Advertisement
ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಆರೋಗ್ಯ ಸಚಿವ ಡಾ| ಸುಧಾಕರ್ ಬೂಸ್ಟರ್ ಡೋಸ್ ಬಗ್ಗೆ ಪ್ರತಿಪಾದಿಸುತ್ತಿದ್ದಾರೆ. ರಾಜ್ಯದ ಪ್ರಖ್ಯಾತ ವೈದ್ಯರೂ ಇದಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ.
ಮೂರನೇ ಅಲೆ ಭೀತಿಯ ಹಿನ್ನೆಲೆಯಲ್ಲಿ ಆರೋಗ್ಯ ,ಮುಂಚೂಣಿ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ನೀಡಬಹುದೇ ಎಂಬ ಯೋಚನೆ ಇದೆ. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಮನಸುಖ ಮಾಂಡವೀಯ ಜತೆ ಚರ್ಚಿಸಲಾಗುವುದು ಎಂದು ಹುಬ್ಬಳ್ಳಿಯಲ್ಲಿ ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಗುರುವಾರ ಸಿಎಂ ಹೊಸದಿಲ್ಲಿಗೆ ತೆರಳ ಲಿದ್ದು, ಕೇಂದ್ರ ಸಚಿವ ಮಾಂಡವೀಯ ಜತೆ ಮಾತುಕತೆ ನಡೆಸುವ ಸಾಧ್ಯತೆ ಇದೆ. ಹೊಸ ರೂಪಾಂತರಿ ಆತಂಕ ನಿವಾರಿಸಲು ಮತ್ತು ಸಂಭಾವ್ಯ ಪರಿಸ್ಥಿತಿ ಎದುರಿಸಲು ಮುನ್ನಚ್ಚರಿಕೆ ಕ್ರಮಗಳ ಬಗ್ಗೆ ಸಚಿವರಿಗೆ ಮನವರಿಕೆ ಮಾಡಿಕೊಡಲಿದ್ದಾರೆ.
Related Articles
Advertisement
ಇದನ್ನೂ ಓದಿ:ವೃದ್ಧರೇ ಅಂತರಾಷ್ಟ್ರೀಯ ಪ್ರಯಾಣ ಮುಂದೂಡಿ : ವಿಶ್ವ ಆರೋಗ್ಯ ಸಂಸ್ಥೆಯಿಂದಲೇ ಎಚ್ಚರಿಕೆ
ಎಲ್ಲೆಲ್ಲಿ ಬೂಸ್ಟರ್ ಡೋಸ್?ಒಮಿಕ್ರಾನ್ ರೂಪಾಂತರಿ ಆತಂಕದಿಂದಾಗಿ ಹಲವು ರಾಷ್ಟ್ರಗಳಲ್ಲಿ ಬೂಸ್ಟರ್ ಡೋಸ್ ನೀಡಲು ತೀರ್ಮಾನಿ ಸಲಾಗಿದೆ. ಇಸ್ರೇಲ್, ಕೆನಡಾ, ಬ್ರೆಜಿಲ್, ಬ್ರಿಟನ್, ಹಂಗೆರಿಯಲ್ಲಿ ಮೊದಲ ಬಾರಿಗೆ ಬೂಸ್ಟರ್ ಡೋಸ್ ನೀಡಲು ತೀರ್ಮಾನಿಸಲಾಗಿತ್ತು. ಫ್ರಾನ್ಸ್‌ನಲ್ಲಿ ಕಳೆದ ವಾರ ಈ ಬಗ್ಗೆ ತೀರ್ಮಾನಿಸಲಾಗಿದೆ. ಯುಎಇಯಲ್ಲಿ 3ನೇ ಡೋಸ್ ಲಸಿಕೆ ಹಾಕಲು ಮೇ ತಿಂಗಳಲ್ಲಿಯೇ ನಿರ್ಧರಿಸಲಾಗಿತ್ತು. ಚೀನ, ದಕ್ಷಿಣ ಕೊರಿಯಾಗಳಲ್ಲಿ ಮೂರನೇ ಡೋಸ್ ವಿತರಣೆ ಆರಂಭವಾಗಿದೆ. ಮುಂಚೂಣಿ ಕಾರ್ಯಕರ್ತರಿಗೆ ಎರಡು ಡೋಸ್ ಲಸಿಕೆ ನೀಡಿ ಆರೆಂಟು ತಿಂಗಳುಗಳಾಗಿವೆ. ಈಗ ಲಸಿಕೆಯ ಸಾಮರ್ಥ್ಯ ಕಡಿಮೆ ಆಗಿರುವ ಸಾಧ್ಯತೆ ಇದೆ. ಈ ಮಧ್ಯೆ ಬೇರೆ ಬೇರೆ ರೂಪಾಂತರಿಗಳು ಕಂಡುಬರುತ್ತಿವೆ. ಈ ಹಿನ್ನೆಲೆಯಲ್ಲಿ ಬೂಸ್ಟರ್ ಡೋಸ್ ಅವಶ್ಯ.
-ಡಾ| ಸುದರ್ಶನ ಬಲ್ಲಾಳ್, ಮಣಿಪಾಲ್ ಆಸ್ಪತ್ರೆಗಳ ಅಧ್ಯಕ್ಷ ಬೂಸ್ಟರ್ ಡೋಸ್ ಪ್ರಸ್ತುತ ನೀಡುತ್ತಿರುವ ಕೋವಿಡ್ ಲಸಿಕೆಯ ಮುಂದುವರಿದ ಭಾಗ. ಹಾಗಾಗಿ ಈ ಹಿಂದೆ ಲಸಿಕೆ ನೀಡಿದ ಮಾದರಿಯಲ್ಲೇ ಈಗ ಮತ್ತೂಂದು ಹಂತದಲ್ಲಿ ಆರಂಭವಾಗಲಿದೆ. ಇದನ್ನು ಆದ್ಯತೆ ಮೇರೆಗೆ ನೀಡಲಾಗುತ್ತದೆ.
-ಡಾ| ಎಂ.ಕೆ. ಸುದರ್ಶನ್,ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಆರೋಗ್ಯ ಮುಂಚೂಣಿ ಕಾರ್ಯಕರ್ತರು ಲಸಿಕೆ ಪಡೆದಿದ್ದುದರಿಂದ 2ನೇ ಅಲೆಯ ಸಂದರ್ಭದಲ್ಲಿ ಅವರು ಸೋಂಕಿಗೆ ತುತ್ತಾಗಿ ಮೃತಪಟ್ಟಿರುವುದು ಕಡಿಮೆ. ಡಿಸೆಂಬರ್, ಜನವರಿ ಅಂತ್ಯದೊಳಗೆ ಅವರಿಗೆ ಬೂಸ್ಟರ್ ಲಸಿಕೆ ವಿತರಣೆಯಾಗಬೇಕು.
-ಡಾ| ಸಿ.ಎನ್. ಮಂಜುನಾಥ, ಜಯದೇವ ಆಸ್ಪತ್ರೆ ನಿರ್ದೇಶಕರು