Advertisement
ಒಮಿಕ್ರಾನ್ “ಕಳವಳಕಾರಿ ರೂಪಾಂತರಿ’ ಆಗಿದ್ದು ಹೇಗೆ?ಮೊದಲಿಗೆ ದಕ್ಷಿಣ ಆಫ್ರಿಕಾದಲ್ಲಿ ನವೆಂಬರ್‌ನಲ್ಲಿ ಕಂಡುಬಂದ ಒಮಿಕ್ರಾನ್, ಹಲವು ಬಾರಿ ರೂಪಾಂತರಗೊಂಡಿ ರುವುದನ್ನು ಪತ್ತೆ ಹಚ್ಚಲಾಯಿತು. ಈ ಹಿಂದಿನ ರೂಪಾಂತರಿಗಳಿಗೆ ಹೋಲಿಸಿದರೆ ಇದು ಹಲವು ರೂಪಾಂತರಗ ಳನ್ನು ಕಂಡ ಹಿನ್ನೆಲೆಯಲ್ಲಿ ಮತ್ತು ಇದು ಅತ್ಯಂತ ವೇಗವಾಗಿ ದ. ಆಫ್ರಿಕಾದಾದ್ಯಂತ ಹಬ್ಬಲಾರಂಭಿಸಿದ ಕಾರಣ ಇದನ್ನು ವಿಶ್ವ ಆರೋಗ್ಯ ಸಂಸ್ಥೆ “ಕಳವಳಕಾರಿ ರೂಪಾಂತರಿ’ ಎಂದು ಕರೆಯಿತು.
ಈ ಹಿಂದಿನ ರೂಪಾಂತರಿಯ ವೇಳೆ ನೀವು ಏನೇನು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದೀರೋ ಅವುಗ ಳನ್ನೇ ಮುಂದುವರಿಸಿದರೆ ಸಾಕು. ಮಾಸ್ಕ್ ಸರಿಯಾಗಿ ಧರಿಸುವುದು, ಕೊರೊನಾ ಲಸಿಕೆಯ ಎರಡೂ ಡೋಸ್‌ಗ ಳನ್ನು ಪಡೆಯುವುದು, ಶಾರೀರಿಕ ಅಂತರ ಕಾಯ್ದುಕೊಳ್ಳುವುದು, ನೀವು ಇರುವ ಜಾಗದಲ್ಲಿ ಗರಿಷ್ಠ ಪ್ರಮಾಣದಲ್ಲಿ ಗಾಳಿ-ಬೆಳಕು ಹರಿದಾಡುವಂತೆ ನೋಡಿಕೊಳ್ಳುವುದು ಇತ್ಯಾದಿ. ಈಗಿರುವ ಲಸಿಕೆ ಒಮಿಕ್ರಾನ್ ವಿರುದ್ಧ ಪರಿಣಾಮಕಾರಿಯೇ?
ಈಗ ಇರುವಂತಹ ಲಸಿಕೆಗಳು ಒಮಿಕ್ರಾನ್ ವಿರುದ್ಧ ಪರಿಣಾಮಕಾರಿಯಲ್ಲ ಎಂಬುದನ್ನು ಸಾಬೀತುಪಡಿಸುವ ಯಾವುದೇ ಪೂರಕ ಸಾಕ್ಷ್ಯಗಳು ಇನ್ನೂ ಸಿಕ್ಕಿಲ್ಲ. ಹೀಗಾಗಿ ಲಸಿಕೆ ಪರಿಣಾಮ ಬೀರಲ್ಲ ಎಂದು ಹೇಳಲು ಆಗುವುದಿಲ್ಲ.
Related Articles
ಒಮಿಕ್ರಾನ್ ಪ್ರವೇಶದ ಮೂಲಕ ದ. ಆಫ್ರಿಕಾದಲ್ಲಿ 4ನೇ ಅಲೆ ಅಪ್ಪಳಿಸಿದಂತಾಗಿದೆ. ಆದರೆ, ಭಾರತದಲ್ಲಿ ಕ್ಷಿಪ್ರ ಗ ತಿಯಲ್ಲಿ ಲಸಿಕೆ ವಿತರಣೆಯಾಗಿದೆ. ಜತೆಗೆ, 2ನೇ ಅಲೆಯ ವೇಳೆ ಡೆಲ್ಟಾ ರೂಪಾಂತರಿಯಿಂದ ಭಾರತದ ಬಹುತೇಕ ಮಂದಿಗೆ ಸೋಂಕು ತಗುಲಿದ್ದ ಕಾರಣ, ಭಾರತೀಯರಲ್ಲಿ ಕೊರೊನಾ ವಿರುದ್ಧದ ಪ್ರತಿಕಾಯ ಸೃಷ್ಟಿಯಾಗಿದೆ. ಹೀಗಾಗಿ ಒಮಿಕ್ರಾನ್ ದೇಶ ಪ್ರವೇಶಿಸಿದರೂ, ಅದರ ಗಂಭೀರತೆ ಅಷ್ಟೇನೂ ಹೆಚ್ಚಾಗಿರುವುದಿಲ್ಲ.
Advertisement
ದಿಲ್ಲಿಯಲ್ಲಿ 12 ಶಂಕಿತ ಕೇಸ್ಒಮಿಕ್ರಾ ನ್‌ನ 12 ಶಂಕಿತ ಪ್ರಕರಣಗಳು ದಿಲ್ಲಿಯಲ್ಲಿ ಪತ್ತೆಯಾಗಿದ್ದು, ಎಲ್ಲ ಸೋಂಕಿತರೂ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರೆಲ್ಲರೂ ಕಳೆದ 3 ದಿನಗಳಲ್ಲಿ ವಿದೇಶಗಳಿಂದ ಬಂದವರು. ಇವರ ಸ್ಯಾಂಪಲ್‌ಗಳನ್ನು ವಂಶವಾಹಿ ಪರೀಕ್ಷೆಗೆ ಕಳುಹಿಸಲಾಗಿದ್ದು, 5-6 ದಿನಗಳಲ್ಲಿ ವರದಿ ಬರಲಿದೆ. ತಮಿಳುನಾಡಿನಲ್ಲೂ ವಿದೇಶದಿಂದ ಬಂದ ಮೂವರಿಗೆ ಪಾಸಿಟಿವ್ ಆಗಿದ್ದು, ಅದು ಒಮಿಕ್ರಾನ್ ಎನ್ನುವುದು ಇನ್ನೂ ದೃಢಪಟ್ಟಿಲ್ಲ. 40 ದಾಟಿದವರಿಗೆ ಬೂಸ್ಟರ್ ಡೋಸ್?
“ದೇಶದಲ್ಲಿ 40 ವರ್ಷ ದಾಟಿದವರಿಗೆ ಬೂಸ್ಟರ್ ಡೋಸ್ ನೀಡಿ’ ಎಂದು ತಜ್ಞರ ಸಮಿತಿ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿದೆ. ಜತೆಗೆ ಇದುವರೆಗೆ ಲಸಿಕೆ ಹಾಕಿಸಿಕೊಳ್ಳದವರಿಗೆ, 40 ವರ್ಷ ಮೇಲ್ಪಟ್ಟ ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರು ವವರಿಗೆ ಬೂಸ್ಟರ್ ಡೋಸ್ ನೀಡಬೇಕು ಎಂದು 28 ಲ್ಯಾಬ್‌ಗಳ ಒಕ್ಕೂಟವಾಗಿರುವ ಭಾರತೀಯ ಸಾರ್ಸ್-ಕೋವ್-2 ವಂಶವಾಹಿ ಒಕ್ಕೂಟ (ಇನ್ಸಾಕಾಗ್) ಸರಕಾರಕ್ಕೆ ಶಿಫಾರಸು ಮಾಡಿದೆ. ಇನ್ನು, ಬೂಸ್ಟರ್ ಡೋಸ್ ಹಾಗೂ ಮಕ್ಕಳಿಗೆ ಲಸಿಕೆ ವಿತರಣೆ ಕುರಿತು ತಜ್ಞರಿಂದ ಸಲಹೆ ಪಡೆದ ಬಳಿಕವಷ್ಟೇ ನಿರ್ಧರಿಸ ಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಮನ್‌ಸು ಖ್ ಮಾಂಡ ವೀಯ ಲೋಕಸಭೆಯಲ್ಲಿ ಹೇಳಿದ್ದಾರೆ. ತಜ್ಞರ ತಂಡ ರವಾನೆ
ಒಮಿ ಕ್ರಾನ್ ರೂಪಾಂತರಿಯು ಕಾಡ್ಗಿಚ್ಚಿನಂತೆ ವ್ಯಾಪಿಸುತ್ತಿರುವಂತಹ ದಕ್ಷಿಣ ಆಫ್ರಿಕಾಗೆ ಶುಕ್ರವಾರ ವಿಶ್ವ ಆರೋಗ್ಯ ಸಂಸ್ಥೆ ತಜ್ಞರ ತಂಡ ವೊಂದನ್ನು ರವಾನಿಸಿದೆ. ನಿಗಾ ಹೆಚ್ಚಳ, ಸೋಂಕಿತರ ಸಂಪರ್ಕಿತರ ಪತ್ತೆ ಸೇರಿ ದಂತೆ ಇತರೆ ಕ್ರಮಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳಲು ದ. ಆಫ್ರಿಕಾಗೆ ಈ ತಂಡ ನೆರವಾಗಲಿದೆ. ಇದೇ ವೇಳೆ, ಶ್ರೀಲಂಕಾದಲ್ಲಿ ಶುಕ್ರವಾರ ಮೊದಲ ಒಮಿಕ್ರಾನ್ ಕೇಸ್ ದೃಢಪಟ್ಟಿದ್ದು, ನ್ಯೂಯಾರ್ಕ್‌ನಲ್ಲಿ 5 ಮಂದಿಗೆ ಸೋಂಕು ತಗುಲಿದೆ. ಈ ಮೂಲಕ 30ರಷ್ಟು ದೇಶಗಳಿಗೆ ಒಮಿಕ್ರಾನ್ ಹಬ್ಬಿದಂತಾಗಿದೆ.