Advertisement

ನೇತ್ರದಾನ ಘೋಷಣೆ ಸಮಾರಂಭ

11:08 AM Jan 24, 2018 | Team Udayavani |

ಮಹಾನಗರ: ಮರಣ ಅನಂತರ ಮಣ್ಣು ಸೇರುವ ಕಣ್ಣುಗಳನ್ನು ದಾನ ಮಾಡಿ ಇನ್ನೊಬ್ಬರ ಬದುಕನ್ನು
ಬೆಳಗಿಸುವ ಕಾರ್ಯಕ್ಕೆ ಪ್ರತಿಯೊಬ್ಬರು ಕೈ ಜೋಡಿಸಬೇಕು ಎಂದು ದ.ಕ. ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ| ಎಂ.ಆರ್‌. ರವಿ ಹೇಳಿದರು.

Advertisement

ದ.ಕ. ಜಿಲ್ಲಾಡಳಿತ, ಜಿಲ್ಲಾ ಪಂ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಸರಕಾರಿ ಜಿಲ್ಲಾ ವೆನ್ಲಾಕ್‌ ಆಸ್ಪತ್ರೆ ಸಹಯೋಗದಲ್ಲಿ ಮಂಗಳವಾರ ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಆಯೋಜಿಸಿದ ಸ್ಪರ್ಶ ಮತ್ತು ಸಮೂಹ ಮಾನಸಿಕ ಆರೋಗ್ಯ ಶಿಕ್ಷಣ, ನೇತ್ರದಾನ ಅಭಿನಂದನೆ ಮತ್ತು ನೇತ್ರದಾನ ಘೋಷಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಶಿಕ್ಷಣ ಹಾಗೂ ಆರೋಗ್ಯ ಜತೆಯಾಗಿ ಸಾಗಬೇಕು ಎನ್ನುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿ
ಸಲಾಗುತ್ತಿದೆ. ಇದರ ಪ್ರಮುಖ ಭಾಗವಾಗಿ 340 ಮಂದಿ ನೇತ್ರದಾನಿಗಳನ್ನಷ್ಟೆ ಗುರುತಿಸಲು ಸಾಧ್ಯವಾದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ, ಒಂದೇ ವರ್ಷದಲ್ಲಿ ನೇತ್ರದಾನಿಗಳ ಸಂಖ್ಯೆ 12 ಸಾವಿರ ಗಡಿ ದಾಟಿದೆ. ಇದು ರಾಜ್ಯದ ವೈದ್ಯಕೀಯ ಇತಿಹಾಸದಲ್ಲೇ ಪ್ರಥಮ. ಇದಕ್ಕಾಗಿ ಶ್ರಮಿಸಿದ ತಂಡದ ಸದಸ್ಯರ ಕಾರ್ಯ ಶ್ಲಾಘನೀಯ ಎಂದರು.

ಯಾವುದೇ ಉತ್ತಮ ಕಾರ್ಯವೂ ಒಬ್ಬನಿಂದ ಸಾಧ್ಯವಿಲ್ಲ. ಎಲ್ಲ ಇಲಾಖೆಯೂ ಒಮ್ಮತದಿಂದ ಮುನ್ನಡೆದರೆ ಏನನ್ನಾದರೂ ಸಾಧಿಸಬಹುದು ಎಂಬುದು ಈ ಕಾರ್ಯದ ಮೂಲಕ ರುಜುವಾತಾವಾಗಿದೆ. ಈಗಾಗಲೇ ನೇತ್ರದಾನಕ್ಕೆ ಸಹಿ ಹಾಕಿದ ಜನರ ಮಾಹಿತಿ ಕಲೆ ಹಾಕಿದೆ. ಅವರಿಗೆ ಗುರುತಿನ ಚೀಟಿಯನ್ನು ವಿತರಿಸಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮವನ್ನು ದ.ಕ. ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅವರು ಉದ್ಘಾಟಿಸಿದರು. ನೇತ್ರ ತಜ್ಞ
ಡಾ| ರತ್ನಾಕರ್‌, ದಿನಕರ್‌ ಶೆಟ್ಟಿ, ಡಾ| ಜೆಸಿಂತಾ, ಸತೀಶ್‌ ಚಂದ್ರ ಮೊದಲಾದವರು ಉಪಸ್ಥಿತರಿದ್ದರು. ಜಯಂತ್‌
ಅವರು ಸ್ವಾಗತಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಎಂ. ರಾಮಕೃಷ್ಣ ರಾವ್‌ ಅವರು
ಪ್ರಸ್ತಾವನೆಗೈದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next