Advertisement

Boxing: ಲವ್ಲಿನಾ ಕ್ವಾರ್ಟರ್‌ ಫೈನಲ್‌ ಪ್ರವೇಶ… ಅಗ್ರ ಶ್ರೇಯಾಂಕದ ಲೀ ಕ್ವಿನ್‌ ಸವಾಲು

11:08 PM Jul 31, 2024 | Team Udayavani |

ಪ್ಯಾರಿಸ್‌: ಸತತ 2ನೇ ಒಲಿಂಪಿಕ್ಸ್‌ ಪದಕದ ಕನಸು ಕಾಣುತ್ತಿರುವ ಬಾಕ್ಸರ್‌ ಲವ್ಲಿನಾ ಬೊಬೊìಹೇನ್‌ (75 ಕೆಜಿ) ಬುಧವಾರದ ತಮ್ಮ ಮೊದಲ ಬೂಟ್‌ ಗೆದ್ದು ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಅವರು ನಾರ್ವೆಯ ಸುನ್ನಿವಾ ಹಾಫ್ಸ್ಟಾಡ್‌ ವಿರುದ್ಧ 5-0 ಅಂತರದ ಮೇಲುಗೈ ಸಾಧಿಸಿದರು.

Advertisement

ಕಳೆದ ಟೋಕಿಯೊ ಒಲಿಂಪಿಕ್ಸ್‌ ನಲ್ಲಿ ಲವ್ಲಿನಾ 69 ಕೆಜಿ ವಿಭಾಗದಲ್ಲಿ ಕಂಚು ಗೆದ್ದಿದ್ದರು. ಪ್ಯಾರಿಸ್‌ನಲ್ಲಿ ಇದನ್ನು ಸರಿದೂಗಿಸಲು ಇನ್ನೊಂದು ಗೆಲುವು ಅಗತ್ಯವಿದೆ. ಸೆಮಿಫೈನಲ್‌ ಪ್ರವೇಶಿಸಿದರೆ ಪದಕ ಖಾತ್ರಿಯಾಗಲಿದೆ.

ಆದರೆ ಆ. 4ರಂದು ನಡೆಯುವ ಕ್ವಾರ್ಟರ್‌ ಫೈನಲ್‌ ಸ್ಪರ್ಧೆ ಲವ್ಲಿನಾ ಪಾಲಿಗೆ ಅತ್ಯಂತ ಕಠಿನವಾಗಿ ಪರಿಣಮಿಸುವ ಸಾಧ್ಯತೆ ಇದೆ. ಇಲ್ಲಿ ಅವರು ಚೀನದ ಅಗ್ರ ಶ್ರೇಯಾಂಕದ ಲೀ ಕ್ವಿನ್‌ ಸವಾಲು ಎದುರಿಸಲಿದ್ದಾರೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಲೀ ಕ್ವಿನ್‌ ಬೆಳ್ಳಿ ಪದಕ ಜಯಿಸಿದ್ದರು (ಮಿಡ್ಲ್ವೇಟ್‌, 75 ಕೆಜಿ ವಿಭಾಗ). ಇದಕ್ಕೂ ಹಿಂದಿನ ರಿಯೋ ಗೇಮ್ಸ್‌ ನಲ್ಲಿ ಕಂಚು ಹಾಗೂ 2022ರ ಏಷ್ಯಾಡ್‌ನ‌ಲ್ಲಿ ಚಿನ್ನ ಗೆದ್ದ ಹೆಗ್ಗಳಿಕೆ ಲೀ ಕ್ವಿನ್‌ ಅವರದ್ದಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next