Advertisement

2021ರಲ್ಲೂ ಒಲಿಂಪಿಕ್ಸ್‌ ಅಸಾಧ್ಯ; ಶೇ. 77 ಜಪಾನಿಗರ ಅಭಿಪ್ರಾಯ

12:49 AM Jul 07, 2020 | Sriram |

ಟೋಕಿಯೊ: ಮುಂದಿನ ವರ್ಷ ಟೋಕಿಯೊ ಒಲಿಂಪಿಕ್‌ ಕ್ರೀಡಾಕೂಟ ನಡೆದೀತೇ, ಇಲ್ಲವೇ ಎಂಬುದನ್ನು ಖಚಿತವಾಗಿ ನಿರ್ಧರಿಸಲು ಕಾಲವಿನ್ನೂ ಪಕ್ವಗೊಂಡಿಲ್ಲ. ಆದರೆ ಜಪಾನಿಗರಲ್ಲೇ ಈ ಬಗ್ಗೆ ಅನುಮಾನ ಇರುವುದು ಮಾತ್ರ ಸುಳ್ಳಲ್ಲ.

Advertisement

“ಜಪಾನ್‌ ನ್ಯೂಸ್‌ ನೆಟ್‌ವರ್ಕ್‌’ (ಜೆಎನ್‌ಎನ್‌) ನಡೆಸಿದ ವಾರಾಂತ್ಯದ ಸಮೀಕ್ಷೆಯಲ್ಲಿ ಇಂಥದೊಂದು ಋಣಾತ್ಮಕ ಅಭಿಪ್ರಾಯ ವ್ಯಕ್ತವಾಗಿದೆ.

ಶನಿವಾರ “ಜೆಎನ್‌ಎನ್‌’ ಟೋಕಿಯೊ ಒಲಿಂಪಿಕ್ಸ್‌ ಕುರಿತಂತೆ ಸಮೀಕ್ಷೆ ಯೊಂದನ್ನು ನಡೆಸಿತ್ತು.

ಅದರಂತೆ ಶೇ. 77 ಮಂದಿ ಜಪಾನಿಗರು ಮುಂದಿನ ವರ್ಷವೂ ಟೋಕಿಯೊದಲ್ಲಿ ಒಲಿಂಪಿಕ್ಸ್‌ ನಡೆಯುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆದರೆ ಇದಕ್ಕೆ ಯಾವುದೇ ನಿರ್ದಿಷ್ಟ ಕಾರಣ ನೀಡಿಲ್ಲ. “ಒಲಿಂಪಿಕ್ಸ್‌ ನಡೆಯಲಿದೆ’ ಎಂದವರು ಶೇ. 17 ಮಂದಿ ಮಾತ್ರ.

Advertisement
Advertisement

Udayavani is now on Telegram. Click here to join our channel and stay updated with the latest news.

Next