Advertisement
ಕೇಂದ್ರ ಶಿಕ್ಷಣ ಸಚಿವಾಲಯ ಅದಕ್ಕೆ ಅಪಾರ್ (ಆಟೋಮೇಟೆಡ್ ಪರ್ಮ ನೆಂಟ್ ಅಕಾಡೆಮಿಕ್ ಅಕೌಂಟ್ ರಿಜಿಸ್ಟ್ರಿ) ಎಂದು ಕರೆದಿದೆ. ಇಲ್ಲಿ ವಿದ್ಯಾರ್ಥಿಯೊಬ್ಬರ ಅಷ್ಟೂ ಶೈಕ್ಷಣಿಕ ಅರ್ಹತೆಗಳು, ಅವರ ಇತರೆ ಕೌಶಲಗಳು, ಸಾಧನೆಗಳು ದಾಖಲಾಗಿರುತ್ತವೆ. ಜೀವನಪೂರ್ತಿ ಅದು ಎಲ್ಲ ಕಡೆ ಲಭ್ಯವಾಗಲಿದೆ ಎಂದು ಕೇಂದ್ರ ಸರಕಾರಹೇಳಿದೆ. ನೆನಪಿಟ್ಟುಕೊಳ್ಳಬೇಕಾಗಿರುವುದೇನೆಂದರೆ ಇದು ಆಧಾರ್ ಕಾರ್ಡ್ ಜೊತೆಗೆ ಹೆಚ್ಚುವರಿಯಾಗಿ ಬಳಕೆಯಾಗಲಿದೆ.
ಈಗಾಗಲೇ ಕೇಂದ್ರ ಸರಕಾರಎಲ್ಲ ರಾಜ್ಯ ಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಆದೇಶ ನೀಡಿ, ಈ ಬಗ್ಗೆ ಈಗಲೇ ಕಾರ್ಯಾ ರಂಭ ಮಾಡಬೇಕೆಂದು ಸೂಚಿಸಿವೆ ಎಂದು ಮೂಲಗಳು ಹೇಳಿವೆ. ರಾಜ್ಯ ಸರ್ಕಾರಗಳ ಶಿಕ್ಷಣ ಇಲಾಖೆಗಳಿಗೆ ಸೂಚನೆ ನೀಡಿರುವ ಕೇಂದ್ರ, ರಾಜ್ಯ ಶಿಕ್ಷಣ ಸಂಸ್ಥೆಗಳಿಗೆ ಆದೇಶ ನೀಡಿ ಅ.16ರಿಂದ 18ರ ನಡುವೆ ಪೋಷ ಕರ ಸಭೆ ನಡೆಸಿ ವಿಷಯವನ್ನು ಮನದಟ್ಟು ಮಾಡಬೇಕೆಂದು ಸೂಚಿಸಿದೆ ಎನ್ನಲಾಗಿದೆ. ಅಪಾರ್ ಕಾರ್ಡ್‌ನಲ್ಲಿ ವಿದ್ಯಾರ್ಥಿ ಶೈಕ್ಷಣಿಕ ಅರ್ಹತೆ, ಹೆಚ್ಚುವರಿ ಕೌಶಲ್ಯ, ಎತ್ತರ, ತೂಕ, ರಕ್ತದ ಗುಂಪು ಇತರೆ ಮಾಹಿತಿಗಳಿರುತ್ತವೆ. ಆದರೆ ಕೆಲವು ಶಿಕ್ಷಣ ಸಂಸ್ಥೆಗಳು, ಆಧಾರ್ ಕಾರ್ಡ್ ಮಾಹಿತಿಗಳನ್ನು ಪೋರ್ಟಲ್‌ನಲ್ಲಿ ತುಂಬಿಸಲಿಕ್ಕೆ ಕಷ್ಟ ಪಡುತ್ತಿದ್ದೇವೆ ಎಂದು ಹೇಳಿದ್ದಾರೆ.