Advertisement

ಕಾಮಗಾರಿ ಪೂರ್ಣಗೊಂಡ ಬಳಿಕ ದೋಟಿಹಾಳ ಶಾಲೆ ಶತಮಾನೋತ್ಸವ

03:54 PM Dec 10, 2019 | Team Udayavani |

ಕುಷ್ಟಗಿ: ಶತಮಾನೋತ್ಸವದ ಸಂಭ್ರಮದಲ್ಲಿರುವ ತಾಲೂಕಿನ ದೋಟಿಹಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶುದ್ಧ ನೀರಿನ ಘಟಕ, ರಂಗ ಮಂದಿರ, ಸುಸಜ್ಜಿತ ಶೌಚಾಲಯ ಹಾಗೂ ಕಾಂಪೌಂಡ್‌ ಗೋಡೆ ಎತ್ತರಿಸುವ ಕಾಮಗಾರಿಗಳು ಪೂರ್ಣಗೊಂಡ ಬಳಿಕ ಶಾಲಾ ಶತಮಾನೋತ್ಸವ ಆಚರಿಸಲಾಗುವುದು ಮಾಜಿ ಶಾಸಕ, ಶಾಲೆಯ ಹಳೆಯ ವಿದ್ಯಾರ್ಥಿ ಹಸನಸಾಬ್‌ ದೋಟಿಹಾಳ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1905ರಲ್ಲಿ ಸ್ಥಾಪನೆಯಾದ ಈ ಶಾಲೆಗೆ ಸ್ವಾತಂತ್ರ್ಯ ಪೂರ್ವದ ಇತಿಹಾಸವಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ದೇವಸ್ಥಾನ, ಬಾಡಿಗೆ ಕಟ್ಟಡದಲ್ಲಿ ಶಾಲೆ ನಡೆಯುತ್ತಿತ್ತು. ಕಳೆದ 60ಗಳ ಹಿಂದೆ ಯಾವೂದೇ ಸರ್ಕಾರದ ನೆರವು ಇಲ್ಲದೇ ಶಾಲೆ ನಡೆದಿತ್ತು. ಈ ಶಾಲೆಗೆ ಮಾರ್ಕಂಡೆಪ್ಪ ಕಾಳಗಿ ಭೂದಾನ ಮಾಡಿದ್ದಾರೆ. ಸದ್ಯ ಶಾಲೆಯಲ್ಲಿ 500ಕ್ಕೂ ಅಧಿ ಕ ವಿದ್ಯಾರ್ಥಿಗಳಿದ್ದು, ಶತಮಾನೋತ್ಸವ ಸಮಾರಂಭವನ್ನು 2020 ಏಪ್ರೀಲ್‌ ತಿಂಗಳಿನಲ್ಲಿಯೇ ನಡೆಸಿ ಅವಿಸ್ಮರಣೀಯಗೊಳಿಸಲು ಇಚ್ಚಿಸಿದ್ದು, ಈ ಸಮಾರಂಭಕ್ಕೆ ರಾಜ್ಯಪಾಲರು, ಶಿಕ್ಷಣ ಸಚಿವರನ್ನು ಕರೆಸಲು ಉದ್ದೇಶಿಸಲಾಗಿದೆ ಎಂದರು.

ಶತಮಾನೋತ್ಸವದ ಆಚರಣೆ ಹಿನ್ನೆಲೆಯಲ್ಲಿ ಸರ್ಕಾರದಿಂದ 2.50 ಲಕ್ಷ ರೂ. ಬಿಡುಗಡೆಯಾಗಿದ್ದು, ಶಾಸಕ ಅಮರೇಗೌಡ ಪಾಟೀಲ ಬಯ್ನಾಪೂರ ಅಧ್ಯಕ್ಷತೆಯಲ್ಲಿ ಈಗಾಗಲೇ ಪೂರ್ವಭಾವಿ ಸಭೆ ನಡೆಸಲಾಗಿದೆ. ಶಾಲೆಗೆ ಕೊಠಡಿ ಸಮಸ್ಯೆ ಇಲ್ಲ, ಈಗಾಗಲೇ 6 ಕೊಠಡಿಗಳನ್ನು ಈಚೆಗೆ ಉದ್ಘಾಟಿಸಿರುವುದಾಗಿ ತಿಳಿಸಿದರು.

ಈ ವೇಳೆ ಗ್ರಾಪಂ ಅಧ್ಯಕ್ಷ ಗೌಸುಸಾಬ್‌ ಕೊಣ್ಣುರು, ಎಸ್‌ಡಿಎಂಸಿ ಅಧ್ಯಕ್ಷ ಶ್ರೀನಿವಾಸ , ಮುಖ್ಯ ಶಿಕ್ಷಕ ಸಿದ್ರಾಮಪ್ಪ ಅಮರಾವತಿ, ಗ್ರಾಪಂ ಸದಸ್ಯ ರಾಜೇಸಾಬ್‌ ಯಲಬುರ್ಗಿ, ಅಜ್ಮಿರಸಾಬ್‌, ಅಮರೇಶ ಮಾಳಗಿ, ಸಿಆರ್‌ಪಿ ಎಂ. ಗಂಗಾಧರ, ಅಮರೇಶ ಮಾಳಗಿ, ಅಲ್ಲಾಸಾಬ್‌ ಮತ್ತಿತರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next