Advertisement

ದೇಶದ ದೊಡ್ಡ ಟನೆಲ್‌ ರಸ್ತೆ ಏ.2ರಂದು ಪ್ರಧಾನಿ ಉದ್ಘಾಟನೆ

03:45 AM Mar 23, 2017 | Team Udayavani |

ನವದೆಹಲಿ/ಜಮ್ಮು: ದೇಶದ ಅತ್ಯಂತ ದೊಡ್ಡದು, ಏಷ್ಯಾದಲ್ಲೇ ಅತ್ಯಂತ ಉದ್ದದ ಎರಡು ಹಂತಗಳ (ಬೈ-ಡೈರೆಕ್ಷನಲ್‌)  ಸುರಂಗ ರಸ್ತೆ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಏ.2ರಂದು ಉದ್ಘಾಟಿಸಲಿದ್ದಾರೆ. ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಚೆನಾನಿ-ನಶ್ರಿ ಪ್ರದೇಶದಲ್ಲಿ ಈ ರಸ್ತೆ ಹಾದು ಹೋಗಲಿದೆ. ಅದರಲ್ಲಿ ವಿಶ್ವದರ್ಜೆಯ ರಕ್ಷಣಾ ವ್ಯವಸ್ಥೆ ಅಳವಡಿಸಲಾಗಿದ್ದು, ದಾಖಲೆಯ ನಾಲ್ಕು ವರ್ಷಗಳಲ್ಲಿ ನಿರ್ಮಿಸಲಾಗಿದೆ. 

Advertisement

ಸರ್ವ ಋತುವಿಗೆ ಅನುಗುಣವಾಗುವಂತೆ ಒಟ್ಟು 2,519 ಕೋಟಿ ರೂ. ವೆಚ್ಚದಲ್ಲಿ  ನಿರ್ಮಿಸಲಾಗಿದೆ. ಇದರಿಂದಾಗಿ ಚಳಿಗಾಲದ ಅವಧಿಯಲ್ಲಿ ಎರಡೂ ನಗರಗಳ ಮಧ್ಯೆ ಸುಲಲಿತವಾಗಿ ಸಂಪರ್ಕಕ್ಕೆ ಸಾಧ್ಯವಾಗಲಿದೆ. ಇದರಿಂದಾಗಿ ನಿತ್ಯ 27 ಲಕ್ಷ ರೂ.ಉಳಿತಾಯವಾಗಲಿದೆ. ಜಮ್ಮು-ಶ್ರೀನಗರ ನಡುವಿನ ಪ್ರಯಾಣದ ಅವಧಿಯನ್ನು ಎರಡೂವರೆ ಗಂಟೆಗೆ ತಗ್ಗಿಸಲಿದೆ. ಜತೆಗೆ ಚೆನಾನಿ-ನಶ್ರಿ ನಡುವಿನ ದೂರವನ್ನು ಹಾಲಿ 41 ಕಿ.ಮೀ.ಗಿಂತ 10.9 ಕಿ.ಮೀ.ಗಳಿಗೆ ಇಳಿಸಲಿದೆ. ವಾತಾ ನುಕೂಲ ವ್ಯವಸ್ಥೆ, ತುರ್ತು ಸಂಪರ್ಕ, 9 ಕಿಮೀ ಸುರಂಗ ರಸ್ತೆಯಲ್ಲಿ ಅವಘಡಗಳಾದಲ್ಲಿ ಗುರುತಿಸುವ ವ್ಯವಸ್ಥೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next