ವಾಷಿಂಗ್ಟನ್: ಕೋವಿಡ್ ನ ನೂತನ ರೂಪಾಂತರ ತಳಿ ಒಮಿಕ್ರಾನ್ ಜಗತ್ತಿನ ಸುಮಾರು 57 ದೇಶಗಳಲ್ಲಿ ವರದಿಯಾಗಿದ್ದು, ಇದರೊಂದಿಗೆ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಬುಧವಾರ(ಡಿಸೆಂಬರ್ 08) ತಿಳಿಸಿದೆ.
ಇದನ್ನೂ ಓದಿ:ವಿಜಯ್ ಹಜಾರೆ ಟ್ರೋಪಿಯಲ್ಲಿ ಶುಭಾರಂಭ: 236 ರನ್ ಅಂತರದಿಂದ ಗೆದ್ದ ಕರ್ನಾಟಕ ತಂಡ
ಒಮಿಕ್ರಾನ್ ಸೋಂಕು ಎಷ್ಟು ಗಂಭೀರ ಸ್ವರೂಪದ್ದಾಗಿದೆ ಎಂಬ ಬಗ್ಗೆ ನಿರ್ಧರಿಸಲು ಇನ್ನಷ್ಟು ಅಂಕಿಅಂಶಗಳ ಅಗತ್ಯವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡುವ ವಾರದ ವರದಿಯಲ್ಲಿ ವಿವರಿಸಿದೆ.
ಒಂದು ವೇಳೆ ಒಮಿಕ್ರಾನ್ ಕೋವಿಡ್ ನಷ್ಟೇ ಗಂಭೀರ ಪರಿಣಾಮ ಹೊಂದಿದೆಯೇ ಅಥವಾ ಡೆಲ್ಟಾ ತಳಿಗಿಂತ ಕಡಿಮೆ ಪ್ರಮಾಣದ ಗಂಭೀರತೆ ಸ್ವರೂಪದ್ದಾಗಿದೆಯೇ ಎಂಬುದನ್ನು ಸೋಂಕಿತರ ಸಂಖ್ಯೆ ಹೆಚ್ಚಳವಾಗಿ ಆಸ್ಪತ್ರೆಗೆ ದಾಖಲಾದ ನಂತರವಷ್ಟೇ ಅಧ್ಯಯನ ನಡೆಸಬಹುದಾಗಿದೆ. ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗುವುದು ಮತ್ತು ಸಾವಿನ ಪ್ರಮಾಣದ ಆಧಾರದ ಮೇಲೆ ನಿರ್ಧರಿಸಬೇಕಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ದಕ್ಷಿಣ ಆಫ್ರಿಕಾದಲ್ಲಿ ಮೊದಲ ಬಾರಿಗೆ ಪತ್ತೆಯಾದ ಕೋವಿಡ್ ನ ರೂಪಾಂತರ ಹೊಸ ತಳಿಗೆ ಒಮಿಕ್ರಾನ್ ಎಂದು ವಿಶ್ವ ಆರೋಗ್ಯ ಸಂಸ್ಥೆ ನವೆಂಬರ್ 26ರಂದು ಹೆಸರಿಸಿತ್ತು. ಡಿಸೆಂಬರ್ ಮೊದಲ ವಾರದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಕೋವಿಡ್ 19 ಸೋಂಕು ಪ್ರಕರಣದಲ್ಲಿ ಭಾರೀ ಹೆಚ್ಚಳವಾಗಿದೆ.
ಯುರೋಪ್ ದೇಶದಲ್ಲಿ 274 ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿದೆ. ಆದರೆ ಈವರೆಗೆ ಗಂಭೀರ ಸ್ವರೂಪದ ಪರಿಣಾಮ ಮತ್ತು ಸಾವಿನ ಬಗ್ಗೆ ವರದಿಯಾಗಿಲ್ಲ ಎಂದು ವರದಿ ಹೇಳಿದೆ.