Advertisement

ಒಮಿಕ್ರಾನ್‌ ಸಾವು ತರದು, ಆದರೂ ಎಚ್ಚರವಿರಲಿ!

12:02 AM Dec 05, 2021 | Team Udayavani |

ಹೈದರಾಬಾದ್‌: ಕೊರೊನಾದ ಹೊಸ ರೂಪಾಂತರಿಯಾದ ಒಮಿಕ್ರಾನ್‌ನ ಮಾರಣಾಂತಿಕವಲ್ಲ. ಅದರ ಸೋಂಕು ತಗಲಿ ದವರು ಖಂಡಿತವಾಗಿಯೂ ಸಾಯುತ್ತಾರೆ ಎಂಬುದು ಸತ್ಯಕ್ಕೆ ದೂರವಾದ ವಿಚಾರ. ಆದರೆ ಆ ಬಗ್ಗೆ ನಿರ್ಲಕ್ಷ್ಯ ಧೋರಣೆ ಬೇಡ. ಜನರು ಆ ರೂಪಾಂತರಿ ಕುರಿತಂತೆ ಹುಷಾರಾಗಿರಬೇಕು ಎಂದು ಹೈದರಾಬಾದ್‌ನಲ್ಲಿರುವ ಆಲ್‌ ಇಂಡಿಯಾ ಮೆಡಿಕಲ್‌ ಸೈನ್ಸಸ್‌ (ಏಮ್ಸ್‌ನ) ಡಾ| ವಿಕಾಸ್‌ ಭಾಟಿಯಾ ತಿಳಿಸಿದ್ದಾರೆ.

Advertisement

ಈ ಹೊತ್ತಿಗೆ ಜಗತ್ತಿನ ಸುಮಾರು 30 ದೇಶಗಳಲ್ಲಿ ಒಮಿ ಕ್ರಾನ್‌ ಪ್ರಕರಣಗಳು ಕಾಣಿಸಿಕೊಂಡಿವೆ. ಆದರೆ ಅವುಗಳಲ್ಲಿ ಯಾವ ಸೋಂಕಿತರ ಪರಿಸ್ಥಿತಿಯೂ ಗಂಭೀರವಾಗಿಲ್ಲ. ಆದರೂ ಈ ರೂಪಾಂತರಿ ಯಾವ ಮಟ್ಟದಲ್ಲಿ ಘಾಸಿ ಮಾಡ ಬಲ್ಲದು ಎಂಬುದಿನ್ನೂ ಖಚಿತವಾಗಿಲ್ಲ. ಆದ್ದರಿಂದ ಇದು ಅಪಾಯಕಾರಿಯಲ್ಲ ಎಂದು ಸದ್ಯದ ಮಟ್ಟಿಗೆ ಸ್ಪಷ್ಟವಾಗಿ ಹೇಳಬಹುದು ಎಂದು ಅವರು ಹೇಳಿದ್ದಾರೆ.

ನೆಗಡಿ ವೈರಾಣುವಿನಂತಿದೆ!:

ಕೊರೊನಾ ಡೆಲ್ಟಾ ರೂಪಾಂ ತರಿಯು, ಶೀತ ಉಂಟು ಮಾಡುವ ಯಾವುದೋ ಒಂದು ವೈರಾಣುವಿನೊಡನೆ ಸಂಪರ್ಕ ಹೊಂದಿದ ಪರಿಣಾಮ ಒಮಿ ಕ್ರಾನ್‌ ರೂಪಾಂತರಿ ಸೃಷ್ಟಿಯಾಗಿರಬಹುದು. ಹಾಗಾಗಿಯೇ ಒಮಿಕ್ರಾನ್‌ ಸೋಂಕಿತರಲ್ಲಿ ಕೇವಲ ಶೀತ, ಅಲ್ಪ ಪ್ರಮಾಣದ ಜ್ವರವಷ್ಟೇ ಕಾಣಿಸಿಕೊಳ್ಳುತ್ತಿದ್ದು, ಕೊರೊನಾ ಮೂಲ ವೈರಾಣುವಿನಿಂದ ಉಂಟಾಗುವಂಥ ಯಾವುದೇ ಗಂಭೀರ ಲಕ್ಷಣಗಳು ಕಾಣುತ್ತಿಲ್ಲ ಎಂದು ಎಂದು ಮೆಚ್ಯುಸ್ಯಾಟ್‌ನ ಎನ್‌ಫ‌ರ್ಮ್ ಎಂಬ ಸಂಶೋಧನ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ಭಾರತ ಮೂಲದ ವೆಂಕಿ ಸುಂದರರಾಜನ್‌ ತಿಳಿಸಿದ್ದಾರೆ.

6 ರಾಜ್ಯಗಳಿಗೆ ಕೇಂದ್ರ ಆರೋಗ್ಯ ಇಲಾಖೆಯ ಪತ್ರ :

Advertisement

ಹಲವು ರಾಜ್ಯಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶನಿವಾರ ಕರ್ನಾಟಕ ಸೇರಿದಂತೆ 6 ರಾಜ್ಯಗಳಿಗೆ ಕೇಂದ್ರ ಸರಕಾರವು ಪತ್ರ ಬರೆದಿದೆ. ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ನಿಗಾ ಇಡಿ, ಹೊಸ ಹಾಟ್‌ಸ್ಪಾಟ್‌ಗಳ ಮೇಲೆ ಕಣ್ಣಿಡಿ, ಪಾಸಿಟಿವ್‌ ಬಂದವರ ಸಂಪರ್ಕಿತರ ಪತ್ತೆಗೆ ಕ್ರಮ ಕೈಗೊಳ್ಳಿ, ಎಲ್ಲ ಪಾಸಿಟಿವ್‌ ಸ್ಯಾಂಪಲ್‌ಗ‌ಳನ್ನೂ ವಂಶವಾಹಿ ಪರೀಕ್ಷೆಗೆ ಕಳುಹಿಸಿಕೊಡಿ, ಆರೋಗ್ಯ ಮೂಲಸೌಕರ್ಯಗಳನ್ನು ಸನ್ನದ್ಧವಾಗಿಡಿ. ಎಲ್ಲದಕ್ಕಿಂತಲೂ ಹೆಚ್ಚಾಗಿ ಸಮುದಾಯಗಳಲ್ಲಿ ಜಾಗೃತಿ ಮೂಡಿಸಿ ಎಂದು ಪತ್ರದಲ್ಲಿ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್‌ ಭೂಷಣ್‌ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next