Advertisement

ಒಮಿಕ್ರಾನ್‌ ಕುರಿತು ಆತಂಕ ಮೂಡಿಸುವ ಕೆಲಸ ಆಗುತ್ತಿದೆ: ಡಿಕೆಶಿ ಆರೋಪ

07:18 PM Dec 08, 2021 | Team Udayavani |

ಬೆಂಗಳೂರು: ಒಮಿಕ್ರಾನ್‌ ವಿಚಾರವಾಗಿ ಜನರಲ್ಲಿ ಅನಗತ್ಯ ಭಯದ ವಾತಾವರಣ ನಿರ್ಮಾಣ ಮಾಡಲಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಆರೋಪಿಸಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿದ ಅಔರು, ಬೆಂಗಳೂರಿನಲ್ಲಿ ಐಟಿ ಸೆಕ್ಟರ್‌, ಹೋಟೆಲ್‌ ಗಳು ಸೇರಿದಂತೆ ಬಹುತೇಕ ವ್ಯವಹಾರಗಳು ಎಸಿಯಲ್ಲಿ ನಡೆಯುತ್ತವೆ. ಎಲ್ಲವೂ ಬಂದ್‌ ಮಾಡಬೇಕೇ. ರಾಜ್ಯ ಸರ್ಕಾರ ಈಬಗ್ಗೆ ಸ್ಪಷ್ಟವಾಗಿ ಗಂಭೀರತೆಯಿಂದ ಪರಿಸ್ಥಿತಿ ನಿರ್ವಹಣೆ ಮಾಡಬೇಕು ಎಂದು ಆಗ್ರಹಿಸಿದರು.

ಒಮಿಕ್ರಾನ್‌ ವಿಚಾರದಲ್ಲಿ ಅನಗತ್ಯ ಆತಂಕದಿಂದ ಇಡೀ ರಾಜ್ಯದ ಆರ್ಥಿಕತೆ ಹಾಳಾಗುಯತ್ತದೆ. ಹೀಗಾಗಿ, ರಾಜ್ಯ ಸರ್ಕಾರ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.

ಕೊರೊನಾ ಪರಿಸ್ಥಿತಿ ತಿಳಿಯಾದ ನಂತರ ಈಗ ಕೆಲವರು ಉಸಿರಾಡುತ್ತಿದ್ದಾರೆ. ಹೋಟೆಲ್‌ ಉದ್ಯಮ ನಷ್ಟದಲ್ಲಿದೆ. ಶೇ.90 ರಷ್ಟು ಹೋಟೆಲ್‌ ಗಳಿಗೆ ಎಸಿ ಅಗತ್ಯ. ಶೇ.20 ರಷ್ಟು ಶಾಲೆಗಳು ಎಸಿಯಲ್ಲೇ ನಡೆಯುತ್ತಿವೆ. ಅನಗತ್ಯ ಗೊಂದಲ ಸೃಷ್ಟಿಸುವುದು ಬೇಡ ಎಂದು ತಿಳಿಸಿದರು.

ಇದನ್ನೂ ಓದಿ:ಗೋವಾ: ತೃಣಮೂಲ ಕಾಂಗ್ರೆಸ್ ಪ್ರವೇಶದಿಂದ ಬಿಜೆಪಿಗೆ ಭೀತಿ: ಟ್ರೋಜನ್ ಡಿಮೆಲೊ

Advertisement

ಬಿಜೆಪಿ ದುರ್ಬಲ
ಯಡಿಯೂರಪ್ಪನವರು ಕಾಂಗ್ರೆಸ್‌ ಅನ್ನು 25 ವರ್ಷ ವಿರೋಧ ಪಕ್ಷದಲ್ಲಿ ಇಡುತ್ತೇವೆ. ಕಾಂಗ್ರೆಸ್‌ ಕತೆ ಮುಗಿದಿದ್ದು, ತಾವೇ ಶಾಶ್ವತವಾಗಿ ಇರುತ್ತೇವೆ ಎಂದು ಹೇಳಿದ್ದಾರೆ. ಯಡಿಯೂರಪ್ಪ ಸೇರಿ ಕೆಲವರು ಜೆಡಿಎಸ್‌ ಬೆಂಬಲ ಬೇಕು ಎಂದು ಕೇಳುವ ಮೂಲಕ ತಮ್ಮದು ದುರ್ಬಲ ಪಕ್ಷ ಎಂದು ಬಿಜೆಪಿ ಒಪ್ಪಿಕೊಂಡಿದೆ. ಮುಖ್ಯಮಂತ್ರಿಯವರ ಹೇಳಿಕೆಯನ್ನೂ ಗಮನಿಸುತ್ತಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next