Advertisement

One Day Series: ವನಿತಾ ಏಕದಿನ: ಆಸ್ಟ್ರೇಲಿಯ ವಿರುದ್ಧ ಭಾರತಕ್ಕೆ ಐದು ವಿಕೆಟ್‌ ಸೋಲು

01:56 AM Dec 06, 2024 | Team Udayavani |

ಬ್ರಿಸ್ಬನ್‌: ಟಿ20 ವಿಶ್ವಕಪ್‌ನಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ ಬಳಿಕ ಮೊದಲ ಕೂಟದಲ್ಲಿ ಆಡಿದ ಆಸ್ಟ್ರೇಲಿಯ ತಂಡವು ಗುರುವಾರ ನಡೆದ ಭಾರತ ತಂಡದೆದುರಿನ ವನಿತೆಯರ ಏಕದಿನ ಪಂದ್ಯದಲ್ಲಿ ಐದು ವಿಕೆಟ್‌ಗಳ ಗೆಲುವು ದಾಖಲಿಸಿದೆ. ಈ ಗೆಲುವಿನಿಂದ ಆಸ್ಟ್ರೇಲಿಯ 3 ಪಂದ್ಯ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಸರಣಿಯ ದ್ವಿತೀಯ ಪಂದ್ಯ ರವಿವಾರ ನಡೆಯಲಿದೆ.

Advertisement

ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ ತಂಡವು ಆಸ್ಟ್ರೇಲಿಯದ ವೇಗಿ ಮೇಘನ್‌ ಷಟ್‌ ಅವರ ದಾಳಿಗೆ ತತ್ತರಿಸಿ 34.2 ಓವರ್‌ಗಳಲ್ಲಿ ಕೇವಲ 100 ರನ್ನಿಗೆ ಆಲೌಟಾಯಿತು. ಇದಕ್ಕುತ್ತರವಾಗಿ ಈ ಪಂದ್ಯದ ಮೂಲಕ ಏಕದಿನಕ್ಕೆ ಪದಾರ್ಪಣೆಗೈದ ಜಾರ್ಜಿಯಾ ವೋಲ್‌ ಅವರ ಅಮೋಘ ಆಟದಿಂದಾಗಿ ಆಸ್ಟ್ರೇಲಿಯ ತಂಡವು ಕೇವಲ 16.2 ಓವರ್‌ಗಳಲ್ಲಿ ಐದು ವಿಕೆಟ್‌ ನಷ್ಟದಲ್ಲಿ 102 ರನ್‌ ಗಳಿಸಿ ಜಯಭೇರಿ ಬಾರಿಸಿತು.

ಬಿರುಸಿನ ಆಟವಾಡಿದ ಜಾರ್ಜಿಯಾ ವೋಲ್‌ 42 ಎಸೆತಗಳಿಂದ 46 ರನ್‌ ಗಳಿಸಿ ಅಜೇಯರಾಗಿ ಉಳಿದರು. ಅವರು ಆರಂಭಿಕ ಆಟಗಾರ್ತಿ ಪೋಬಿ ಲಿಚ್‌ಫೀಲ್ಡ್‌ ಅವರ ಜತೆ ಮೊದಲ ವಿಕೆಟಿಗೆ 48 ರನ್ನುಗಳ ಜತೆಯಾಟ ನಡೆಸಿ ತಂಡದ ಸುಲಭ ಜಯಕ್ಕೆ ಕೊಡುಗೆ ಸಲ್ಲಿಸಿದರು. ಫಿಚ್‌ಫೀಲ್ಡ್‌ 29 ಎಸೆತಗಳಿಂದ 35 ರನ್‌ ಹೊಡೆದರು.

ಭಾರತದ ಪರ 23 ರನ್‌ ಗಳಿಸಿದ ಜೆಮಿಮಾ ರಾಡ್ರಿಗಸ್‌ ತಂಡದ ಗರಿಷ್ಠ ಸ್ಕೋರರ್‌ ಎನಿಸಿಕೊಂಡರು. ಆರಂಭಿಕ ಆಟಗಾರ್ತಿ ಪ್ರಿಯಾ ಪೂನಿಯ, ಸ್ಮತಿ ಮಂಧನಾ, ನಾಯಕಿ ಹರ್ಮನ್‌ಪ್ರೀತ್‌ ಕೌರ್‌, ದೀಪ್ತಿ ಶರ್ಮ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಲು ವಿಫ‌ಲರಾದರು. ಬಿಗು ದಾಳಿ ಸಂಘಟಿಸಿದ ಮೇಘನ್‌ ಷಟ್‌ 19 ರನ್ನಿಗೆ ಐದು ವಿಕೆಟ್‌ ಕಿತ್ತರು.

Advertisement

Udayavani is now on Telegram. Click here to join our channel and stay updated with the latest news.

Next