Advertisement

ತೆರೆಯಿತು ಒಲಿಂಪಿಕ್ಸ್‌ ಗ್ರಾಮದ ಬಾಗಿಲು : ಒಲಿಂಪಿಕ್ಸ್‌ಗೆ ಭಾರತದ 228 ಸದಸ್ಯರ ಪಡೆ

09:02 AM Jul 14, 2021 | Team Udayavani |

ಟೋಕಿಯೊ : ಟೋಕಿಯೊ “ಒಲಿಂಪಿಕ್ಸ್‌ ವಿಲೇಜ್‌’ ಯಾವುದೇ ಪ್ರಚಾರ, ಸಂಪ್ರದಾಯ ವಿಲ್ಲದೆ ಮಂಗಳವಾರ ಅಧಿಕೃತವಾಗಿ ಉದ್ಘಾಟನೆಗೊಂಡಿತು. ಈ ಗ್ರಾಮ ವನ್ನು ಪ್ರವೇಶಿಸಿದ ಮೊದಲ ತಂಡ ವೆಂಬ ಹೆಗ್ಗಳಿಕೆ ಜೆಕ್‌ ಗಣರಾಜ್ಯದ ಕ್ರೀಡಾಳುಗಳದ್ದಾಯಿತು. ಇದೇ ವೇಳೆ ಭಾರತದ ಹಾಯಿದೋಣಿ ತಂಡದ ಸದಸ್ಯರು ಮೊದಲಿಗರಾಗಿ ಟೋಕಿಯೊ ತಲುಪಿದ್ದಾರೆ.
ಒಲಿಂಪಿಕ್ಸ್‌ ವಿಲೇಜ್‌ ಉದ್ಘಾಟನೆ ಯನ್ನು ಅದ್ಧೂರಿಯಾಗಿ ನಡೆಸು ವುದು ಸಂಪ್ರದಾಯ. ಆದರೆ ಕೋವಿಡ್‌ ಮಹಾಮಾರಿಯಿಂದಾಗಿ ಮೊದಲ ಸಲ ಈ ಸಂಪ್ರದಾಯವನ್ನು ಕೈಬಿಡಲಾಯಿತು. ಮಾಧ್ಯಮದವ ರನ್ನೂ ದೂರ ಇರಿಸಲಾಯಿತು.

Advertisement

ಕಟ್ಟುನಿಟ್ಟಿನ ನಿಯಮಾವಳಿ
ಟೋಕಿಯೊದ ಹರುಮಿ ಪ್ರದೇಶದ 44 ಹೆಕ್ಟೇರ್‌ನಷ್ಟು ವಿಶಾಲ ಜಾಗದಲ್ಲಿ ಈ ಒಲಿಂಪಿಕ್ಸ್‌ ಗ್ರಾಮ ತಲೆಯೆತ್ತಿದೆ. ಸುಮಾರು 18 ಸಾವಿರ ಕ್ರೀಡಾಪಟುಗಳು ಹಾಗೂ ಅಧಿಕಾರಿಗಳು ಇಲ್ಲಿ ತಂಗಲಿದ್ದಾರೆ. ದಿನವೂ ಕೋವಿಡ್‌ ಟೆಸ್ಟ್‌ ನಡೆಯ ಲಿದೆ. ಇದಕ್ಕಾಗಿಯೇ 24 ಗಂಟೆ ಸೇವೆ ಒದಗಿಸುವ ಫಿವರ್‌ ಕ್ಲಿನಿಕ್‌ ಇದೆ.

ಕ್ರೀಡಾ ಗ್ರಾಮದಲ್ಲಿ ಆ್ಯತ್ಲೀಟ್‌ಗಳಿಗೆ ಕಟ್ಟುನಿಟ್ಟಿನ ನಿಯಮಾವಳಿಯನ್ನು ರೂಪಿಸಲಾಗಿದೆ. ಕ್ರೀಡಾ ಚಟುವಟಿ ಕೆಗಳಿಗೆ ಸಂಬಂಧಿಸಿದಂತೆ ಅಗತ್ಯವಿದ್ದ ರಷ್ಟೇ ಮೊದಲೇ ಅನುಮತಿ ಪಡೆದು ಹೊರಗೆ ಹೋಗಬಹುದು. ಉಳಿದಂತೆ ಕಾರಿಡಾರ್‌ ಪ್ರವೇಶ, ವಾಕಿಂಗ್‌, ಸುತ್ತಾಟವನ್ನೆಲ್ಲ ನಿಷೇಧಿಸಲಾಗಿದೆ. ಸ್ಪರ್ಧೆ ಮುಗಿದ ಎರಡೇ ದಿನದಲ್ಲಿ ಗ್ರಾಮವನ್ನು ತೊರೆಯಬೇಕಿದೆ.
ಜಪಾನೀ, ಪಾಶ್ಚಿಮಾತ್ಯ ಹಾಗೂ ಏಶ್ಯನ್‌ ಶೈಲಿಯ ಆಹಾರ ಪದಾರ್ಥದ ವ್ಯವಸ್ಥೆ ಇಲ್ಲಿದೆ. ದಿನಂಪ್ರತಿ 45 ಸಾವಿರ ದಷ್ಟು ಊಟದ ವ್ಯವಸ್ಥೆ ಇದೆ.

ಮೀಡಿಯಾ ಸೆಂಟರ್‌
ಸುಮಾರು ಎರಡೂವರೆ ಸಾವಿರ ದಷ್ಟು ಮಾಧ್ಯಮದವರಿಗೆ ದಿನದ 24 ಗಂಟೆಯೂ ವ್ಯವಸ್ಥೆ ಒದಗಿಸುವ ವಿಶೇಷ ಸೌಲಭ್ಯವನ್ನು ಕಲ್ಪಿಸಲಾಗಿದೆ. ಅತ್ಯಾಧುನಿಕ ಅಂತಾರಾಷ್ಟ್ರೀಯ ಬ್ರಾಡ್‌ ಕಾಸ್ಟಿಂಗ್‌ ಸೆಂಟರ್‌ ಇಲ್ಲಿದೆ.

228 ಸದಸ್ಯರು
ಒಲಿಂಪಿಕ್ಸ್‌ಗೆ ಭಾರತದ 228 ಸದಸ್ಯರ ಬೃಹತ್‌ ಪಡೆ ತೆರಳಲಿದೆ ಎಂದು ಐಒಎ ಅಧ್ಯಕ್ಷ ನರೀಂದರ್‌ ಬಾತ್ರಾ ವರ್ಚುವಲ್‌ ಕಾನ್ಫರೆನ್ಸ್‌ ನಲ್ಲಿ ತಿಳಿಸಿದರು. ಇದು 119 ಕ್ರೀಡಾಪಟುಗಳನ್ನು ಒಳಗೊಂಡಿದೆ. ಉಳಿದವರು ಸಹಾಯಕ ಸಿಬಂದಿ ಹಾಗೂ ಅಧಿಕಾರಿಗಳಾಗಿದ್ದಾರೆ. ಒಲಿಂಪಿಕ್ಸ್‌ ಇತಿಹಾಸದಲ್ಲೇ ಭಾರತ ಕಳುಹಿಸುತ್ತಿರುವ ಬೃಹತ್‌ ತಂಡ ಇದಾಗಿದೆ.
ಕ್ರೀಡಾಪಟುಗಳಲ್ಲಿ 67 ಪುರುಷರು ಹಾಗೂ 52 ಮಹಿಳೆಯರು ಸೇರಿದ್ದಾರೆ. ಇವರು ಒಟ್ಟು 85 ಪದಕ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next