Advertisement
ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಆಳಸಮುದ್ರ, ಪಸೀìನ್, ತ್ರಿಸೆವೆಂಟಿ, ಸಣ್ಣ ಟ್ರಾಲ್‌ಬೋಟ್‌ಗಳು ಸೇರಿದಂತೆ ಈಗಾಗಲೇ ಶೇ. 85 ರಷ್ಟು ದೋಣಿಗಳು ದಡ ಸೇರಿದ್ದು ಶೇ. 15ರಷ್ಟು ದೋಣಿಗಳು ಮಾತ್ರ ಮೀನುಗಾರಿಕೆ ಮುಗಿಸಿ ಇನ್ನಷ್ಟೇ ದಡ ಸೇರಲಿವೆ.
ಈ ಬಾರಿ ಋತು ಆರಂಭದಿಂದ ಅಂತ್ಯದವರೆಗೂ ಒಂದಲ್ಲ ಒಂದು ಸಮಸ್ಯೆ ಯಿಂದಾಗಿ ನಿರೀಕ್ಷೆಯಷ್ಟು ಮೀನುಗಾರಿಕೆ ನಡೆದಿಲ್ಲ. ಆರಂಭದ ದಿನದಲ್ಲಿ ತೂಫಾನ್‌ನಿಂದಾಗಿ ಕೆಲ ಸಮಯ ಕಡಲಿಗಿಳಿಯುವುದಕ್ಕೆ ಸಾಧ್ಯವಾಗಿಲ್ಲ. ಮಧ್ಯೆ ಮಧ್ಯೆ ಓಖೀ, ಗಜ, ಫೋನಿ ಚಂಡಮಾರುತದಿಂದಲೂ ಹಿನ್ನಡೆಯಾಗಿತ್ತು. ಮೀನುಗಾರಿಕೆಯನೇ° ತಲ್ಲಣಗೊಳಿಸಿ ಸುವರ್ಣ ತ್ರಿಭುಜ ಬೋಟ್ ನಾಪತ್ತೆ ಪ್ರಕರಣ, ಬುಲ್‌ಟ್ರಾಲ್ ಮತ್ತು ಬೆಳಕು ಕೇಂದ್ರಿತ ಮೀನುಗಾರಿಕೆ ಸಮಸ್ಯೆಗಳಿಂದಾಗಿ ತಿಂಗಳುಗಳ ಕಾಲ ಮೀನುಗಾರಿಕೆ ನಡೆಯದೇ ಬೋಟ್‌ಗಳನ್ನು ದಡದಲ್ಲೇ ನಿಲ್ಲಿಸಿ ಕಾಲ ಕಳೆಯುವಂತಾಗಿತ್ತು. ಋತು ಅಂತ್ಯದ ವೇಳೆಯೂ ಮೀನು ಕೊರತೆ ತೀವ್ರವಾಗಿ ಮುಂದುವರಿದಿದ್ದು ಮೀನುಗಾರಿಕೆ ಉದ್ಯಮಕ್ಕೆ ಭಾರೀ ಹೊಡೆತ ಉಂಟಾಗಿತ್ತು.
Related Articles
ಪಸೀìನ್ ಬೋಟುಗಳು ಬೆಳಕು ಹಾಯಿಸಿ ನಡೆಸುವ ಮೀನುಗಾರಿಕೆ ಸರಕಾರ ನಿಷೇಧ ಹೇರಿದ್ದ ಹಿನ್ನೆಲೆಯಲ್ಲಿ ಮಲ್ಪೆ ಬಂದರಿನಲ್ಲಿ ಶೇ. 70ರಷ್ಟು ಬೋಟುಗಳು 5 ತಿಂಗಳ ಹಿಂದೆಯೇ ಸ್ಥಗಿತಗೊಳಿಸಿದರೆ, ಉಳಿದವುಗಳು ಎರಡೂವರೆ ತಿಂಗಳ ಹಿಂದೆಯೇ ದಡ ಸೇರಿದೆ. ಆದಾಯಕ್ಕಿಂತ ವೆಚ್ಚವೇ ಜಾಸ್ತಿಯಾಗಿದೆ. ಬೇಗನೇ ಮೀನುಗಾರಿಕೆ ಸ್ಥಗಿತಗೊಂಡಿದ್ದರಿಂದ ಹೊರ ರಾಜ್ಯದ ಮೀನುಗಾರರಲ್ಲದೆ ಸ್ಥಳೀಯ ಮೀನುಗಾರರಿಗೂ ಕೆಲಸ ಇಲ್ಲದಂತಾಗಿತ್ತು ಎನ್ನುತ್ತಾರೆ ಪಸೀìನ್ ಮೀನುಗಾರ ಸಂಘದ ಕಾರ್ಯದರ್ಶಿ ಕೃಷ್ಣ ಎಸ್. ಸುವರ್ಣ.
Advertisement
ಸ್ಥಳಾವಕಾಶದ ಸಮಸ್ಯೆಮಲ್ಪೆ ಬಂದರಿನ 1200 ಆಳ ಸಮುದ್ರ, 160 ಪರ್ಸಿನ್, 400 ತ್ರಿಸೆವೆಂಟಿ ಸೇರಿದಂತೆ ಇತರ ಸಣ್ಣಗಾತ್ರದ ಬೋಟುಗಳು ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳು ತ್ತದೆ. ಮಲ್ಪೆ ಬಂದರಿನಲ್ಲಿ ಈಗಿರುವ ಬೋಟ್‌ಗಳಿಗೆ ಲಂಗರು ಹಾಕಲು ಸ್ಥಳಾವಕಾಶದ ಕೊರತೆ ಉಂಟಾಗಿದೆ. ಕಾನೂನು ಉಲ್ಲಂಘಿಸಿದರೆ ದಂಡನೆ
ಉಡುಪಿ ಜಿಲ್ಲೆಯ ಕರಾವಳಿಯಲ್ಲಿ ಜೂ. 1ರಿಂದ ಜು. 31ರ ವರೆಗೆ ಯಾಂತ್ರೀಕೃತ ಮೀನುಗಾರಿಕೆ ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಎಲ್ಲ ಮೀನುಗಾರರು ಕಡ್ಡಾಯವಾಗಿ ಸರಕಾರದ ಆದೇಶವನ್ನು ಪಾಲಿಸಬೇಕಾಗಿದೆ. ಕಾನೂನು ಉಲ್ಲಂಘಿಸಿದರೆ ದಂಡನೆಗೆ ಹೊಣೆಯಾಗುತ್ತಾರೆ. ನಾಡದೋಣಿಗಳು 10 ಅಶ್ವಶಕ್ತಿ ಎಂಜಿನ್ ಬಳಸಿ ಮೀನುಗಾರಿಕೆ ನಡೆಸಲು ಅವಕಾಶ ಇದೆ.
-ಪಾರ್ಶ್ವನಾಥ್, ಉಪ ನಿರ್ದೇಶಕರು, ಮೀನುಗಾರಿಕಾ ಇಲಾಖೆ ಆದಾಯಕ್ಕಿಂತ ಖರ್ಚು ಹೆಚ್ಚುc
ಮೀನಿನ ಕೊರತೆಯಿಂದ ಯಾವುದೇ ರೀತಿಯ ಲಾಭವಾಗಿಲ್ಲ. ಆದಾಯಕ್ಕಿಂತ ಖರ್ಚು ಹೆಚ್ಚಾಗಿದ್ದರಿಂದ ಬೋಟನ್ನು ಬೇಗ ದಡ ಸೇರಿಸುವಂತಾಯಿತು. ಗಟ್ಟಿ ಮನಸ್ಸು ಮಾಡಿ ಕಡಲಿಗಿಳಿಯುವ ಸಾಹಸ ತೋರಿ ಮೀನುಗಾರಿಕೆ ಇಳಿದರೆ ಮೀನು ಸಿಗದೆ ಒಂದಷ್ಟು ಡೀಸೆಲ್ ಖರ್ಚು ಮಾಡಿ ದಡ ಸೇರಬೇಕಾದ ಪರಿಸ್ಥಿತಿ ಉಂಟಾಗಿದೆ.
-ಕೃಷ್ಣಪ್ಪ ಕರ್ಕೇರ, ಮಲ್ಪೆ, ಸ್ಥಳೀಯ ಮೀನುಗಾರರು ಮೀನಿನ ಪ್ರಮಾಣ ಕಡಿಮೆ
ಶೇ. 10-15ರಷ್ಟು ಬೋಟುಗಳು ಸಮುದ್ರದಲ್ಲಿವೆೆ. ಮೇ 31ರ ಒಳಗೆ ದಡ ಸೇರಲಿವೆೆ. ಮೀನು ಖಾಲಿ ಮಾಡಲು ಜೂ. 3ರ ವರೆಗೆ ಅವಕಾಶ ನೀಡಲಾಗಿದೆ. ಈ ಬಾರಿ ಸಿಕ್ಕ ಮೀನಿನ ಪ್ರಮಾಣ ಕಡಿಮೆ, ಮೀನಿನ ಧಾರಣೆಯಿಂದಾಗಿ ಸಿಕ್ಕಿದ ಮೀನಿಗೆ ಆದಾಯ ಬಂದಿದ್ದರೂ ಡೀಸೆಲ್ ದರ ಏರಿಕೆಯಿಂದಾಗಿ ಆದಾಯಕ್ಕಿಂತ ಖರ್ಚು ಹೆಚ್ಚಾಗಿ ದೋಣಿ ಮಾಲಕರು ನಷ್ಟ ಅನುಭವಿಸಿದ್ದಾರೆ
– ಸತೀಶ್ ಕುಂದರ್, ಅಧ್ಯಕ್ಷರು, ಮಲ್ಪೆ ಮೀನುಗಾರರ ಸಂಘ ಪ್ರತಿ ಪ್ರಯಾಣದಲ್ಲೂ ನಷ್ಟ ತಪ್ಪಿದ್ದಲ್ಲ
ಒಂದೆಡೆ ಮೀನಿನ ಕ್ಷಾಮ, ಇನ್ನೊಂದೆಡೆ ವಿವಿಧ ಕಾರಣಕ್ಕೆ ಆಗಾಗ ಬಂದ್ ಕರೆ ನೀಡಿದ್ದರಿಂದ ಮೀನುಗಾರರಾದ ನಮಗೆ ಬಹಳಷ್ಟು ಹೊಡೆತ ಬಿದ್ದಿದೆ. 10ರಿಂದ 12 ದಿನಗಳ ವರೆಗೆ ನಡೆಯುವ ಆಳ ಸಮುದ್ರ ಮೀನುಗಾರಿಕೆಗೆ 6 ಲಕ್ಷ ರೂಪಾಯಿ ಅಧಿಕ ಮೌಲ್ಯದ ಮೀನು ದೊರೆತರೆ ಮಾತ್ರ ಲಾಭ. ಇಲ್ಲವಾದರೇ ಪ್ರತಿ ಪ್ರಯಾಣದಲ್ಲೂ ನಷ್ಟವೇ ಹೆಚ್ಚಾಗುತ್ತದೆ.
-ಶೇಖರ್ ಜಿ. ಕೋಟ್ಯಾನ್, ಬೋಟ್ ಮಾಲಕರು – ನಟರಾಜ್ ಮಲ್ಪೆ