Advertisement

ಏಕದಿನ: ಇಂಗ್ಲೆಂಡ್‌ 4-0 ಜಯಭೇರಿ

09:08 AM May 22, 2019 | Sriram |

ಲೀಡ್ಸ್‌: ಪಾಕಿಸ್ಥಾನದ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲೂ ಪ್ರಭುತ್ವ ಸಾಧಿಸಿದ ಇಂಗ್ಲೆಂಡ್‌ 54 ರನ್‌ ಜಯ ಸಾಧಿಸಿದೆ. 5 ಪಂದ್ಯಗಳ ಸರಣಿಯನ್ನು 4-0 ಅಂತರದಿಂದ ವಶಪಡಿಸಿಕೊಂಡಿದೆ. ಮೊದಲ ಪಂದ್ಯ ಮಳೆಯಿಂದ ರದ್ದುಗೊಂಡಿತ್ತು.

Advertisement

ಮೊದಲು ಬ್ಯಾಟಿಂಗ್‌ ನಡೆಸಿದ ಇಂಗ್ಲೆಂಡ್‌ 9 ವಿಕೆಟಿಗೆ 351 ರನ್‌ ಪೇರಿಸಿ ಸವಾಲೊಡ್ಡಿತು. ಜಬಾಬಿತ್ತ ಪಾಕಿಸ್ಥಾನ 46.5 ಓವರ್‌ಗಳಲ್ಲಿ 297 ರನ್‌ಗಳಿಗೆ ಆಲೌಟ್ ಆಯಿತು.

6 ರನ್‌ ಆಗುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡ ಪಾಕಿಸ್ಥಾನಕ್ಕೆ ನಾಯಕ ಸಫ‌ರ್ರಾಜ್‌ ಅಹ್ಮದ್‌ 97 ರನ್‌ (80 ಎಸೆತ, 7 ಬೌಂಡರಿ, 2 ಸಿಕ್ಸರ್‌), ಬಾಬರ್‌ ಆಜಂ 80 ರನ್‌ (83 ಎಸೆತ, 9 ಬೌಂಡರಿ, 1 ಸಿಕ್ಸರ್‌) ಬಾರಿಸಿ ಆಧಾರವಾದರು. ಕೆಳ ಕ್ರಮಾಂಕದಲ್ಲಿ ಆಸಿಫ್ ಅಲಿ, ಇಮಾದ್‌ ವಾಸಿಮ್‌, ಮೊಹಮ್ಮದ್‌ ಹಸ್ನೇನ್‌ ಹೋರಾಟ ಸಂಘಟಿಸಿದರೂ ಪ್ರಯೋಜನವಾಗಲಿಲ್ಲ. ಇಂಗ್ಲೆಂಡ್‌ ಪರ ಕ್ರಿಸ್‌ ವೋಕ್ಸ್‌ ಘಾತಕ ಬೌಲಿಂಗ್‌ ನಡೆಸಿ 5 ವಿಕೆಟ್ ಕಿತ್ತರು.

ಇದು ವಿಶ್ವಕಪ್‌ ಪಂದ್ಯಾವಳಿಗೆ ದಿಕ್ಸೂಚಿ ಸರಣಿಯಾಗಿದ್ದು, ಇಂಗ್ಲೆಂಡಿನ ಟ್ರ್ಯಾಕ್‌ಗಳಲ್ಲಿ ರನ್‌ ಪ್ರವಾಹ ಹರಿದು ಬಂದೀತೇ ಎಂಬ ಕುತೂಹಲ ಮೂಡಿದೆ. ಈ ನಾಲ್ಕೂ ಪಂದ್ಯಗಳಲ್ಲಿ ಎರಡೂ ತಂಡಗಳು ಬೃಹತ್‌ ಮೊತ್ತ ದಾಖಲಿಸಿದ್ದೇ ಇದಕ್ಕೆ ಸಾಕ್ಷಿ.

ಸ್ಕೋರ್‌ಪಟ್ಟಿ
ಇಂಗ್ಲೆಂಡ್‌ 9 ವಿಕೆಟಿಗೆ 351
ಪಾಕಿಸ್ಥಾನ
ಫ‌ಕಾರ್‌ ಜಮಾನ್‌ ಸಿ ರೂಟ್‌ ಬಿ ವೋಕ್ಸ್‌ 0
ಅಬಿದ್‌ ಅಲಿ ಎಲ್‌ಬಿಡಬ್ಲ್ಯು ಬಿ ವೋಕ್ಸ್‌ 5
ಬಾಬರ್‌ ಆಜಂ ರನೌಟ್‌ 80
ಮೊಹಮ್ಮದ್‌ ಹಫೀಜ್‌ ಎಲ್‌ಬಿಡಬ್ಲ್ಯು ಬಿ ವೋಕ್ಸ್‌ 0
ಸಫ‌ìರಾಜ್‌ ಅಹ್ಮದ್‌ ರನೌಟ್‌ 97
ಶೋಯಿಬ್‌ ಮಲಿಕ್‌ ಸಿ ಮತ್ತು ಬಿ ರಶೀದ್‌ 4
ಆಸಿಫ್ ಅಲಿ ಸಿ ಸ್ಟೋಕ್ಸ್‌ ಬಿ ವಿಲ್ಲಿ 22
ಇಮಾದ್‌ ವಾಸಿಮ್‌ ಸಿ ಬಟ್ಲರ್‌ ಬಿ ವೋಕ್ಸ್‌ 25
ಹಸನ್‌ ಅಲಿ ಸಿ ವಿಲ್ಲಿ ಬಿ ವೋಕ್ಸ್‌ 11
ಶಹೀನ್‌ ಅಫ್ರಿದಿ ಔಟಾಗದೆ 19
ಮೊಹಮ್ಮದ್‌ ಹಸ್ನೇನ್‌ ಸ್ಟಂಪ್ಡ್ ಬಟ್ಲರ್‌ ಬಿ ರಶೀದ್‌ 28
ಇತರ 6
ಒಟ್ಟು (46.5 ಓವರ್‌ಗಳಲ್ಲಿ) 297
ವಿಕೆಟ್‌ ಪತನ: 1-0, 2-6, 3-6, 4-152, 5-189, 6-193, 7-232, 8-250, 9-250, 10-297.
ಬೌಲಿಂಗ್‌ ಕ್ರಿಸ್‌ ವೋಕ್ಸ್‌ 10-2-54-5
ಡೇವಿಡ್‌ ವಿಲ್ಲಿ 9-1-55-1
ಟಾಮ್‌ ಕರನ್‌ 6-0-40-0
ಬೆನ್‌ ಸ್ಟೋಕ್ಸ್‌ 4-0-28-0
ಮೊಯಿನ್‌ ಅಲಿ 10-0-63-0
ಆದಿಲ್‌ ರಶೀದ್‌ 7.5-0-54-2
ಪಂದ್ಯಶ್ರೇಷ್ಠ: ಕ್ರಿಸ್‌ ವೋಕ್ಸ್‌
ಸರಣಿಶ್ರೇಷ್ಠ: ಜಾಸನ್‌ ರಾಯ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next