಸದ ಡಾ| ಎಂ. ವೀರಪ್ಪ ಮೊಲಿ ಅವರಿಗೆ ತಡೆಯಬಹುದಿತ್ತು ಎಂಬ ಸಂಸದ ನಳಿನ್‌ ಕುಮಾರ್‌ ಹೇಳಿಕೆಗೆ ಖಾದರ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 

ನಳಿನ್‌ ಹೇಳಿಕೆ ರಾಜಕೀಯ ಪ್ರೇರಿತ, ಆಧಾರ ರಹಿತ; ಜವಾಬ್ದಾರಿ ಸ್ಥಾನದಲ್ಲಿರುವವರು ಈ ರೀತಿಯ ಸುಳ್ಳು ಹೇಳಿಕೆ ನೀಡಬಾರದು. ಆರು ತಿಂಗಳಿಂದ ವಿಷಯ ಗೊತ್ತಿದ್ದರೂ ಕನಿಷ್ಠ ವಿಜಯ ಬ್ಯಾಂಕಿನ ಹೆಸರು ಉಳಿಸಲು ಸಂಸದರು ಪ್ರಯತ್ನಿಸಿಲ್ಲ; ಹಾಗಿರುವಾಗ ಬೇರೆ ನಾಯಕರ ಮೇಲೆ ಆರೋಪ ಹೊರಿಸುವುದು ಸರಿಯಲ್ಲ. ಅವರು ಬ್ಯಾಂಕಿನ ಹೆಸರುಳಿಸುವ ಯತ್ನ ಮಾಡಿದರೆ ನಾವು ಸಂಪೂರ್ಣ ಸಹಕಾರ ಕೊಡುತ್ತೇವೆ ಎಂದರು.

ಬ್ಯಾಂಕಿನ ಹೆಸರನ್ನು ಉಳಿಸಿಕೊಳ್ಳುವಂತೆ ವೀರಪ್ಪ  ಮೊಲಿ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ತನ್ನ ವಿರುದ್ಧ  ಆರೋಪ ಮಾಡಿದ ಬಗ್ಗೆ ನಳಿನ್‌ಗೂ ಪತ್ರ ಬರೆಯುವೆ ಎಂದು ಮೊಲಿ ತಿಳಿಸಿದ್ದಾರೆ ಎಂದು ಖಾದರ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next