Advertisement

ಕಿವೀಸ್‌ ಒಲಿಂಪಿಕ್‌ ಓಟಗಾರ ಕೆಕೆಆರ್‌ ತಂಡದ ತರಬೇತುದಾರ

07:40 PM Aug 25, 2020 | mahesh |

ಕೋಲ್ಕತಾ: ನ್ಯೂಜಿಲ್ಯಾಂಡಿನ ಮಾಜಿ ಒಲಿಂಪಿಕ್‌ ಓಟಗಾರ ಕ್ರಿಸ್‌ ಡೊನಾಲ್ಡ್‌ಸನ್‌ ಅವರೀಗ ಐಪಿಎಲ್‌ನಲ್ಲಿ ತರಬೇತುದಾರರಾಗಿ ಕಾಣಿಸಿಕೊಂಡಿದ್ದಾರೆ. 2020ರ ಐಪಿಎಲ್‌ ಋತುವಿನಲ್ಲಿ ಅವರು ಕೆಕೆಆರ್‌ ತಂಡದ ಕಂಡೀಷನಿಂಗ್‌ ಕೋಚ್‌ ಆಗಿ ನೇಮಿಸಲ್ಪಟ್ಟಿದ್ದಾರೆ.

Advertisement

ಡೊನಾಲ್ಡ್‌ಸನ್‌ 1996 ಮತ್ತು 2000ದ ಒಲಿಂಪಿಕ್‌ ಕ್ರೀಡಾಕೂಟದಲ್ಲಿ ನ್ಯೂಜಿಲ್ಯಾಂಡನ್ನು ಪ್ರತಿನಿಧಿಸಿದ್ದರು. 1998 ಮತ್ತು 2006ರ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲೂ ಸ್ಪರ್ಧಿಸಿದ್ದರು. ಡೊನಾಲ್ಡ್‌ಸನ್‌ ಅವರನ್ನೊಳಗೊಂಡ ತಂಡ ಸ್ಥಾಪಿಸಿದ 4/100 ಮೀ. ರಿಲೇ ಸ್ಪರ್ಧೆಯ ರಾಷ್ಟ್ರೀಯ ದಾಖಲೆ ಈಗಲೂ ಅಜೇಯವಾಗಿದೆ.

ಡೊನಾಲ್ಡ್‌ಸನ್‌ ಆನ್‌ಲೈನ್‌ ಮೂಲಕ ಕೆಕೆಆರ್‌ ಆಟಗಾರರಿಗೆ “ಬೆಡ್‌ರೂಮ್‌ ವರ್ಕೌಟ್‌’ ಬಗ್ಗೆ ತುಸು ಕಠಿನವಾದ ಟಿಪ್ಸ್‌ ನೀಡಲಾರಂಭಿಸಿದ್ದಾರೆ. ನ್ಯೂಜಿಲ್ಯಾಂಡಿನವರೇ ಆದ ಪ್ರಧಾನ ಕೋಚ್‌ ಬ್ರೆಂಡನ್‌ ಮೆಕ್‌ಕಲಮ್‌ ಅವರಿಂದ ಡೊನಾಲ್ಡ್‌ಸನ್‌ ಒಡಂಬಡಿಕೆ ಸಾಧ್ಯವಾಯಿತು. ಕಿವೀಸ್‌ನ ಮತ್ತೋರ್ವ ಮಾಜಿ ಕ್ರಿಕೆಟಿಗ ಕೈಲ್‌ ಮಿಲ್ಸ್‌ ಕೆಕೆಆರ್‌ ತಂಡದ ಬೌಲಿಂಗ್‌ ಕೋಚ್‌ ಆಗಿದ್ದಾರೆ.

ಯಾರೂ ದಪ್ಪ ಆಗಬೇಡಿ
ಇದೇ ವೇಳೆ ಪ್ರಸಕ್ತ ಐಪಿಎಲ್‌ ಮುಗಿಯುವ ತನಕ ಯಾರೂ ದಪ್ಪ ಆಗಬೇಡಿ ಎಂಬುದಾಗಿ ಮೆಕ್‌ಕಲಮ್‌ ಕೆಕೆಆರ್‌ ಆಟಗಾರರಿಗೆ ಸೂಚನೆ ನೀಡಿದ್ದಾರೆ. ಈ ಸಲದ ಅಭ್ಯಾಸದ ಶರ್ಟ್‌ ಹಾಗೂ ತರಬೇತುದಾರರ ಶರ್ಟ್‌ಗಳೆರಡೂ ಬಹಳ ಬಿಗಿಯಾಗಿರುವುದೇ ಇದಕ್ಕೆ ಕಾರಣ ಎಂದು ತಮಾಷೆ ಮಾಡಿದ್ದಾರೆ ಮೆಕ್‌ಕಲಮ್‌.

Advertisement

Udayavani is now on Telegram. Click here to join our channel and stay updated with the latest news.

Next