Advertisement

ತೆರೆಗೆ ಬರಲು ಸಿದ್ಧವಾಯ್ತು ಒಂದು ಶಿಕಾರಿಯ ಕಥೆ

09:53 AM Jan 08, 2020 | Suhan S |

ನಟ ಪ್ರಮೋದ್‌ ಶೆಟ್ಟಿ ಮೊದಲ ಬಾರಿಗೆ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ “ಒಂದು ಶಿಕಾರಿಯ ಕಥೆ’ ಚಿತ್ರ ತೆರೆಗೆ ಬರೋದಕ್ಕೆ ಸಿದ್ಧವಾಗಿದೆ. ಇತ್ತೀಚೆಗೆ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್‌ ಮಂಡಳಿ ಚಿತ್ರಕ್ಕೆ “ಯು/ಎ’ ಪ್ರಮಾಣ ಪತ್ರ ನೀಡಿ, ಬಿಡುಗಡೆಗೆ ಅಸ್ತು ಎಂದಿದೆ.

Advertisement

ಸಸ್ಪೆನ್ಸ್‌, ಥ್ರಿಲ್ಲರ್‌ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ನವ ನಿರ್ದೇಶಕ ಸಚಿನ್‌ ಶೆಟ್ಟಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ಪ್ರಮೋದ್‌ ಶೆಟ್ಟಿ ಅವರೊಂದಿಗೆ, ಸಿರಿ ಪ್ರಹ್ಲಾದ್‌, ಪ್ರಸಾದ್‌ ಚೆರ್ಕಾಡಿ, ಎಂ.ಕೆ ಮಠ, ಅಭಿಮನ್ಯು ಪ್ರಜ್ವಲ್‌, ಶ್ರೀಪ್ರಿಯಾ ಮೊದ ಲಾ ದವರು ಪ್ರಮುಖ ಪಾತ್ರಗಳಲ್ಲಿ ಅಭಿ ನಯಿಸಿದ್ದಾರೆ. ಸದ್ಯ ನಿಧಾನವಾಗಿ ಚಿತ್ರದ ಪ್ರಮೋಶನ್‌ ಕೆಲಸಗಳಿಗೆ ಚಾಲನೆ ನೀಡಿ ರುವ ಚಿತ್ರತಂಡ ಇದೇ ಜನವರಿ ಕೊನೆಗೆ ಅಥವಾ ಫೆಬ್ರವರಿ ವೇಳೆಗೆ ಚಿತ್ರವನ್ನು ತೆರೆಗೆ ತರುವ ಪ್ಲಾನ್‌ ಹಾಕಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next