ವಾಷಿಂಗ್ಟನ್: ಆತ ಅಮೆರಿಕದಲ್ಲಿ ಎಂಬಿಎ ಕಲಿಯುತ್ತಿದ್ದ ಭಾರತೀಯ ವಿದ್ಯಾರ್ಥಿ, ವಿದ್ಯೆಯ ಜೊತೆ ಕೆಲಸವನ್ನೂ ಮಾಡುತ್ತಿದ್ದ ಈ ವೇಳೆ ಅಲ್ಲಿ ಓರ್ವ ಭಿಕಾರಿಗೆ ಊಟ ನೀಡುವ ಮೂಲಕ ಸಹಾಯವನ್ನೂ ಮಾಡುತ್ತಿದ್ದ, ಆದರೆ ಇದೇ ಭಿಕಾರಿಯಿಂದ ಭಾರತೀಯ ವಿದ್ಯಾರ್ಥಿಯ ಭೀಕರ ಹತ್ಯೆ ನಡೆದಿರುವುದು ಬೇಸರದ ಸಂಗತಿ.
ಹೌದು ವಿವೇಕ್ ಸೈನಿ(25) ಎಂಬ ಭಾರತೀಯ ವಿದ್ಯಾರ್ಥಿ ಅಮೆರಿಕದ ಜಾರ್ಜಿಯಾದಲ್ಲಿ ಎಂಬಿಎ ಕಲಿಯುತ್ತಿದ್ದ ಈತ ಬಿಡುವಿನ ವೇಳೆ ಅಲ್ಲೇ ಇರುವ ಅಂಗಡಿಯೊಂದರಲ್ಲಿ ಕೆಲಸಕ್ಕೆ ಮಾಡುತ್ತಿದ್ದ ಅದೇ ಸಮಯದಲ್ಲಿ ಮನೆ ಮಠ ಇಲ್ಲದ ಭಿಕಾರಿಯೊಬ್ಬ ಊಟ ಕೇಳಿಕೊಂಡು ಬರುತ್ತಿದ್ದ ಇದನ್ನು ಕಂಡ ವಿವೇಕ್ ಸೈನಿ ಬಡಪಾಯಿ ವ್ಯಕ್ತಿಗೆ ದಿನಾಲೂ ತಿನ್ನಲು ಆಹಾರ ಉಚಿತವಾಗಿ ನೀಡುತ್ತಿದ್ದ ಭಿಕಾರಿ ಯಾವತ್ತೂ ಮಾದಕ ವ್ಯಸನಿ ಎಂಬುದು ವಿವೇಕ್ ಸೈನಿಗೆ ಗೊತ್ತಾಯಿತೋ ಅಲ್ಲಿಗೆ ಆತನಿಗೆ ಆಹಾರ ನೀಡುವುದನ್ನು ಬಿಟ್ಟುಬಿಟ್ಟಿದ್ದಾನೆ ಇದರಿಂದ ಕೋಪಗೊಂಡ ವ್ಯಕ್ತಿ ಈತನ ಹತ್ಯೆಗೆ ಸಂಚು ರೂಪಿಸಿದ್ದ ಒಂದು ದಿನ ನೇರವಾಗಿ ವಿವೇಕ್ ಸೈನಿ ಇರುವ ಅಂಗಡಿಗೆ ಪ್ರವೇಶಿಸಿದ ವ್ಯಕ್ತಿ ವಿವೇಕ್ ಸೈನಿ ತಲೆಗೆ ಸುತ್ತಿಗೆಯಿಂದ ದಾಳಿ ನಡೆಸಿದ್ದಾನೆ.
ಒಂದಲ್ಲ ಎರಡಲ್ಲ ಬರೋಬ್ಬರಿ ಐವತ್ತು ಭಾರಿ ವಿವೇಕ್ ಸೈನಿ ತಲೆ, ಮುಖಕ್ಕೆ ಹೊಡೆದು ಹತ್ಯೆ ನಡೆಸಿದ್ದಾನೆ ಕೂಡಲೇ ಅಂಗಡಿಯಲ್ಲಿದ್ದ ಇತರ ಗ್ರಾಹಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಕಾರ್ಯಪ್ರವೃತ್ತರಾದ ಪೊಲೀಸರು ಘಟನಾ ಸ್ಥಳಕ್ಕೆ ಬಂದು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೆ ಮೃತ ವಿವೇಕ್ ಸೈನಿ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.
ಆರೋಪಿಯನ್ನು ಜೂಲಿಯನ್ ಫಾಕ್ನರ್ ಎಂದು ಗುರುತಿಸಲಾಗಿದ್ದು ಸದ್ಯ ಪೋಲೀಸರ ವಶದಲ್ಲಿದ್ದಾನೆ.
ವಿವೇಕ್ ಸೈನಿಗೆ ರಜೆ ಇದ್ದ ಕಾರಣ ಇದೆ ಜನವರಿ 26 ರಂದು ಭಾರತಕ್ಕೆ ಬರಬೇಕಿತ್ತು ಆದರೆ ಇದರ ನಡುವೆ ಹತ್ಯೆ ನಡೆದಿರುವುದು ಕುಟುಂಬದಲ್ಲಿ ಆಘಾತ ಮನೆಮಾಡಿದೆ. ಮೃತದೇಹವನ್ನು ಭಾರತಕ್ಕೆ ತರುವಂತೆ ವ್ಯವಸ್ಥೆ ನಡೆಸಲಾಗುತ್ತಿದೆ.
ಇದನ್ನೂ ಓದಿ: Central Govt; ಎರಡು ವರ್ಷಗಳಲ್ಲಿ 30 ನಗರ ಭಿಕ್ಷಾಟನೆ ಮುಕ್ತ ?