Advertisement
ದಕ್ಷಿಣ ಆಫ್ರಿಕಾದಿಂದ ಬಂದ 34ವರ್ಷದ ವ್ಯಕ್ತಿ ಡಿ.1ರಂದು ಬೆಂಗಳೂರಿಗೆ ಆಗಮಿಸಿದ್ದು, ಈ ವೇಳೆ ವ್ಯಕ್ತಿಗೆ ಕೊರೊನಾ ನೆಗೆಟಿವ್ ಬಂದಿತ್ತು. ನಗರದ ಬೌರಿಂಗ್ ಆಸ್ಪತ್ರೆಯಲ್ಲಿ ಐಸೋಲೇಶನ್ ಮಾಡಲಾಗಿತ್ತು. ಇದಾದ ನಂತರ ಡಿ.3ರಂದು ಕೋವಿಡ್ ಸೋಂಕು ದೃಢಪಟ್ಟಿತ್ತು. ಪರೀಕ್ಷೆ ವೇಳೆ ವ್ಯಕ್ತಿಯ ಸಿಟಿ ವ್ಯಾಲ್ಯು ಕಡಿಮೆ ಇದ್ದುದರಿಂದ ಜಿನೋಮಿಕ್ ಸಿಕ್ವೆನ್ಸಿಂಗ್ ಕಳುಹಿಸಲಾಗಿತ್ತು. ಈ ವೇಳೆ ರೂಪಾಂತರಿ ತಳಿ ದೃಢಪಟ್ಟಿದೆ.
ಸೋಂಕಿತ ವ್ಯಕ್ತಿಯ 5 ಪ್ರಾಥಮಿಕ ಹಾಗೂ 15 ದ್ವಿತೀಯ ಸಂಪರ್ಕಿತರನ್ನು ಪತ್ತೆ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಅವರೆಲ್ಲರ ವರದಿ ನೆಗೆಟಿವ್ ಬಂದಿದ್ದು, ಒಮಿಕ್ರಾನ ಸೋಂಕಿತರನ್ನು ಬೌರಿಂಗ್ ಆಸ್ಪತ್ರೆಯಲ್ಲಿ ಐಸೋಲೇಶನ್‌ಗೊಳಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಸಚಿವ ಡಾ| ಕೆ. ಸುಧಾರ್ ತಿಳಿಸಿದರು. ವರದಿಗೆ 9ದಿನಗಳು!
ಜಿನೋಮಿಕ್ ಸಿಕ್ವೆನ್ಸಿಂಗ್ ವರದಿಯನ್ನು ಪಡೆಯಲು ರಾಜ್ಯದಲ್ಲಿ ಸುಮಾರು 9 ದಿನಗಳು ಕಾಯಬೇಕಾಗಿದೆ. ದಕ್ಷಿಣ ಆಫ್ರಿಕಾದಿಂದ ಬಂದ 34ವರ್ಷದ ವ್ಯಕ್ತಿಯ ಮಾದರಿಯನ್ನು ಡಿ.3ರಂದು ಪರೀಕ್ಷೆಗೆ ಕಳುಹಿಸಿದ್ದು, ಡಿ.12ರಂದು ವರದಿ ಬಂದಿದೆ. ಡಿ.2ರಂದು ರಾಜ್ಯದಲ್ಲಿ ಇಬ್ಬರಿಗೆ ಒಮಿಕ್ರಾನ್ ತಗುಲಿತಲರುವುದು ದೃಢಪಟ್ಟಿತ್ತು.
Related Articles
Advertisement
ರಾಜ್ಯದಲ್ಲಿ 330 ಕೋವಿಡ್ ಪಾಸಿಟಿವ್ ಪತ್ತೆ: 4 ಸಾವುರಾಜ್ಯದಲ್ಲಿ ರವಿವಾರ 330 ಮಂದಿಯಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದ್ದು, ನಾಲ್ವರು ಮೃತಪಟ್ಟಿದ್ದಾರೆ. ಬೆಂಗಳೂರು ನಗರದಲ್ಲಿ 205, ದ.ಕ. 15,ಕೊಡಗು 40, ಮೈಸೂರು 13, ಶಿವಮೊಗ್ಗ 11, ಪ್ರಕರಣಗಳು ದಾಖಲಾಗಿವೆ. ಬಾಗಲಕೋಟೆ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಗದಗ, ಕೊಪ್ಪಳ, ರಾಯಚೂರು, ರಾಮನಗರ, ಯಾದಗಿರಿಯಲ್ಲಿ ಶೂನ್ಯ ಪ್ರಕರಣ ಹಾಗೂ ಇತರೆಡೆ ಬೆರಳೆಣಿಕೆಯಷ್ಟು ಪ್ರಕರಣಗಳು ದಾಖಲಾಗಿವೆ. ಬೆಂಗಳೂರು ನಗರದಲ್ಲಿ 3 ಹಾಗೂ ಬೀದರ್‌ನಲ್ಲಿ 1 ಸಾವು ಸಂಭವಿಸಿದೆ. ಜತೆಗೆ 304 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ರಾಜ್ಯದಲ್ಲಿ ಪ್ರಸ್ತುತ ಒಟ್ಟು 7,328 ಸಕ್ರಿಯ ಪ್ರಕರಣಗಳಿವೆ.