Advertisement

Jayam Ravi ಕುರ್ಚಿಯಲ್ಲಿ ಕುಳಿತುಕೊಂಡು ನಿದ್ರಿಸುತ್ತಿರುವ ಫೋಟೋ ವೈರಲ್‌

10:34 PM May 01, 2023 | Team Udayavani |

ನವದೆಹಲಿ: ನಟಿ ಶೋಭಿತಾ ಧುಲಿಪಲಾ ನಟಿಸಿರುವ ಪೊನ್ನಿಯಿನ್‌ ಸೆಲ್ವನ್‌ ಸಿನಿಮಾದ 2ನೇ ಭಾಗ ಇತ್ತೀಚೆಗೆ ಬಿಡುಗಡೆಯಾಗಿದೆ. ವಿಶ್ವಾದ್ಯಂತ 100 ಕೋಟಿ ರೂ. ಗಳಿಕೆ ಮಾಡಿ ಮುನ್ನುಗ್ಗುತ್ತಿದೆ.

Advertisement

ಇಂತಹ ಹೊತ್ತಿನಲ್ಲಿ ವಾನತಿಯಾಗಿ ಕಾಣಿಸಿಕೊಂಡಿರುವ ಶೋಭಿತಾ ಕೆಲವು ಚಿತ್ರಗಳನ್ನು ಇನ್ಸಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಪೊನ್ನಿಯಿನ್‌ ಸೆಲ್ವನ್‌ ಆಗಿ ನಟಿಸಿರುವ ಜಯಂ ರವಿ ಕುರ್ಚಿಯಲ್ಲಿ ಕುಳಿತುಕೊಂಡು ನಿದ್ರಿಸುತ್ತಿರುವ ಫೋಟೋ ಈಗ ವೈರಲ್‌ ಆಗಿದೆ.

ಅವರು ಇನ್ನೊಬ್ಬ ನಟಿಯೊಂದಿಗೆ ನರ್ತನದ ಅಭ್ಯಾಸ ಮಾಡುತ್ತಿರುವುದು ಕಾಣುತ್ತದೆ. ಈ ಚಿತ್ರಗಳನ್ನು ಪ್ರಕಟಿಸಿ, ತಮಗೆ ಇಂತಹದ್ದೊಂದು ಅಮೂಲ್ಯ ಅವಕಾಶ ನೀಡಿದ್ದಕ್ಕಾಗಿ ಚಿತ್ರತಂಡಕ್ಕೆ ಧನ್ಯವಾದ ಅರ್ಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next