Advertisement

ಸಿಟ್ಟಾಗಿ ಪಕ್ಷದ ಕಚೇರಿಗೆ ನಡೆದೇ ಹೋದ ಓಮರ್‌

11:44 PM Jul 13, 2023 | Team Udayavani |

ಶ್ರೀನಗರ: ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ಅವರಿಗೆ ಕಣಿವೆ ಪೊಲೀಸರು ಬೆಂಗಾವಲು ವಾಹನ ಹಾಗೂ ಐಟಿಬಿಪಿ ರಕ್ಷಣ ಪಡೆಯನ್ನು ನಿರಾಕರಿಸಿರುವ ಹಿನ್ನೆಲೆಯಲ್ಲಿ ಗುರುವಾರ ಓಮರ್‌ ತಮ್ಮ ನಿವಾಸದಿಂದ ಪಕ್ಷದ ಕಚೇರಿಗೆ ಕಾಲ್ನಡಿಗೆಯಲ್ಲೇ ತೆರಳಿದ್ದಾರೆ.

Advertisement

1931ರಲ್ಲಿ ಕಾಶ್ಮೀರದ ಮಹಾರಾಜ ಹರಿ ಸಿಂಗ್‌ನ ನಿರಂಕುಶ ಆಡಳಿತವನ್ನು ಪ್ರಶ್ನಿಸಿ ನಡೆಸಿದ ಹೋರಾಟದಲ್ಲಿ ಮಹಾರಾಜನ ಸೇನೆಯಿಂದ 22 ಕಾಶ್ಮೀರಿಗಳನ್ನು ಹತ್ಯೆಗೈಯ್ಯ­ಲಾಗಿತ್ತು. ಆ ಹುತಾತ್ಮ ಕಾಶ್ಮೀರಿಗಳ ಸ್ಮರ­ಣಾರ್ಥ ಜು.13ರಂದು ಪುಣ್ಯಸ್ಮರಣೆ ಆಚರಿಸ­ಲಾಗುತ್ತದೆ. ಈ ಹಿನ್ನೆಲೆಯಲ್ಲಿ ನ್ಯಾಶನಲ್‌ ಕಾನ್ಫರೆನ್ಸ್‌ ಪಕ್ಷದ ಉಪಾಧ್ಯಕ್ಷರಾದ ಒಮರ್‌, ತಮ್ಮ ಪಕ್ಷದ ಪ್ರಧಾನ ಕಚೇರಿಗೆ ತೆರಳಲು ಮುಂದಾಗಿದ್ದರು. ಆದರೆ ಬೆಂಗಾವಲು ಮತ್ತು ರಕ್ಷಣ ಪಡೆ ನೀಡಲು ನಿರಾಕರಿಸಿದ ಹಿನ್ನೆಲೆ ಸ್ವತಃ ತಾವೇ ನಡೆದು ಹೊರಟಿ­ದ್ದಾರೆ. ಬಳಿಕ ಈ ವೀಡಿಯೋವನ್ನೂ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next