Advertisement

ಕಾರವಾರ ಜಿಪಂಗೆ ಶಾಲಿನಾ ಸಿದ್ದಿ ಏಕ್‌ ದಿನ್‌ ಕಾ ಸಿಇಒ

03:24 PM Jan 30, 2021 | Team Udayavani |

ಕಾರವಾರ: ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ನಿಮಿತ್ತ ಜಿಪಂನಲ್ಲಿ ಹಮ್ಮಿಕೊಂಡ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕಾಲೇಜು ವಿದ್ಯಾರ್ಥಿಗಳ ಪೈಕಿ ಹಳಿಯಾಳ ಕ್ರೀಡಾಪಟು ಶಾಲಿನಾ ಶಾಯರ್‌ ಸಿದ್ದಿಗೆ ಒಂದು ದಿನ ಜಿಪಂ ಸಿಇಒ ಆಗಿ ಕೆಲಸ ಮಾಡುವ ಅವಕಾಶ ಅಚಾನಕ್‌ ಆಗಿ ದಕ್ಕಿತು.

Advertisement

ಇದು ಯುವತಿಯರಲ್ಲಿ ಆತ್ಮವಿಶ್ವಾಸ ಹಾಗೂ ದೃಢತೆ ತುಂಬಲು ಸಹಾಯವಾಯಿತು. ಐಎಎಸ್‌ ಅಧಿಕಾರಿ, ಜಿಪಂ ಸಿಇಒ ಪ್ರಿಯಂಕಾ ಅವರು ಈ ಅವಕಾಶವನ್ನು ಸಿದ್ದಿ ಸಮುದಾಯದ ಯುವತಿಗೆ ಕಲ್ಪಿಸಿದರು. ಪ್ರಿಯಂಕಾ ಅವರು ತಮ್ಮ ಕಾರ್ಯನಿರ್ವಹಣೆ ಕುರ್ಚಿ ಮೇಲೆ ಶಾಲಿನಾ ಸಿದ್ದಿ ಕುಳ್ಳಿರಿಸಿ, ಜಿಪಂ ಕಾರ್ಯನಿರ್ವಹಣೆಯನ್ನು ಕಲಿಸಿದರು.

ಯುವತಿಯರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದರು. ಪ್ರತಿವರ್ಷ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ನಿಮಿತ್ತ ವಿದ್ಯಾರ್ಥಿನಿಯರನ್ನು ಆಹ್ವಾನಿಸಿ, ಜಿಪಂ ಕಾರ್ಯನಿರ್ವಹಣೆ ಹೇಳಿಕೊಡುವುದಾಗಿ ಪ್ರಕಟಿಸಿದರು. ಇದು ಲಿಂಗ ಅಸಮಾನತೆ ಹೋಗಲಾಡಿಸುವ ಪ್ರಕ್ರಿಯೆ ಎಂದರು. ಪುರುಷರಿಗಿಂತ ಮಹಿಳೆಯರು ಕಡಿಮೆಯಲ್ಲ. ಅವರು ಎಲ್ಲಾ ರೀತಿಯಿಂದ ಸಮಾನರು. ಜಾತಿ ಮತ್ತು ಲಿಂಗಕ್ಕಿಂತ ಮನುಷ್ಯತ್ವ, ಪ್ರತಿಭೆ ಹಾಗೂ ಕಾರ್ಯಕ್ಷಮತೆ ಮುಖ್ಯ. ಆತ್ಮವಿಶ್ವಾಸ ತುಂಬುವ ಘಟನೆಯಾಗಿ ಇತಿಹಾಸದಲ್ಲಿ ದಾಖಲಾಯಿತು.

ಇದನ್ನೂ ಓದಿ:ಬೆಳೆ ಹಾನಿ ಪರಿಹಾರಕ್ಕೆ ಆಗ್ರಹಿಸಿ ಮನವಿ

ಸರ್ಕಾರಿ ಪದವಿ ಕಾಲೇಜು ವಿದ್ಯಾರ್ಥಿನಿಯರನ್ನು ಜಿಪಂನ ವಿವಿಧ ಶಾಖೆಗಳಿಗೆ ಕರೆದೊಯ್ದು ಮಹಿಳೆಯರು ಹೇಗೆ ಸಮರ್ಥವಾಗಿ ಕೆಲಸ ಮಾಡಲು ಸಾಧ್ಯ ಎಂದು ತೋರಿಸಲಾಯಿತು. ಕಲಿಕೆ ಜೀವನದಲ್ಲಿ ಎಷ್ಟು ಮುಖ್ಯ ಎಂಬುದನ್ನು ಅಕ್ಷರಶಃ ಸಿಇಒ ವಿದ್ಯಾರ್ಥಿನಿಯರಿಗೆ ವಿವರಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next