ಬೆಂಗಳೂರು: ಒಂದು ದೇಶ-ಒಂದು ಚುನಾವಣಾ ಪದ್ಧತಿ ಪ್ರಜಾಪ್ರಭುತ್ವಕ್ಕೆ ಮಾರಕವಾಗಲಿದ್ದು, ಪ್ರಭುತ್ವ ವ್ಯವಸ್ಥೆ ನೆಲೆಗೊಳ್ಳಲು ಬುನಾದಿಯಾಗಲಿದೆ ಎನ್ನುವ ಮೂಲಕ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳನ್ನು ಏಕಕಾಲಕ್ಕೆ ನಡೆಸುವ ಕೇಂದ್ರ ಸರ್ಕಾರದ ಚಿಂತನೆಗೆ ಪ್ರತಿಪಕ್ಷ ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್ ವಿರೋಧ ವ್ಯಕ್ತಪಡಿಸಿದ್ದಾರೆ.
ಸಮಂಜಸ ಸಂಸ್ಥೆಯಿಂದ ನಗರದ ಪುರಭವನದಲ್ಲಿ ಗುರುವಾರ ಆಯೋಜಿಸಿದ್ದ “ಏಕ ಕಾಲದಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ’ ಸ್ಥಿತಿ-ಗತಿ ಕುರಿತ ವಿಚಾರ ಮಂಥನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಒಂದು ದೇಶ-ಒಂದು ಚುನಾವಣೆ ಪದ್ಧತಿ ಪ್ರಜಾಪ್ರಭುತ್ವ ಮತ್ತು ಒಕ್ಕೂಟ ವ್ಯವಸ್ಥೆಗೆ ಮಾರಕವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಬಹು ಸಂಸ್ಕೃತಿಯುಳ್ಳ ಭಾರತದಲ್ಲಿ ಒಂದೊಂದು ರಾಜ್ಯದಲ್ಲೂ ವಿಭಿನ್ನ ರಾಜಕೀಯ ಪರಿಸ್ಥಿತಿ ಇದೆ. ದೇಶದಲ್ಲಿ ಅನಕ್ಷರಸ್ಥ ಜನರಿದ್ದರೂ ಯೋಚನೆಯಿಂದ ಮತ ಚಲಾಯಿಸುತ್ತಾರೆ. ಜನರ ಧ್ವನಿಯನ್ನು ಸರ್ಕಾರಕ್ಕೆ ತಿಳಿಸುವ ಮಾಧ್ಯಮವೇ ಚುನಾವಣೆ. ಲೋಕಸಭೆ, ವಿಧಾನಸಭೆ ಮತ್ತು ಪಂಚಾಯತಿ ಚುನಾವಣೆಗಳು ವಿಭಿನ್ನವಾಗಿರುತ್ತದೆ. ಲೋಕಸಭೆಯಲ್ಲಿ ಗೆದ್ದ ಪಕ್ಷ ವಿಧಾನಸಭೆ ಅಥವಾ ಪಂಚಾಯಿ ಚುನಾವಣೆಯಲ್ಲಿ ಸೋತಿರುವ ನಿದರ್ಶನಗಳಿವೆ. ಭಾರತದ ಚುನಾವಣಾ ವ್ಯವಸ್ಥೆಯಲ್ಲಿ ಒಂದು ದೇಶ-ಒಂದು ಚುನಾವಣೆ ಅವಶ್ಯಕತೆ ಇಲ್ಲ ಎಂದರು.
ಪ್ರದಾನಿ ವಿರುದ್ಧ ವಾಗ್ಧಾಳಿ: ಕೆಟ್ಟ ಚಿಂತನೆ, ಆಲೋಚನೆ ವಿರುದ್ಧ ಹೋರಾಟ ಮಾಡಬೇಕಾದ ಕಾಲವಿದು. ಪ್ರಧಾನಿಯವರಿಗೆ ರೈತರು, ಯುವಜನತೆ, ಮಹಿಳೆಯರ ಅಭಿವೃದ್ಧಿ ಬಗ್ಗೆ ಚಿಂತೆ ಇಲ್ಲ. 1930ರಲ್ಲಿ ಜರ್ಮನಿಯಲ್ಲಿ ಹಿಟ್ಲರ್, ಒಂದು ಸಂಸ್ಕೃತಿ, ಒಂದು ಜನಾಂಗ, ಓರ್ವ ನಾಯಕ ಎಂಬ ವ್ಯವಸ್ಥೆ ಜಾರಿ ತಂದಿದ್ದ. ಇಂತಹ ನೀತಿಗಳನ್ನು ನರೇಂದ್ರ ಮೋದಿ ದೇಶದಲ್ಲಿ ಜಾರಿಗೊಳಿಸಲು ಹೊರಟಿ¨ªಾರೆ ಎಂದು ವಾಗ್ಧಾಳಿ ನಡೆಸಿದರು.
ಜೈನ ವಿವಿ ಸಹಕುಲಪತಿ ಪ್ರೊ.ಸಂದೀಪ್ ಶಾಸ್ತ್ರೀ ಮಾತನಾಡಿ, ಪ್ರಜಾಪ್ರಭುತ್ವ ಮಾದರಿಯಲ್ಲಿ ಆಡಳಿತ ನಡೆಸುವ ಆಸಕ್ತಿ ಇಲ್ಲದವರು ಒಂದು ದೇಶ-ಒಂದು ಚುನಾವಣೆ ಬಗ್ಗೆ ಮಾತನಾಡುತ್ತಾರೆ. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಚುನಾವಣೆ ಮೇಲೆ ನಿಂತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲಿ ಎಂದರು. ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ರಾಜ್ಯಸಭಾ ಸದಸ್ಯ ಕೆ.ಸಿ.ರಾಮಮೂರ್ತಿ, ಕೆಪಿಸಿಸಿ ಉಪಾಧ್ಯಕ್ಷ ಪ್ರೊ.ಕೆ.ಈ.ರಾಧಾಕೃಷ್ಣ, ಮುರಳೀಧರ್ ಹಾಲಪ್ಪ, ಸಮಂಜಸ ಸಲಹೆಗಾರರಾದ ನಟರಾಜ್ ಗೌಡ ಮುಂತಾದವರಿದ್ದರು.
ಪ್ರಧಾನಿ ವಿರುದ್ಧ ವಾಗ್ಧಾಳಿ: ಒಂದು ದೇಶ-ಒಂದು ಚುನಾವಣೆ ಭಾರತಕ್ಕೆ ಈಗ ಅಗತ್ಯವಿಲ್ಲ. ಪ್ರಧಾನಿ ಮೋದಿಯವರು ಸ್ಲೋಗನ್ ಸೃಷ್ಟಿಕರ್ತರಾಗಿದ್ದಾರೆ. ಅಮೆರಿಕಾ, ಇಂಗ್ಲೆಂಡ್‌ನಿಂದ ಸ್ಲೋಗನ್ ಆಮದು ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಮೋದಿ ಇತಿಹಾಸ ಓದಿಲ್ಲ, ತಿಳಿದುಕೊಂಡಿಲ್ಲ. ಮೂರ್ಖರಂತೆ ಮಾತಾಡುತ್ತಾರೆ ಎಂದು ಎಚ್.ಎಸ್.ದೊರೆಸ್ವಾಮಿಯವರು ಪ್ರಧಾನಿ ವಿರುದ್ಧ ವಾಗ್ಧಾಳಿ ನಡೆಸಿದರು.
ಚುನಾವಣಾ ವೆಚ್ಚ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಇದನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಎಲ್ಲ ರಾಜಕೀಯ ಪಕ್ಷಗಳು ಗಂಭೀರವಾಗಿ ಚಿಂತಿಸಬೇಕು. ಎಲ್ಲ ಪಕ್ಷಗಳು ಒಂದಾಗಿ ಗಟ್ಟಿ ನಿರ್ಧಾರ ತೆಗೆದುಕೊಳ್ಳಬೇಕಿದೆ.
-ಜೈರಾಮ್ ರಮೇಶ್, ರಾಜ್ಯಸಭಾ ಸದಸ್ಯ