Advertisement
ಒಂದು ದೇಶ ಒಂದು ಚುನಾವಣೆ ಚರ್ಚೆಯಾಗದೇ ಎಲ್ಲವನ್ನೂ ನೇರವಾಗಿ ಹೇಳಲು ಸಾಧ್ಯವಿಲ್ಲ. ಆ ಕುರಿತು ಚರ್ಚೆಯಾಗಲಿ. ಸರಕಾರಗಳು ಎಲ್ಲರಿಗೂ ಅನುಕೂಲ ಕಲ್ಪಿಸಬೇಕು, ಒಳ್ಳೆಯದಾಗಬೇಕು. ನಾವು ಆಯ್ಕೆ ಮಾಡಿದ ಜನಪ್ರತಿನಿಧಿಗಳಿಗೆ ಗಟ್ಟಿಯಾಗಿ ಕೇಳಬೇಕು. ಅವರ ಮುಂದಾಳತ್ವದಲ್ಲಿ ಸರಕಾರಕ್ಕೆ ಬೇಡಿಕೆ ಸಲ್ಲಿಸಬೇಕು ಎಂದರು. ಜನಪ್ರತಿನಿಧಿಗಳ ಮೂಲಕವೇ ಸಮಸ್ಯೆ ಬಗೆಹರಿಯಬೇಕು ಎಂದರು.
ಈ ಸಲದ ಭಕ್ತ ಸಿದ್ಧಾಂತ ಉತ್ಸವ ಉಡುಪಿಯಲ್ಲಿ ನಡೆಯಲಿದೆ. ಗುರುಗಳು ಕಾಲವಾದ ಬಳಿಕ ಮೊದಲು ಹುಬ್ಬಳ್ಳಿ-ಧಾರವಾಡದಲ್ಲಿ ನಡೆದಿತ್ತು. ಹಿರಿಯ ಶ್ರೀಗಳು ಇದ್ದಾಗ ಪ್ರತೀ 2 ವರ್ಷಕ್ಕೊಮ್ಮೆ ತಣ್ತೀಜ್ಞಾನ ಸಮ್ಮೇಳನ ಅಂತ ನಡೆಸುತ್ತಿದ್ದರು. ಬೆಂಗಳೂರಿನಲ್ಲಿ ಜ. 1ರಿಂದ 3ರ ವರೆಗೂ ಗುರುಗಳ ಮಹಾಸಮಾರಾಧನೆ ನಡೆಯಲಿದೆ ಎಂದು ಶ್ರೀಗಳು ತಿಳಿಸಿದರು.