ಕೋಲ್ಕತಾ: ಪಶ್ಚಿಮ ಬಂಗಾಲದ 24 ಪರಗಣ ಜಿಲ್ಲೆಯಲ್ಲಿ ಭುಗಿಲೆದ್ದಿರುವ ಕೋಮು ಹಿಂಸಾಚಾರಕ್ಕೆ ಇನ್ನಷ್ಟೆಉ ಉದ್ವಿಗ್ನ ಗೊಳಿಸುವ ದುರುದ್ದೇಶದೊಂದಿಗೆ ಹಿಂದೂ ಮಹಿಳೆಯೊಬ್ಬಳ ಸೆರಗನ್ನು ದುಷ್ಕರ್ಮಿಗಳು ಸೆಳೆಯುತ್ತಿರುವ ನಕಲಿ ಚಿತ್ರವನ್ನು ಸಾಮಾಜಿಕತಾಣಗಳಲ್ಲಿ ಹರಿಯ ಬಿಟ್ಟ ಆರೋಪದಲ್ಲಿ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.
2014 ರಲ್ಲಿ ಬಿಡುಗಡೆಯಾದ ಔರತ್ ಕಿಲೋನಾ ನಹಿ ಎಂಬ ಚಿತ್ರದ ದೃಶ್ಯವನ್ನು ಹರಿಯಬಿಡಲಾಗಿತ್ತು, ಇದು ಬಂಗಾಲ ಮಾತ್ರವಲ್ಲದೆ ದೇಶಾದ್ಯಂತ ವೈರಲ್ ಆಗಿತ್ತು.
ಚಿತ್ರವನ್ನು ಸಾಮಾಜಿಕ ತಾಣದಲ್ಲಿ ಹರಿಯ ಬಿಟ್ಟ ಹರಿಯಾಣ ಬಿಜೆಪಿ ಘಟಕದ ಸಿಬಂದಿ ವಿಜೇತಾ ಮಾಲಿಕ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಈ ಬಗ್ಗೆ ಸಿಎಂ ಮಮತಾ ಬ್ಯಾನರ್ಜಿ ಕಿಡಿ ಕಾರಿದ್ದು , ಬಿಜೆಪಿ ಮತ್ತು ಆರ್‌ಎಸ್‌ಎಸ್ ಗಲಭೆ ಹುಟ್ಟು ಹಾಕಿದೆ. ಬಂಗಾಲದ ಜನರು ಸುಳ್ಳು ಪೋಟೋಗಳನ್ನು ನಂಬಬೇಡಿ ಎಂದು ಮನವಿ ಮಾಡಿದ್ದಾರೆ.
ಬದುರಿಯಾ ಮತ್ತು ಬಸಿರ್ಹಾಟ್‌ನಲ್ಲಿ ಉಂಟಾಗಿರುವ ಗಲಭೆ 24 ಪರಗಣಕ್ಕೂ ವ್ಯಾಪಿಸಿತ್ತು.
17 ವರ್ಷದ ಯುವಕನೊಬ್ಬ ಪ್ರವಾದಿ ಮಹಮದ್ ಪೈಗಂಬರ್ ಕುರಿತಾಗಿ ಅವಹೇಳನಕಾರಿ ಪೋಸ್ಟ್ ಮಾಡಿದ ಬಳಿಕ ಹಿಂಸೆ ಭುಗಿಲೆದ್ದಿತ್ತು. ಸೋಮವಾರದಿಂದ ಉದ್ವಿಗ್ನಗೊಂಡಿದ್ದ ಪರಿಸ್ಥಿತಿ ಈಗ ಬೂದಿ ಮುಚ್ಚಿದ ಕೆಂಡದಂತಿದೆ.