ನವದೆಹಲಿ: ಚಾಬಹಾರ್ ಬಂದರನ್ನು ಹತ್ತು ವರ್ಷಗಳ ಕಾಲ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಭಾರತ ಇರಾನ್ ಜತೆ ಹತ್ತು ವರ್ಷಗಳ ಕಾಲ ಒಪ್ಪಂದ ಮಾಡಿಕೊಂಡ ಬೆನ್ನಲ್ಲೇ ಅಮೆರಿಕ ತೀವ್ರ ಆಕ್ಷೇಪ ಎತ್ತಿ ದಿಗ್ಬಂಧನ ಎದುರಿಸುವ ಎಚ್ಚರಿಕೆ ನೀಡಿದ್ದು, ಇದಕ್ಕೆ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್, ಈ ಯೋಜನೆಯಿಂದ ಎಲ್ಲಾ ಪ್ರದೇಶಕ್ಕೂ ಲಾಭವಾಗಲಿದೆ. ಯಾರು ಈ ಒಪ್ಪಂದದ ಬಗ್ಗೆ ಟೀಕೆ ವ್ಯಕ್ತಪಡಿಸುತ್ತಾರೋ ಅವರು ಸಂಕುಚಿತ ದೃಷ್ಟಿಕೋನ ಹೊಂದಿರಬಾರದು ಎಂದು ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ:Hubli: ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಯ ಭೀಕರ ಹತ್ಯೆ!
ಇರಾನ್ ರಹಸ್ಯವಾಗಿ ಅಣ್ವಸ್ತ್ರ ಯೋಜನೆ ನಡೆಸುತ್ತಿದೆ ಎಂದು ದೂರುತ್ತಲೇ ಬಂದಿರುವ ಅಮೆರಿಕ, ಆ ದೇಶದ ಮೇಲೆ ಹಲವು ದಿಗ್ಬಂಧನಗಳನ್ನು ವಿಧಿಸಿದೆ. ಇಂತಹ ಸಂದರ್ಭದಲ್ಲೇ ಇರಾನ್ ಜತೆ ಭಾರ ಒಪ್ಪಂದ ಮಾಡಿಕೊಂಡಿರುವುದು ಅಮೆರಿಕದ ಆಕ್ರೋಶಕ್ಕೆ ಕಾರಣವಾಗಿದೆ.
ಚಾಬಹಾರ್ ಬಂದರಿಗೆ ಸಂಬಂಧಿಸಿದಂತೆ ಇರಾನ್ ಜತೆ ಒಪ್ಪಂದ ಮಾಡಿಕೊಂಡಿರುವುದಕ್ಕೆ ಕೆಲವೊಂದು ಆಕ್ಷೇಪಗಳನ್ನು ನಾನೂ ಗಮನಿಸಿದ್ದೇನೆ. ನಿಜಕ್ಕೂ ಈ ಯೋಜನೆಯಿಂದ ಪ್ರತಿಯೊಬ್ಬರಿಗೂ ಅನುಕೂಲವಾಗಲಿದೆ. ಆದರೆ ಜನರು ಈ ಬಗ್ಗೆ ಸಂಕುಚಿತ ದೃಷ್ಟಿಕೋನ ಹೊಂದಿರುತ್ತಾರೆ ಎಂಬುದನ್ನು ನಾನು ಒಪ್ಪುವುದಿಲ್ಲ. ಈ ಹಿಂದೆಯೂ ಚಾಬಹಾರ್ ಬಂದರು ಬಗ್ಗೆ ಅಮೆರಿಕದ ನಡವಳಿಕೆ ಹೇಗಿತ್ತು? ಚಾಬಹಾರ್ ಬಂದರಿನ ಪ್ರಸ್ತುತ ಅಗತ್ಯತೆಯ ಬಗ್ಗೆ ಅಮೆರಿಕ ಪ್ರಶಂಶಿಸಬೇಕು, ಈ ಬಗ್ಗೆ ನಾವು ಕಾರ್ಯಪ್ರವೃತ್ತರಾಗುವುದಾಗಿ ಎಸ್.ಜೈಶಂಕರ್ ತಿಳಿಸಿದ್ದಾರೆ.
ಇರಾನ್ ಜತೆಗಿನ ಯೋಜನೆ ಬಗ್ಗೆ ಭಾರತ ದೀರ್ಘಕಾಲದ ಸಂಬಂಧವನ್ನು ಹೊಂದಿದೆ. ಆದರೆ ದೀರ್ಘಕಾಲದ ಒಪ್ಪಂದಕ್ಕೆ ಸಹಿ ಹಾಕಲು ಸಾಧ್ಯವಾಗಿರಲಿಲ್ಲವಾಗಿತ್ತು. ಇದೀಗ ಸಮಸ್ಯೆಯನ್ನು ಬಗೆಹರಿಸಿಕೊಂಡ ಬಳಿಕ ದೀರ್ಘಕಾಲದ ಒಪ್ಪಂದಕ್ಕೆ ಭಾರತ ಮತ್ತು ಇರಾನ್ ಸಹಿ ಹಾಕಿರುವುದಾಗಿ ಜೈಶಂಕರ್ ಮಾಹಿತಿ ನೀಡಿದ್ದಾರೆ.