Advertisement

ಒಮಿಕ್ರಾನ್‌ ಪ್ರಕರಣಗಳ ಸ್ಪಷ್ಟೀಕರಣ ಕಷ್ಟಸಾಧ್ಯ

01:40 PM Jan 23, 2022 | Team Udayavani |

ರಾಮನಗರ: ಜಿಲ್ಲೆಯಲ್ಲಿ ಸದ್ಯ ಇರುವ 1872 ಸಕ್ರಿಯ ಪ್ರಕರಣಗಳ ಪೈಕಿ ಬಹುತೇಕ ಒಮಿಕ್ರಾನ್‌ ಸೋಂಕು. ಆದರೆ ಇದನ್ನು ಅಧಿಕೃತವಾಗಿ ಆರೋಗ್ಯ ಇಲಾಖೆಹೇಳಲು ಸಾಧ್ಯವಾಗುತ್ತಿಲ್ಲ. ಕಾರಣ ಜಿನೋಂ ಸೀಕ್ವೆನ್ಸಿಂಗ್‌ ಪರೀಕ್ಷೆಗೆ ಜಿಲ್ಲೆಯಿಂದ ಮಾದರಿಗಳೇ ರವಾನೆಯಾಗುತ್ತಿಲ್ಲ!

Advertisement

ಈ ವಿಚಾರವನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳೇ ಒಪ್ಪಿಕೊಳ್ಳುತ್ತಾರೆ. ಒಮಿಕ್ರಾನ್‌ ಸೋಂಕು ಪತ್ತೆಗಾಗಿ ಜಿನೋಂ ಸೀಕ್ವೆನ್ಸಿಂಗ್‌ ಪರೀಕ್ಷಾ ವ್ಯವಸ್ಥೆ ಜಿಲ್ಲೆಯಲ್ಲಿ ಲಭ್ಯವಿಲ್ಲ. ಬೆಂಗಳೂರಿನಲ್ಲಿರುವ ಪ್ರಯೋಗಾಲಯಗಳಲ್ಲಿ ಒತ್ತಡಹೆಚ್ಚಾಗಿರುವುದರಿಂದ ಮಾದರಿಗಳನ್ನುಜಿಲ್ಲೆಯಿಂದ ಕಳುಹಿಸುತ್ತಲೇ ಇಲ್ಲ ಎಂಬ ಅಂಶ ಬಯಲಿಗೆ ಬಂದಿದೆ.

ಕೋವಿಡ್‌ 3ನೇ ಅಲೆ ಆರಂಭವಾದ ನಂತರ ಕೆಲದಿನಗಳು ಜಿನೋಂ ಸೀಕ್ವೆನ್ಸಿಂಗ್‌ ಪರೀಕ್ಷೆಗಾಗಿ ಕೆಲವು ಮಾದರಿಗಳನ್ನು ಕಳುಹಿಸಲಾಗಿತ್ತು. ಆ ಫ‌ಲಿತಾಂಶಗಳಲ್ಲಿ ಒಮಿಕ್ರಾನ್‌ ಪತ್ತೆಯಾಗಿರಲಿಲ್ಲ. ಜಿನೋಂ ಸೀಕ್ವೆನ್ಸಿಂಗ್‌ ಪತ್ತೆಗಾಗಿ ರಾಜ್ಯದಲ್ಲಿ ಇರುವುದೇ 4 ಪ್ರಯೋಗಾಲಯಗಳು. ಹೀಗಾಗಿ ಈ ಪ್ರಯೋಗಾಲಯಗಳ ಮೇಲೆ ಒತ್ತಡವಿದೆ. ಅಲ್ಲದೆ ಜಿಲ್ಲೆಯಲ್ಲಿಯೂ ಸೋಂಕು ತೀವ್ರಗತಿಯಲ್ಲಿ ವ್ಯಾಪಿಸುತ್ತಿದ್ದು ಎಲ್ಲ ಮಾದರಿಗಳನ್ನು ಪ್ರಯೋಗಾಲಯಗಳಿಗೆ ಕಳುಹಿಸಲು ಸಾಧ್ಯವಿಲ್ಲ , ಹೀಗಾಗಿಮಾದರಿಗಳನ್ನು ಕಳುಹಿಸುವುದನ್ನೇ ನಿಲ್ಲಿಸಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಒಮಿಕ್ರಾನ್‌ ಕೇಸ್‌ ಅಲ್ಲ, ಡಿಎಚ್‌ಒ:ಜಿಲ್ಲೆಯಲ್ಲಿ ಸೋಂಕಿನ ಪ್ರಕರಣಗಳುದಿನೇದಿನೇ ಏರಿಕೆಯಾಗುತ್ತಿದೆ. ಸದ್ಯಬೆಂಗಳೂರು ಒಮಿಕ್ರಾನ್‌ ಹಾಟ್‌ಸ್ಪಾಟ್‌ಆಗಿದೆ. ಬೆಂಗಳೂರು ಮಗ್ಗಲಲ್ಲೇಇರುವ ರಾಮನಗರ ಜಿಲ್ಲೆಯ ಬಹುತೇಕ ಮಂದಿ ಉದ್ಯೋಗ ಸೇರಿದಂತೆ ವಿವಿಧಕಾರಣಗಳಿಗೆ ಬೆಂಗಳೂರನ್ನು ಅವಲಂಭಿಸಿದ್ದಾರೆ. ಆದರೂ ರಾಮನಗರಜಿಲ್ಲೆಯಲ್ಲಿ ಒಮಿಕ್ರಾನ್‌ ಪ್ರಕರಣಗಳುಪತ್ತೆಯಾಗಿಲ್ಲ ಎಂಬ ಸೋಜಿಗವನ್ನುಜಿಲ್ಲೆಯ ಜನತೆ ವ್ಯಕ್ತಪಡಿಸಿದ್ದರು.ಈ ವಿಚಾರದಲ್ಲಿ ಪತ್ರಿಕೆ ಡಿಎಚ್‌ಒಡಾ.ನಿರಂಜನ್‌ ಅವರನ್ನು ಪ್ರಶ್ನಿಸಿದಾಗ ಜಿಲ್ಲೆಯಲ್ಲಿ ಒಮಿಕ್ರಾನ್‌ ಪ್ರಕರಣಗಳುಪತ್ತೆಯಾಗಿಲ್ಲ ಎಂದು ತಿಳಿಸಿದ್ದರು.

ಒಮಿಕ್ರಾನ್‌ ಸೋಂಕು ಪತ್ತೆಗಾಗಿ ಮಾದರಿಗಳನ್ನು ಬೆಂಗಳೂರಿಗೆ ಕಳುಹಿಸಲಾಗುತ್ತಿದೆ ಎಂದಿದ್ದರು. ಪ್ರಯೋಗಾಲಯಗಳ ಮೇಲಿನ ಒತ್ತಡದಿಂದಾಗಿ ಮಾದರಿಗಳನ್ನು ಕಳುಹಿಸಲಾಗುತ್ತಿಲ್ಲ ಎಂದು ಅವರ ಕಚೇರಿಯ ಮೂಲಗಳೇ ತಿಳಿಸಿವೆ.

Advertisement

ಬಹುತೇಕ ಒಮಿಕ್ರಾನ್‌ ಪ್ರಕರಣ: ಜಿಲ್ಲೆಯಲ್ಲಿ ಸದ್ಯ ಸಕ್ರಿಯವಾಗಿರುವ ಶೇ.80ಕ್ಕೂ ಹೆಚ್ಚು ಸೋಂಕು ಪ್ರಕರಣಗಳು ಒಮಿಕ್ರಾನ್‌ ವೈರಸ್‌ ಸೋಂಕುಎಂದು ಸರ್ಕಾರಿ ಮತ್ತು ಖಾಸಗಿ ವಲಯದ ವೈದ್ಯರು ಪ್ರತಿಕ್ರಿಯಿಸಿದ್ದಾರೆ.ಕೋವಿಡ್‌ ಡೆಲ್ಟಾ , ಡೆಲ್ಟಾ ಪ್ಲಸ್‌ರೂಪಾಂತರಿ ವೈರಸ್‌ಗಳ ಹಾಗೆ ಒಮಿಕ್ರಾನ್‌ ಹೆಚ್ಚು ಆಪಾಯಕಾರಿ ವೈರಸ್‌ಅಲ್ಲ. ಮೇಲಾಗಿ ಈಗಾಗಲೇ ಬಹುತೇಕಮಂದಿ ಕೋವಿಡ್‌ ಲಸಿಕೆ ಪಡೆದಿದ್ದಾರೆ.ಹೀಗಾಗಿ ಸಾಧಾರಣ ಚಿಕಿತ್ಸೆಯಿಂದಲೇಸೋಂಕಿತರು ಗುಣಮುಖರಾಗುತ್ತಿದ್ದಾರೆಎಂದು ವೈದ್ಯರು ಪ್ರತಿಕ್ರಿಯಿಸಿದ್ದಾರೆ.

ಮಾರ್ಗಸೂಚಿ ಪಾಲಿಸಿ: ಕೋವಿಡ್‌ ಸೋಂಕು ಇನ್ನು ಮುಗಿದಿಲ್ಲ, ಒಮಿ ಕ್ರಾನ್‌ ಸೋಂಕಿನ ಆರ್ಭಟ ಕಡಿಮೆಯಾಗಿಲ್ಲ. ಹೀಗಾಗಿ ನಾಗರಿಕರು ಮಾರ್ಗಸೂಚಿ ಪಾಲಿಸಿ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ನಾಗರಿಕರಿಗೆ ಮನವಿ ಮಾಡಿದ್ದಾರೆ.

-ಬಿ.ವಿ.ಸೂರ್ಯ ಪ್ರಕಾಶ್‌

Advertisement

Udayavani is now on Telegram. Click here to join our channel and stay updated with the latest news.

Next