ಲಕ್ನೋ:ಕರ್ತವ್ಯ ನಿರತ ಕಾನ್ಸ್ ಸ್ಟೇಬಲ್ ಕೋರ್ಟ್ ಆವರಣದಲ್ಲಿ ನೇಣಿಗೆಗೆ ಶರಣಾಗಿರುವ ಘಟನೆ ಶುಕ್ರವಾರ ಉತ್ತರಪ್ರದೇಶದ ಛಿಬ್ರಮೌ ತೆಹಸಿಲ್ ನಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕಾನ್ಸ್ ಟೇಬಲ್ ವಿಷ್ಣು ಅವರನ್ನು ಛಿಬ್ರಮೌ ಕೋರ್ಟ್ ನಲ್ಲಿ ಕರ್ತವ್ಯ ನಿರ್ವಹಿಸಲು ನಿಯೋಜಿಸಲಾಗಿತ್ತು. ಪ್ರತಿದಿನ ಕರ್ತವ್ಯಕ್ಕೆ ಹಾಜರಾಗುವ ಅವರು ಮೊಬೈಲ್ ನಲ್ಲಿ ಸ್ವಲ್ಪ ಸಮಯ ಮಾತನಾಡಿದ್ದರು.
ಆದರೆ ಶುಕ್ರವಾರ 10 ಗಂಟೆಯ ನಂತರ ವಿಷ್ಣು ಕೋರ್ಟ್ ಆವರಣದ ಹಿಂಭಾಗದ ಮರಕ್ಕೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿರುವುದು ಕಂಡು ಬಂದಿತ್ತು ಎಂದು ಛಿಬ್ರಮೌ ಸರ್ಕಲ್ ಇನ್ಸ್ ಪೆಕ್ಟರ್ ದೀಪಕ್ ದುಬೆ ತಿಳಿಸಿದ್ದಾರೆ.
ಶವವನ್ನು ಕೆಳಗಿಳಿಸಿದ ನಂತರ ವಿಷ್ಣು ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಾಗಿತ್ತು. ಕಾನ್ಸ್ ಟೇಬಲ್ ಈ ನಿರ್ಧಾರಕ್ಕೆ ಬರಲು ಕಾರಣವೇನು ಎಂಬುದು ಇನ್ನಷ್ಟೇ ತಿಳಿದು ಬರಬೇಕಾಗಿದೆ ಎಂದು ದುಬೆ ತಿಳಿಸಿದ್ದಾರೆ.
ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ನಂತರ ತನಿಖೆಗೆ ಸಹಾಯಕವಾಗಲಿದೆ. ವಿಷ್ಣು ಮಥುರಾ ನಿವಾಸಿಯಾಗಿದ್ದು, ಕಳೆದ ಐದು ತಿಂಗಳ ಹಿಂದಷ್ಟೇ ವಿವಾಹವಾಗಿದ್ದರು ಎಂದು ವರದಿ ವಿವರಿಸಿದೆ.