Advertisement
ರಾಜ್ಯದಲ್ಲಿ ಈಚೆಗೆ ಹೊಸದಾಗಿ ಪತ್ತೆಯಾದ ಐದು ರೂಪಾಂತರಿ ತಳಿ ಒಮಿಕ್ರಾನ್ ಸೋಂಕು ಪ್ರಕರಣಗಳಲ್ಲಿ ಮೂವರ ಟ್ರಾವೆಲ್ ಹಿಸ್ಟರಿಯಲ್ಲಿ ದೆಹಲಿ ಉಲ್ಲೇಖವಾಗಿದೆ. ಈ ಮಧ್ಯೆ ದೆಹಲಿಯಲ್ಲಿಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಈಹಿನ್ನೆಲೆಯಲ್ಲಿ ದೆಹಲಿಯಿಂದ ನಗರಕ್ಕೆ ಬಂದವರ ಮೇಲೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಿಶೇಷಕಣ್ಣು ಇಡಲು ಮುಂದಾಗಿದೆ. ಈಗಾಗಲೇಬಂದಿಳಿದವರಿಗಾಗಿಯೂ ಹುಡುಕಾಟ ನಡೆಸಿದೆ.
Related Articles
Advertisement
ಸಾಂಸ್ಥಿಕ ಕ್ವಾರಂಟೈನ್‌ಗೆ ಇಂದು ಪ್ರಸ್ತಾವನೆ: ಇದಲ್ಲದೆ, ಹೈರಿಸ್ಕ್ ದೇಶಗಳಿಂದ ಆಗಮಿಸುವ ಪ್ರಯಾಣಿಕರಿಗೆ ಕಡ್ಡಾಯವಾಗಿ ಸಾಂಸ್ಥಿಕ ಕ್ವಾರಂಟೈನ್ ಗೂ ಚಿಂತನೆ ನಡೆದಿದ್ದು, ಈ ಸಂಬಂಧ ಸರ್ಕಾರಕ್ಕೆ ಶನಿವಾರ ಪ್ರಸ್ತಾವನೆ ಸಲ್ಲಿಸಲು ಬಿಬಿಎಂಪಿಉದ್ದೇಶಿಸಿದೆ. ಇದಕ್ಕೆ ಅನುಮತಿ ದೊರೆತರೆ, ವಿದೇಶಿಪ್ರಯಾಣಿಕರು ನಿಲ್ದಾಣಕ್ಕೆ ಹತ್ತಿರದ ಹೋಟೆಲ್‌ಗಳಲ್ಲೇ ವಾರಗಟ್ಟಲೆ “ಲಾಕ್’ ಆಗಲಿದ್ದಾರೆ.
ಪ್ರಸ್ತುತ ವ್ಯವಸ್ಥೆಯಲ್ಲಿ ಹೈರಿಸ್ಕ್ ರಾಷ್ಟ್ರಗಳಿಂದ ನಗರಕ್ಕೆ ಬಂದಿಳಿದವರನ್ನು ಕೊರೊನಾ ಪರೀಕ್ಷೆಗೊಳಪಡಿಸಲಾ ಗುತ್ತಿದೆ. ವರದಿ ಬಂದ ನಂತರ ಮನೆಗೆ ಕಳುಹಿಸಲಾಗುತ್ತಿದೆ. ಅಲ್ಲಿ ಅವರೆಲ್ಲರಿಗೆ ಹೋಂ ಕ್ವಾರಂಟೈನ್‌ಆಗುತ್ತಾರೆ. ಆದರೆ, ಇದರಲ್ಲಿ ಬಹುತೇಕರು ನಿಯಮ ಪಾಲಿಸುತ್ತಿಲ್ಲ. ಈ ಮಧ್ಯೆ ರೂಪಾಂತರಿ ತಳಿ ಪತ್ತೆಯಾಗುತ್ತಿದೆ. ಅಷ್ಟರಲ್ಲಿ ಹತ್ತಾರು ಕಡೆ ಓಡಾಡಿಕೊಂಡು ಬಂದಿರುತ್ತಾರೆ. ಇದು ಬಿಬಿಎಂಪಿ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಆದ್ದರಿಂದ ಸಾಂಸ್ಥಿಕ ಕ್ವಾರಂಟೈನ್ ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಗಿದ್ದು, ಇದಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕ್ರಿಸ್‌ಮಸ್, ಹೊಸ ವರ್ಷಾಚರಣೆಗೆ ಬ್ರೇಕ್? :
ಕ್ರಿಸ್‌ಮಸ್ ಮತ್ತು ಹೊಸ ವರ್ಷಾಚರಣೆ ಹೊಸ್ತಿಲಲ್ಲೇ ರೂಪಾಂತರಿ ತಳಿಯ ಸೋಂಕು ಪ್ರಕರಣಗಳು ಕಂಡುಬಂದ ಹಿನ್ನೆಲೆಯಲ್ಲಿ ಈ ಎರಡೂ ಆಚರಣೆಗೆ ಬ್ರೇಕ್ ಬೀಳುವ ಸಾಧ್ಯತೆದಟ್ಟವಾಗಿದೆ. ಕೋವಿಡ್ ತಾಂತ್ರಿಕ ಸಲಹಾಸಮಿತಿ ಶಿಫಾರಸು ಆಧರಿಸಿ ಬಿಬಿಎಂಪಿಯು ಈ ಎರಡೂ ಹಬ್ಬಗಳ ಆಚರಣೆಗೆ ಕೆಲವು ನಿರ್ಬಂಧಗಳನ್ನು ವಿಧಿಸುವ ಅಗತ್ಯವಿದೆ ಎಂದುಪ್ರಸ್ತಾವನೆ ಸಲ್ಲಿಸಲು ಮುಂದಾಗಿದೆ. ಅದರಂತೆ ಸರ್ಕಾರದ ಗ್ರೀನ್ ಸಿಗ್ನಲ್ ದೊರಕಿದರೆ, ಸಂಭ್ರಮಕ್ಕೆ ತಡೆ ಉಂಟಾಗಲಿದೆ.