Advertisement

On Camera: ಜನನಿಬಿಡ ಪ್ರದೇಶದಲ್ಲೇ ಗುಂಡೇಟಿಗೆ ಅಫ್ಘಾನ್‌ ಮೂಲದ ಜಿಮ್‌ ಮಾಲೀಕನ ಹ*ತ್ಯೆ!

10:40 AM Sep 13, 2024 | Team Udayavani |

ನವದೆಹಲಿ: ಜಿಮ್‌ (gym) ಮಾಲೀಕನನ್ನು (35ವರ್ಷ) ಗುಂಡಿಟ್ಟು ಹ*ತ್ಯೆಗೈದಿರುವ ಘಟನೆ ಗುರುವಾರ (ಸೆ.12) ತಡರಾತ್ರಿ ದಕ್ಷಿಣ ದೆಹಲಿಯ ಗ್ರೇಟರ್‌ ಕೈಲಾಶ್‌ I ರಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ಗ್ರೇಟರ್‌ ಕೈಲಾಶ್‌ I ನ ಜನನಿಬಿಡ ಪ್ರದೇಶದಲ್ಲಿ ದುಷ್ಕರ್ಮಿಗಳು ಜಿಮ್‌ ಮಾಲೀಕನನ್ನು ಗುಂಡಿಟ್ಟು ಕೊ*ಲೆಗೈದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಲಾರೆನ್ಸ್‌ ಬಿಷ್ಣೋಯಿ ಗ್ಯಾಂಗ್‌ ನ ಗೋಲ್ಡೈ ಬ್ರಾರ್‌ ನ ನಿಕಟವರ್ತಿ ರೋಹಿತ್‌ ಗೋದಾರಾ ಈ ಹ*ತ್ಯೆಯ ಹೊಣೆಯನ್ನು ಹೊತ್ತುಕೊಂಡಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು, ಈ ಪೋಸ್ಟ್‌ ಬಗ್ಗೆ ಎನ್‌ ಡಿಟಿವಿ ಖಚಿತಪಡಿಸುವುದಿಲ್ಲ ಎಂದು ಹೇಳಿದೆ.

content-img

ಅಫ್ಘಾನ್‌ ಮೂಲದ ನಾದಿರ್‌ ಶಾ ಸಿಆರ್‌ ಪಾರ್ಕ್‌ ಪ್ರದೇಶದಲ್ಲಿ ವಾಸವಾಗಿದ್ದು, ಗುರುವಾರ ತಡರಾತ್ರಿ ಕಾರ್‌ ಪಾರ್ಕಿಂಗ್‌ ನಲ್ಲಿ ಮತ್ತೊಬ್ಬ ವ್ಯಕ್ತಿಯ ಜತೆ ಮಾತನಾಡುತ್ತಿದ್ದ. ಈ ಸಂದರ್ಭದಲ್ಲಿ ಅಲ್ಲಿಗೆ ಆಗಮಿಸಿದ್ದ ವ್ಯಕ್ತಿ ಏಕಾಏಕಿ ಗುಂಡಿನ ದಾಳಿ ನಡೆಸಿದ್ದ, ಮತ್ತೊಬ್ಬ ವ್ಯಕ್ತಿ ಪರಾರಿಯಾಗಿದ್ದು, ಶಾ ಸ್ಥಳದಲ್ಲೇ ಕೊನೆಯುಸಿರೆಳೆದಿರುವುದಾಗಿ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಶಾ ಮೇಲೆ 6ರಿಂದ 8 ಗುಂಡುಗಳು ಬಿದ್ದಿದ್ದು, ಸ್ಥಳದಲ್ಲಿ ಖಾಲಿಯಾದ ಕಾರ್ಟ್‌ ರಿಡ್ಜ್‌ ಸ್‌ ಬಿದ್ದಿರುವುದು ಪತ್ತೆಯಾಗಿದೆ. ಪೊಲೀಸರ ಮಾಹಿತಿಯಂತೆ, ಶಾ ದುಬೈನಲ್ಲೂ ವ್ಯವಹಾರ ಹೊಂದಿದ್ದು, ಈತನ ಮೇಲೆ ಹಲವಾರು ಕ್ರಿಮಿನಲ್‌ ಪ್ರಕರಣಗಳು ಇದ್ದಿರುವುದಾಗಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.