Advertisement

ಕಾಬೂಲ್‌ ಗುರುದ್ವಾರ ದಾಳಿಕೋರ ಕಾಸರಗೋಡಿನ ಅಬು ಖಾಲಿದ್‌?

09:31 AM Mar 29, 2020 | Hari Prasad |

ಹೊಸದಿಲ್ಲಿ: ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್‌ನಲ್ಲಿರುವ ಗುರುದ್ವಾರದ ಮೇಲೆ ಮೇಲೆ ಮಾ. 25ರಂದು ಆತ್ಮಹತ್ಯಾ ಬಾಂಬ್‌ ದಾಳಿ ನಡೆಸಿದ್ದ ಮೂವರು ಐಸಿಸ್‌ ಉಗ್ರರಲ್ಲಿ ಒಬ್ಬ ಕೇರಳದ ಕಾಸರಗೋಡು ಜಿಲ್ಲೆಗೆ ಸೇರಿದವನಾಗಿದ್ದಾನೆ. ‘ಇಂಡಿಯಾ ಟುಡೇ’ ವರದಿ ಪ್ರಕಾರ ಸಂಘಟನೆಯೇ ಆತನ ಫೋಟೋ ಪ್ರಕಟಿಸಿದೆ. ಆತನ ಹೆಸರನ್ನು ಅಬು ಖಾಲಿದ್‌ ಅಲ್‌-ಹಿಂದ್‌ ಎಂದು ಉಲ್ಲೇಖಿಸಲಾಗಿದೆ.

Advertisement

ಐಸಿಸ್‌ ಪ್ರಕಟಿಸಿರುವ ಫೋಟೋವನ್ನು ನೋಡಿ ಪೊಲೀಸರು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಅವರ ಪ್ರಕಾರ, ಆತನ ನಿಜವಾದ ಹೆಸರು ಮೊಹಮ್ಮದ್‌ ಮುಹ್ಸಿನ್‌ (21), ಈತ ಕೇರಳದ ಕಾಸರಗೋಡಿನವನು ಎಂದು ತಿಳಿಸಿದ್ದಾರೆ.

ತ್ರಿಕ್ಕರಿಪುರದಲ್ಲಿರುವ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಓದುತ್ತಿದ್ದ ಮುಹ್ಸಿನ್‌, ಐಸಿಸ್‌ ಸೇರಿಕೊಂಡಿದ್ದ. ಕಳೆದ ವರ್ಷ ಜೂನ್‌ 18ರಂದು ಅಫ್ಘಾನಿಸ್ತಾನದ ದ ಐಸಿಸ್‌ ನೆಲೆಗಳ ಮೇಲೆ ನಡೆಸಲಾಗಿದ್ದ ವೈಮಾನಿಕ ದಾಳಿಯಲ್ಲಿ ಸಾವನ್ನಪ್ಪಿದ್ದ ಎಂದು ಹೇಳಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next