ನವದೆಹಲಿ: ಕೇಂದ್ರ ಸರ್ಕಾರವು ಆರ್‌ಬಿಐ ಮೀಸಲು ನಿಧಿಯಿಂದ 1.76 ಲಕ್ಷ ಕೋಟಿ ರೂ. ಪಡೆದಿರುವ ಬಗ್ಗೆ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.
ಭಾರತೀಯ ರಿಸರ್ವ್ ಬ್ಯಾಂಕ್‌ನ ಹಣ ಕದಿಯುವುದರಿಂದ ಏನೂ ಸಾಧಿಸಿದಂತೆ ಆಗುವುದಿಲ್ಲ. ಪ್ರಧಾನಮಂತ್ರಿ ಮತ್ತು ವಿತ್ತ ಸಚಿವರಿಗೆ ಸ್ವಯಂಕೃತವಾಗಿ ಸೃಷ್ಟಿಸಿಕೊಂಡ ಆರ್ಥಿಕ ವಿಕೋಪದ ಬಗ್ಗೆ ಅರಿವು ಇಲ್ಲ ಎಂದು ಸರಣಿ ಟ್ವೀಟ್ ಮೂಲಕ ಟೀಕಿಸಿದ್ದಾರೆ. ‘1.76 ಲಕ್ಷ ಕೋಟಿ ರೂ. ಮೊತ್ತವನ್ನು ಪಡೆದಿರುವುದು ಹೇಗಿದೆ ಎಂದರೆ ಗುಂಡೇಟು ತಗುಲಿದ ಭಾಗಕ್ಕೆ, ಔಷಧ ಮಳಿಗೆಯಿಂದ ಬ್ಯಾಂಡ್ ಏಯ್ಡ ಕದ್ದು ಹಾಕಿಕೊಂಡಂತಾಗಿದೆ’ ಎಂದು ರಾಹುಲ್ ‘ಆರ್‌ಬಿಐ ಲೂಟಿಂಗ್’ ಎಂಬ ಹ್ಯಾಶ್‌ಟ್ಯಾಗ್‌ನಡಿಯಲ್ಲಿ ಬರೆದುಕೊಂಡಿದ್ದಾರೆ. ಇದೇ ವೇಳೆ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲ ಟ್ವೀಟ್ ಮಾಡಿ, ‘ಈ ಬೆಳವಣಿಗೆ ವಿತ್ತೀಯ ವಿವೇಕವೇ ಅಥವಾ ವಿತ್ತೀಯ ಹರಾಕಿರಿಯೇ?’ ಎಂದು ಪ್ರಶ್ನಿಸಿದ್ದಾರೆ.
ನಿರ್ಮಲಾ ತಿರುಗೇಟು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್‌ಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿರುಗೇಟು ನೀಡಿದ್ದು, ‘ಕಾಂಗ್ರೆಸ್ ಕಳ್ಳತನದಲ್ಲಿಪರಿಣತಿ ಪಡೆದಿದೆ. ರಾಹುಲ್ ಗಾಂಧಿ ‘ಕಳ್ಳ’ ಎಂದು ಆರೋಪಿಸುತ್ತಾರೆ ಎಂದು ನಾನೂ ಅದೇ ಪದ ಪ್ರಯೋಗ ಮಾಡು ವುದಿಲ್ಲ. ಅವರು ಅದೇ ಶಬ್ದಕ್ಕೆ ಅಂಟಿಕೊಂಡಿದ್ದಾರೆ ಮತ್ತು ಅದರ ಬಳಕೆಯಲ್ಲಿ ಪರಿಣಿತರಿ ದ್ದಾರೆ. ಆರ್‌ಬಿಐನ ಗೌರವವನ್ನು ಹಾಳು ಮಾಡಬಾರದು’ ಎಂದು ಹೇಳಿದ್ದಾರೆ.
ಆ ಪದ ಬಳಕೆ ಮಾಡಿದ್ದಕ್ಕೆ ದೇಶದ ಜನರೇ ಸರಿಯಾದ ಶಾಸ್ತಿ ಮಾಡಿದ್ದರೂ, ಮತ್ತೇಕೆ ಅದನ್ನೇ ಹೇಳುತ್ತಿದ್ದಾರೆ ಎಂದು ವಿತ್ತ ಸಚಿವೆ ಪ್ರಶ್ನಿಸಿದ್ದಾರೆ.
ಆರ್‌ಬಿಐ ನೇಮಕ ಮಾಡಿದ ಸಮಿತಿಯೇ 1.76 ಲಕ್ಷ ಕೋಟಿ ರೂ. ನೀಡುವುದಕ್ಕೆ ಸಮ್ಮತಿ ನೀಡಿರುವಾಗ, ಅದನ್ನೇಕೆ ಪ್ರಶ್ನಿಸುತ್ತಿಲ್ಲ ಎಂದೂ ನಿರ್ಮಲಾ ಕೇಳಿದ್ದಾರೆ.