Advertisement
ಕೊರೊನಾ ವೈರಸ್ ನಿಯಂತ್ರಣ ಆಗಬೇಕಾದರೆ 18 ವರ್ಷ ಮೇಲ್ಪಟ್ಟವರಿಂದ ಎಲ್ಲರಿಗೂ ಲಸಿಕೆ ನೀಡುತ್ತಿದ್ದು, ಜಿಲ್ಲೆಯಲ್ಲಿ ಜನ ಕೊರೊನಾ ನಿಯಂತ್ರಣ ಮಾಡಲು ಶೇ.95ರಷ್ಟು ಮೊದಲ ಡೋಸ್ ಲಸಿಕೆ ಪಡೆದು ಕೊಂಡಿದ್ದಾರೆ. ಆದರೆ, ಎರಡನೇ ಡೋಸ್ ಇನ್ನು ಶೇ.71ರಷ್ಟು ಜನ ಪಡೆದಿದ್ದು, ಕೊರೊನಾ, ಒಮಿಕ್ರಾನ್ ನಿಯಂತ್ರಣಕ್ಕೆ ಪ್ರತಿಯೊಬ್ಬರೂ ಕೊರೊನಾ ಲಸಿಕೆ ಪಡೆಯುವುದು ಅತೀ ಮುಖ್ಯವಾಗಿದೆ.
Related Articles
Advertisement
ಯಾವುದೇ ಅಡ್ಡ ಪರಿಣಾಮ ವಿಲ್ಲದ ಲಸಿಕೆಯನ್ನು ಪಡೆದುಕೊಳ್ಳುವ ಮೂಲಕ ಕೊರೊನಾ ಸೋಂಕು ಬಂದರೂ ಗುಣಮುಖರಾಗುತ್ತಿರುವುದನ್ನು ಗಮನಿಸಿದ ಜನರು, ಈಗ ಕೋವಿಡ್ ಲಸಿಕಾ ಕೇಂದ್ರಗಳಿಗೆ ಬಂದು ಲಸಿಕೆ ಪಡೆಯಲು ಮುಂದಾಗ ಬೇಕಾಗಿದೆ. ಮೊದಲ ಡೋಸ್ 19.04 ಲಕ್ಷ ಜನರು ಪಡೆದಿದ್ದು, ಶೇ. 95ರಷ್ಟು ಎರಡನೇ ಡೋಸ್ 14.20 ಲಕ್ಷ ಜನರು ಪಡೆದು ಶೇ. 71ರಷ್ಟು ಪ್ರಗತಿ ಸಾಧಿಸಲಾಗಿದೆ. ಎರಡೂ ಡೋಸ್ ಪಡೆಯಬೇಕಾದ್ದು ನಾಗರಿಕರ ಕರ್ತವ್ಯವಾಗಿದ್ದು, ಮೊದಲನೇ ಲಸಿಕೆ ಪಡೆದಿರುವ ಅನೇಕರು ಇನ್ನು ಎರಡನೇ ಡೋಸ್ ಪಡೆದಿಲ್ಲ.
ಲಸಿಕೆ ತಪ್ಪದೇ ಪಡೆಯಿರಿ: ಜಿಲ್ಲೆಯ ತುಮಕೂರು, ತುರುವೇಕೆರೆ ತಿಪಟೂರು, ಚಿಕ್ಕನಾಯಕನಹಳ್ಳಿ, ಕುಣಿಗಲ್, ಮಧುಗಿರಿ, ಗುಬ್ಬಿ ಭಾಗಗಳಲ್ಲಿ ಲಸಿಕೆ ಪಡೆಯುವಲ್ಲಿ ಉತ್ತಮ ಸಾಧನೆ ಆಗುತ್ತಿದೆ. ಆದರೆ, ಪಾವಗಡ ತಾಲೂಕಿನಲ್ಲಿ ಜನ ಲಸಿಕೆ ಪಡೆಯಲು ಹೆದರುತ್ತಿದ್ದು, ಅಲ್ಲಿ ಅತೀ ಕಡಿಮೆ ಶೇ. 85ರಷ್ಟು ಪ್ರಗತಿ ಸಾಧಿಸಲಾಗಿದೆ.
ಶಿರಾ ತಾಲೂಕಿನಲ್ಲಿ ಉತ್ತಮ ಸ್ಪಂದನೆ ದೊರೆತ್ತಿದೆ. ಎರಡೂ ಡೋಸ್ ಸೇರಿ ಶೇ. 99ರಷ್ಟು ಪ್ರಗತಿ ಸಾಧಿಸಲಾಗಿದೆ. ನಮ್ಮ ನಿರೀಕ್ಷೆ ಯಷ್ಟು ಲಸಿಕೆ ಬರುತ್ತಿದೆ. ಜನರು ಲಸಿಕಾ ಕೇಂದ್ರಕ್ಕೆ ಬಂದು ತಪ್ಪದೇ ಎರಡೂ ಡೋಸ್ ಲಸಿಕೆ ತಪ್ಪದೇ ಪಡೆಯಿರಿ ಎಂದು ಲಸಿಕೆ ವಿತರಣೆ ನಿರ್ವಹಣಾಧಿಕಾರಿ ಡಾ.ಕೇಶವರಾಜ್ ಮನವಿ ಮಾಡಿದ್ದಾರೆ.
“ಜಿಲ್ಲೆಯಲ್ಲಿ ಕೊರೊನಾ ಮೂರನೇ ಅಲೆ ನಿಯಂತ್ರಣಕ್ಕೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಈಗ ಕೊರೊನಾ ನಿಯಂತ್ರಣದಲ್ಲಿದೆ. ಆದರೆ, ಬೇರೆ ಬೇರೆ ಕಡೆ ಕೊರೊನಾ ಜೊತೆಗೆ ಒಮಿಕ್ರಾನ್ ಸೋಂಕು ಕಾಣಿಸಿಕೊಳ್ಳುತ್ತಿರುವುದರಿಂದ ಅದಕ್ಕೆ ಬೇಕಾದ ಸೂಕ್ತ ಕ್ರಮವನ್ನು ಜಿಲ್ಲಾಡಳಿತದಿಂದ ಕೈಗೊಂಡಿದೆ.” ● ವೈ.ಎಸ್. ಪಾಟೀಲ್, ಜಿಲ್ಲಾಧಿಕಾರಿ.
“ಒಮಿಕ್ರಾನ್ ಈಗ ಎಲ್ಲ ಕಡೆ ಹರಡುತ್ತಿರುವ ಹಿನ್ನೆಲೆ, ಜಿಲ್ಲೆಯಲ್ಲಿ ಸೋಂಕು ಹರಡದಂತೆ ಕಾಪಾಡಲು ಪ್ರತಿ ಯೊಬ್ಬರೂ ಕೊರೊನಾ ಲಸಿಕೆ ಪಡೆಯ ಬೇಕು. ಮೊದಲನೇ ಕೊರೊನಾ ಲಸಿಕೆ ಪಡೆದವರು ತಪ್ಪದೇ ಎರಡನೇ ಲಸಿಕೆ ಪಡೆಯಬೇಕು. ಜಿಲ್ಲೆಯ ಕೊರೊನಾ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ನೀಡಲಾಗು ತ್ತಿದೆ. ಜಿಲ್ಲೆಯಲ್ಲಿ ಶೇ.95ರಷ್ಟು ಜನರು ಲಸಿಕೆ ಪಡೆದಿದ್ದಾರೆ.” ● ಡಾ. ಕೇಶವರಾಜ್, ಕೊರೊನಾ ಲಸಿಕಾ ವಿತರಣಾ ಅಧಿಕಾರಿ.
– ಚಿ.ನಿ. ಪುರುಷೋತ್ತಮ್