Advertisement

ಒಲಿಂಪಿಕ್ಸ್‌ ಮುಂದೂಡಿಕೆ: 2 ವಾರಗಳಲ್ಲಿ ನಿರ್ಧಾರ

11:07 AM Feb 27, 2020 | sudhir |

ಟೋಕಿಯೊ: ಒಲಿಂಪಿಕ್ಸ್‌ಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಕೊರೊನಾ ವೈರಸ್‌ ಜಪಾನ್‌ಗೂ ಅಪ್ಪಳಿಸಿದೆ. ಮುಂಬರುವ ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸುತ್ತಿರುವ ಜಪಾನ್‌ಗೆ ಇದು ನುಂಗಲಾರದ ತುತ್ತಾಗಿದೆ. ಪ್ರಸಕ್ತ ಸನ್ನಿವೇಶದಲ್ಲಿ ಪರಿಸ್ಥಿತಿಯನ್ನು ನಿಯಂತ್ರಿಸುವುದೇ ಅಸಾಧ್ಯವಾಗಿದೆ.

Advertisement

ಹೀಗಿರುವಾಗ ಒಲಿಂಪಿಕ್ಸ್‌ ಕೂಟವನ್ನು ನಡೆಸುವುದು ಹೇಗೆ ಎನ್ನುವ ಪ್ರಶ್ನೆ ಎದ್ದಿದೆ. ಸ್ವತಃ ಸಂಘಟಕರೇ ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಕೂಟವನ್ನು ರದ್ದು ಮಾಡುವ ಅಥವಾ ಮುಂದೂಡುವ ಬಗ್ಗೆ ಇನ್ನೆರಡು ವಾರಗಳಲ್ಲಿ ನಿರ್ಧಾರ ಹೊರಬೀಳಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಟೋಕಿಯೊ ಒಲಿಂಪಿಕ್ಸ್‌ ಸಂಘಟನಾ ಸಮಿತಿ ಸಿಇಒ ತೊಶಿರೊ ಮುಟೊ, “ಒಲಿಂಪಿಕ್ಸ್‌ ಹಾಗೂ ಪ್ಯಾರಾಲಿಂಪಿಕ್ಸ್‌ ಆಯೋಜಿಸುವುದು ನಮ್ಮ ಪ್ರಮುಖ ಗುರಿ. ಪ್ರಧಾನಿ ಶಿಂಜೊ ಅಬೆ ಮುಂದಿನ ಎರಡು ವಾರದಲ್ಲಿ ಸಂಘಟಕರಿಗೆ ಮಾಹಿತಿ ರವಾನಿಸಲಿದ್ದಾರೆ. ಅವರ ಆದೇಶದಂತೆ ಮುಂದುವರಿಯಲಾಗುತ್ತದೆ. ಅವರು ಕೂಟವನ್ನು ರದ್ದುಪಡಿಸಿ ಅಥವಾ ಮುಂದೂಡಿ ಎಂದರೆ ಅದನ್ನೇ ಮಾಡಬೇಕಾಗುತ್ತದೆ’ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next