Advertisement

ಸೈನಾ, ಶ್ರೀಕಾಂತ್‌ಗೆ ಒಲಿಂಪಿಕ್ಸ್‌ ಟಿಕೆಟ್‌ ನಿರೀಕ್ಷೆ

11:10 AM Feb 19, 2020 | sudhir |

ಬಾರ್ಸಿಲೋನಾ: ಮಂಗಳವಾರದಿಂದ ಆರಂಭವಾಗಲಿರುವ 170,000 ಯುಎಸ್‌ ಡಾಲರ್‌ ಬಹುಮಾನದ “ಬಾರ್ಸಿಲೋನಾ ಸ್ಪೇನ್‌ ಮಾಸ್ಟರ್ ಬ್ಯಾಡ್ಮಿಂಟನ್‌’ ಪಂದ್ಯಾವಳಿಯಲ್ಲಿ ಸೈನಾ ನೆಹ್ವಾಲ್‌ ಮತ್ತು ಕೆ. ಶ್ರೀಕಾಂತ್‌ ಅಗ್ನಿಪರೀಕ್ಷೆ ಎದುರಿಸಲಿದ್ದಾರೆ. ಇವರ ಒಲಿಂಪಿಕ್ಸ್‌ ಕನಸು ಇಲ್ಲಿ ಚಿಗುರೀತೇ ಎಂಬುದನ್ನು ಎಲ್ಲರೂ ಕುತೂಹಲದಿಂದ ಗಮನಿಸುತ್ತಿದ್ದಾರೆ.

Advertisement

ಇವರಿಬ್ಬರೂ 2019ರಲ್ಲಿ ಅಸ್ಥಿರ ಪ್ರದರ್ಶನ ನೀಡುತ್ತಲೇ ಬಂದಿದ್ದರು. ಈ ವರ್ಷವೂ ಪರಿಸ್ಥಿತಿ ಭಿನ್ನವಾಗೇನೂ ಇಲ್ಲ. ಈವರೆಗಿನ 3 ಕೂಟಗಳಲ್ಲಿ ಸೈನಾ ಒಂದರಲ್ಲಷ್ಟೇ ಮೊದಲ ಸುತ್ತು ದಾಟಿದ್ದಾರೆ. ಶ್ರೀಕಾಂತ್‌ ಅವರಂತೂ ಮೂರರಲ್ಲೂ ಮೊದಲ ಸುತ್ತಿನ ಆಘಾತಕ್ಕೆ ಸಿಲುಕಿದ್ದಾರೆ. “ರೇಸ್‌ ಟು ಟೋಕಿಯೊ’ ರ್‍ಯಾಂಕಿಂಗ್‌ನಲ್ಲಿ ಕ್ರಮವಾಗಿ 22ನೇ ಹಾಗೂ 26ನೇ ಸ್ಥಾನದಲ್ಲಿದ್ದಾರೆ.

ಎ. 30 ಅಂತಿಮ ದಿನ
ಎಪ್ರಿಲ್‌ 30 ಒಲಿಂಪಿಕ್ಸ್‌ ಅರ್ಹತೆಗೆ ಅಂತಿಮ ದಿನವಾಗಿದ್ದು, ಇಲ್ಲಿ ಎರಡೂ ವಿಭಾಗಗಳಿಂದ ಟಾಪ್‌-16 ಆಟಗಾರರನ್ನಷ್ಟೇ ಪರಿಗಣಿಸಲಾಗುವುದು. ಬಾರ್ಸಿಲೋನಾ ಸೇರಿದಂತೆ ಈ ಅವಧಿಯಲ್ಲಿ ಒಟ್ಟು 7 ಬ್ಯಾಡ್ಮಿಂಟನ್‌ ಕೂಟಗಳಿವೆ.

ಪಿ.ವಿ. ಸಿಂಧು, ಬಿ. ಸಾಯಿಪ್ರಣೀತ್‌, ಸಾತ್ವಿಕ್‌ರಾಜ್‌ ರಾಂಕಿರೆಡ್ಡಿ-ಚಿರಾಗ್‌ ಶೆಟ್ಟಿ ಅವರ ಒಲಿಂಪಿಕ್ಸ್‌ ಪ್ರವೇಶ ಬಹುತೇಕ ಖಚಿತಗೊಂಡಿದೆ.

ಬಾರ್ಸಿಲೋನಾ ಕೂಟದ ಮೊದಲ ಸುತ್ತಿನಲ್ಲಿ ಸೈನಾ ನೆಹ್ವಾಲ್‌ ಜರ್ಮನಿಯ ಯೋನ್‌ ಲೀ ವಿರುದ್ಧ ಆಡಲಿದ್ದಾರೆ. ಶ್ರೀಕಾಂತ್‌ ಭಾರತದವರೇ ಆದ ಶುಭಂಕರ್‌ ಡೇ ಅವರ ಸವಾಲನ್ನು ಎದುರಿಸಬೇಕಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next