Advertisement

ಪಾಕ್‌ ವನಿತೆಯರಿಗೆ ಏಕದಿನ ಸರಣಿ

12:50 AM Feb 12, 2019 | Team Udayavani |

ದುಬಾೖ: ಪ್ರವಾಸಿ ವೆಸ್ಟ್‌ ಇಂಡೀಸನ್ನು ಸೋಮವಾರದ ಅಂತಿಮ ಏಕದಿನ ಪಂದ್ಯದಲ್ಲಿ 4 ವಿಕೆಟ್‌ಗಳಿಂದ ಮಣಿಸಿದ ಪಾಕಿಸ್ಥಾನ ವನಿತಾ ತಂಡ ಸರಣಿಯನ್ನು 2-1ರಿಂದ ತನ್ನದಾಗಿಸಿಕೊಂಡಿದೆ.

Advertisement

ಮೊದಲು ಬ್ಯಾಟಿಂಗ್‌ ನಡೆಸಿದ ವೆಸ್ಟ್‌ ಇಂಡೀಸ್‌ 47.3 ಓವರ್‌ಗಳಲ್ಲಿ 159ಕ್ಕೆ ಆಲೌಟಾದರೆ, ಪಾಕಿಸ್ಥಾನ 47.2 ಓವರ್‌ಗಳಲ್ಲಿ 6 ವಿಕೆಟಿಗೆ 163 ರನ್‌ ಬಾರಿಸಿ ಗೆದ್ದು ಬಂತು. 52 ರನ್‌ ಹೊಡೆದ ಆರಂಭಿಕ ಆಟಗಾರ್ತಿ ಸಿದ್ರಾ ಅಮೀನ್‌ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ವಿಂಡೀಸ್‌ ಪರ ನಾಯಕಿ ಸ್ಟಫಾನಿ ಟಯ್ಲರ್‌ ಕೂಡ 52 ರನ್‌ ಬಾರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next