Advertisement

Bobby Deol ಹುಟ್ಟುಹಬ್ಬಕ್ಕೆ ʼಕಂಗುವʼ ಗಿಫ್ಟ್‌: ʼಉಧಿರನ್‌ʼ ಫಸ್ಟ್‌ ಲುಕ್‌ ಔಟ್

01:13 PM Jan 27, 2024 | Team Udayavani |

ಚೆನ್ನೈ: ಬಹು ನಿರೀಕ್ಷಿತ ಪ್ಯಾನ್‌ ಇಂಡಿಯಾ ʼಕಂಗುವʼ ಸಿನಿಮಾದ ಪೋಸ್ಟರ್‌ ಗಳೇ ಹೈಪ್‌ ಹೆಚ್ಚಿಸಿದೆ. ಇದೀಗ ಸಿನಿಮಾದಲ್ಲಿನ ಮತ್ತೊಂದು ಪ್ರಧಾನ ಪಾತ್ರದ ಫಸ್ಟ್‌ ಲುಕ್‌ ಪೋಸ್ಟರ್‌ ನ್ನು ಚಿತ್ರತಂಡ ರಿವೀಲ್‌ ಮಾಡಿದೆ.

Advertisement

ಶಿವ ನಿರ್ದೇಶನದ ʼಕಂಗುವʼ ಸೂರ್ಯ ಅವರ ವೃತ್ತಿ ಬದುಕಿನ ವಿಶೇಷ ಹಾಗೂ ಭಿನ್ನವಾದ ಸಿನಿಮಾ. ಈ ಸಿನಿಮಾಕ್ಕಾಗಿ ಸಾಕಷ್ಟು ತಯಾರಿ ನಡೆಸಿಕೊಂಡಿದ್ದು, ಪೋಸ್ಟರ್‌ ಗಳು ಸಿನಿಮಾದ ಬಗೆಗಿನ ನಿರೀಕ್ಷೆಯನ್ನು ಹೆಚ್ಚಿಸಿದೆ. ಇತ್ತೀಚೆಗೆ ಸಂಕ್ರಾಂತಿ ಹಬ್ಬದಂದು ಸಿನಿಮಾದ ಹೊಸ ಪೋಸ್ಟರ್‌ ರಿಲೀಸ್ ಆಗಿತ್ತು. ಇದೀಗ ಮತ್ತೊಂದು ಪಾತ್ರದ ಫಸ್ಟ್‌ ಲುಕ್‌ ರಿಲೀಸ್‌ ಮಾಡಲಾಗಿದೆ. 

ಇದನ್ನೂ ಓದಿ: ವಿಜಯ್ ನನ್ನ ಕಣ್ಣ ಮುಂದೆ ಬೆಳೆದ ಹುಡುಗ, ನಾನು ಆತನ ಪ್ರತಿಸ್ಪರ್ಧಿ ಅಲ್ಲ: Rajinikanth

ʼಕಂಗುವʼದಲ್ಲಿ ಬಾಲಿವುಡ್‌ ನಟ ಬಾಬಿ ಡಿಯೋಲ್‌ ನಟಿಸುತ್ತಿರುವುದು ಗೊತ್ತೇ ಇದೆ. ಬಾಬಿ ಡಿಯೋಲ್‌ ಅವರ 55ನೇ ಹುಟ್ಟುಹಬ್ಬದಂದು ಚಿತ್ರತಂಡ ಅವರ ಪಾತ್ರದ ಪರಿಚಯವನ್ನು ಮಾಡಿದ್ದು, ಫಸ್ಟ್‌ ಲುಕ್‌ ಪೋಸ್ಟರ್‌ ಮೂಲಕ ಹುಟ್ಟುಹಬ್ಬದ ಶುಭಾಶಯವನ್ನು ಕೋರಿದೆ.

“ಹುಟ್ಟುಹಬ್ಬದ ಶುಭಾಶಯಗಳು ಸಹೋದರ ಬಾಬಿ ಡಿಯೋಲ್ ಆತ್ಮೀಯ ಸ್ನೇಹಕ್ಕಾಗಿ ಧನ್ಯವಾದಗಳೆಂದು” ‌ಸೂರ್ಯ ಹುಟ್ಟುಹಬ್ಬದಂದು ಶುಭಾಶಯವನ್ನು ಕೋರಿದ್ದಾರೆ.

Advertisement

ಅರೆ ಕಣ್ಣು ಮುಚ್ಚಿ, ರೌದ್ರ ಅವತಾರದ ʼಉಧಿರನ್‌ ʼ ಫಸ್ಟ್‌ ಲುಕ್‌ ಭಯಾನಕವಾಗಿದೆ. ಫಸ್ಟ್‌ ಲುಕ್‌ ನೋಡಿ ಫ್ಯಾನ್ಸ್‌ ಗಳ ಕುತೂಹಲ ಹೆಚ್ಚಾಗಿದೆ.

ಸಿನಿಮಾದಲ್ಲಿ ಸೂರ್ಯ ಜೊತೆ ದಿಶಾ ಪಟಾನಿ ಮತ್ತು ಬಾಬಿ ಡಿಯೋಲ್ ಕೂಡ ನಟಿಸಿದ್ದಾರೆ. ಚಿತ್ರದ ಇತರ ತಾರಾಬಳಗವನ್ನು ಮುಂದಿನ ದಿನಗಳಲ್ಲಿ ಬಹಿರಂಗಪಡಿಸಲಾಗುತ್ತದೆ ಎಂದು ಚಿತ್ರತಂಡ ಹೇಳಿದೆ. ಚಿತ್ರದ ಛಾಯಾಗ್ರಹಣ ವೆಟ್ರಿ ಪಳನಿಸಾಮಿ ಮತ್ತು ‘ರಾಕ್‌ಸ್ಟಾರ್’ ದೇವಿ ಶ್ರೀ ಪ್ರಸಾದ್ ಸಂಗೀತ ಸಂಯೋಜಿಸಿದ್ದಾರೆ.‌ 

 

Advertisement

Udayavani is now on Telegram. Click here to join our channel and stay updated with the latest news.

Next