Advertisement

Olympics History: ಒಲಿಂಪಿಕ್ಸ್‌ನಲ್ಲಿ ಭಾರತ!, ಈವರೆಗೆ ಗೆದ್ದ 35 ಪದಕಗಳ ವಿವರ

01:30 AM Jul 21, 2024 | Team Udayavani |

ಆಧುನಿಕ ಒಲಿಂಪಿಕ್ಸ್‌ ಶುರುವಾದ 1896ರ ಅಥೆನ್ಸ್‌ ಒಲಿಂಪಿಕ್ಸ್‌ ನಿಂದ ಹಿಡಿದು, ಕಳೆದ ಟೋಕಿಯೊ ಒಲಿಂಪಿಕ್ಸ್‌ ವರೆಗೆ ಭಾರತ ಒಟ್ಟು 35 ಪದಕಗಳನ್ನು ಗೆದ್ದಿದೆ. ಇದರಲ್ಲಿ 10 ಚಿನ್ನ, 9 ಬೆಳ್ಳಿ ಮತ್ತು 16 ಕಂಚಿನ ಪದಕಗಳು ಸೇರಿವೆ. ಪ್ಯಾರಿಸ್‌ ಒಲಿಂಪಿಕ್ಸ್‌ ಆರಂಭಕ್ಕೂ ಮುನ್ನ ಈ ಹಿಂದೆ ದೇಶಕ್ಕೆ ಪದಕದ ಮೆರುಗು ತಂದವರ ನೆನಪಿನ ಚಿತ್ರಣ ಇಲ್ಲಿದೆ.

Advertisement

1928
ಈ ಒಲಿಂಪಿಕ್ಸ್‌ನಲ್ಲಿ ಭಾರತ ಮೊದಲ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿತು. ಆಮ್‌ಸ್ಟರ್‌ಡ್ಯಾಮ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಫೈನಲ್‌ನಲ್ಲಿ ನೆದರ್ಲೆಂಡ್‌ ತಂಡವನ್ನು 3-0 ಗೋಲುಗಳಿಂದ ಸೋಲಿಸಿ ಚಿನ್ನ ಗೆದ್ದಿತು.

1932
1932ರ ಒಲಿಂಪಿಕ್ಸ್‌ನಲ್ಲಿ ಹಾಕಿ ಸ್ಪರ್ಧೆಯಲ್ಲಿ ದ್ದದ್ದು ಮೂರೇ ತಂಡಗಳು. ಭಾರತ, ಜಪಾನ್‌, ಅಮೆರಿಕ. ಭಾರತ ಅಮೆರಿಕವನ್ನು 24-1 ಅಂತರದಿಂದ ಮಣಿಸಿದರೆ, ಜಪಾನನ್ನು 11-1 ಗೋಲುಗಳ ಸೋಲುಣಿಸಿತು.

1936
ಜರ್ಮನಿಯ ಬರ್ಲಿನ್‌ ಒಲಿಂಪಿಕ್ಸ್‌ ಹಾಕಿ ಯಲ್ಲಿ ಭಾರತ ಚಿನ್ನದ ಪದಕಗಳ ಹ್ಯಾಟ್ರಿಕ್‌ ಸಾಧಿಸಿತು. ಫೈನಲ್‌ನಲ್ಲಿ ಜರ್ಮನಿಯನ್ನು 8-1 ಗೋಲುಗಳಿಂದ ಮಣಿಸಿತು. ಈ ಕೂಟದಲ್ಲಿ ಭಾರತ 30 ಗೋಲು ಬಾರಿಸಿತ್ತು.

1948
1948ರಲ್ಲಿ ಲಂಡನಲ್ಲಿ ಒಲಿಂಪಿಕ್ಸ್‌ ಪುನಾರಂಭ ಗೊಂಡಾಗಲೂ, ಫೈನಲ್‌ನಲ್ಲಿ ಆತಿಥೇಯ ಗ್ರೇಟ್‌ ಬ್ರಿಟನ್‌ ವಿರುದ್ಧ ಭಾರತ 4-0 ಜಯಭೇರಿ ಮೊಳಗಿಸಿತು. ಸತತ 4ನೇ ಚಿನ್ನದ ಪದಕಕ್ಕೆ ಭಾರತ ತಂಡ ಕೊರಳೊಡ್ಡಿತು.

Advertisement

1952
1952ರ ಹೆಲ್ಸಿಂಕಿ ಒಲಿಂಪಿಕ್ಸ್‌ನಲ್ಲಿ ಮತ್ತೆ ಬಲ್ಬಿàರ್‌ ಸಿಂಗ್‌ ಮಿಂಚಿದರು. ಚಿನ್ನದ ಪದಕದ ಸ್ಪರ್ಧೆಯಲ್ಲಿ ನೆದರ್ಲೆಂಡ್ಸ್‌ಗೆ 6-1 ಗೋಲುಗಳಿಂದ ಭಾರತ ಆಘಾತವಿಕ್ಕಿತು. 5 ಗೋಲನ್ನು ಬಲ್ಬಿàರ್‌ ಹೊಡೆದರೆ, ಒಂದನ್ನು ಕೆ.ಡಿ. ಬಾಬು ಬಾರಿಸಿದರು.

1956
ಭಾರತದ ಸತತ 6ನೇ ಹಾಕಿ ಚಿನ್ನಕ್ಕೆ ಸಾಕ್ಷಿ ಯಾದದ್ದು 1956ರ ಆಸ್ಟ್ರೇಲಿಯಾ ಮೆಲ್ಬರ್ನ್ ಒಲಿಂಪಿಕ್ಸ್‌. ಫೈನಲ್‌ನಲ್ಲಿ ಪಾಕಿಸ್ತಾನವನ್ನು ಏಕೈಕ ಗೋಲಿನಿಂದ ಮಣಿಸಿತು. ನಾಯಕ ಬಲ್ಬಿàರ್‌ ಸಿಂಗ್‌ ಮುರಿದ ಕೈನಲ್ಲೇ ಆಡಿದರು.

1964
1964ರ ಟೋಕಿಯೊ ಒಲಿಂಪಿಕ್ಸ್‌ ಫೈನಲ್‌ನಲ್ಲಿ ಮತ್ತೆ ಪಾಕಿಸ್ತಾನವನ್ನೇ ಮಣಿಸಿ ಭಾರತ 7ನೇ ಚಿನ್ನ ಗಳಿಸಿತು. ಈಸ್ಟ್‌ ಜರ್ಮನಿ ವಿರುದ್ಧ 1-1 ಡ್ರಾ, ಉಳಿದ ಪಂದ್ಯಗಳನ್ನು ಸಣ್ಣ ಅಂತರದಿಂದ ಭಾರತ ಜಯಿಸಿತು.

1980
ಭಾರತ ತನ್ನ 8ನೇ ಹಾಗೂ ಕೊನೆಯ ಹಾಕಿ ಚಿನ್ನ ಜಯಿಸಿದ್ದು 1980ರಲ್ಲಿ ನಡೆದಿದ್ದ ಮಾಸ್ಕೊ ಒಲಿಂಪಿಕ್ಸ್‌ನಲ್ಲಿ. ಚಿನ್ನದ ಪದಕಕ್ಕಾಗಿ ನಡೆದ ಫೈನಲ್‌ನಲ್ಲಿ ಸ್ಪೇನ್‌ ವಿರುದ್ಧ 4-3 ಅಂತರದಿಂದ ಗೆದ್ದು ಚಿನ್ನ ಗಳಿಸಿತು.

2008
2008ರ ಚೀನಾದ ಬೀಜಿಂಗ್‌ ಒಲಿಂಪಿಕ್ಸ್‌ನ 10 ಮೀ. ಏರ್‌ ರೈಫ‌ಲ್‌ ವಿಭಾಗದಲ್ಲಿ ಅಭಿನವ್‌ ಬಿಂದ್ರಾ ಬಂಗಾರ ಗೆದ್ದರು. ಫೈನಲಲ್ಲಿ ಪಫೆìಕ್ಟ್ ಸ್ಕೋರ್‌ ಸಮೀಪಿಸಿ ಚಿನ್ನ ಗಳಿಸಿದರು. ಅವರ ಒಟ್ಟು ಅಂಕ 700.5.

2020
2020ರಲ್ಲಿ ಜಪಾನಿನ ಟೊಕಿಯೋಯಲ್ಲಿ ನಡೆದ ಒಲಿಂಪಿಕ್ಸ್‌ ಪಂದ್ಯಾವಳಿಯಲ್ಲಿ ನೀರಜ್‌ ಚೋಪ್ರಾ ಚಿನ್ನ ಗಳಿಸಿದರು. ಇದು ಅಥ್ಲೆಟಿಕ್‌ ವಿಛಾಗದಲ್ಲಿ ಭಾರತ ಗಳಿಸಿದ ಮೊದಲ ಚಿನ್ನದ ಪದಕ ಎಂಬ ಖ್ಯಾತಿ ಪಡೆದುಕೊಂಡಿತು.

ಪ್ಯಾರಿಸ್‌ 1990
ನಾರ್ಮನ್‌ ಪ್ರಿಚಾರ್ಡ್‌ ಅಥ್ಲೆಟಿಕ್ಸ್‌ 1990ರಲ್ಲಿ ಫ್ರಾನ್ಸ್‌ನ ಪ್ಯಾರಿಸಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ನಾರ್ಮನ್‌ 200 ಮೀ. ಓಟದಲ್ಲಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು.

ಪ್ಯಾರಿಸ್‌ 1990
ನಾರ್ಮನ್‌ ಪ್ರಿಚಾರ್ಡ್‌ ಅಥ್ಲೆಟಿಕ್ಸ್‌ 1990ರಲ್ಲಿ ಫ್ರಾನ್ಸ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ನಾರ್ಮನ್‌ ಪ್ರಿಚಾರ್ಡ್‌ 200 ಮೀ. ಹರ್ಡಲ್ಸ್‌ನಲ್ಲೂ ಬೆಳ್ಳಿ ಗೆದ್ದರು.

ರೋಮ್‌ 1960
ಪುರುಷರ ಹಾಕಿಯಲ್ಲಿ ಆಧಿಪತ್ಯ ಸ್ಥಾಪಿಸುತ್ತ ಬಂದ ಭಾರತ, 1960ರ ರೋಮ್‌ ಒಲಿಂಪಿಕ್ಸಲ್ಲಿ ಬೆಳ್ಳಿಗೆ ತೃಪ್ತಿಪಡಬೇಕಾಯಿತು.

ಅಥೆನ್ಸ್‌ 2004
ರಾಜ್ಯವರ್ಧನ್‌, ಶೂಟಿಂಗ್‌ 2004ರ ಗ್ರೀಸ್‌ನ ಅಥೆನ್ಸ್‌ ಒಲಿಂಪಿಕ್ಸ್‌ನಲ್ಲಿ ರಾಜ್ಯ ವರ್ಧನ್‌ಸಿಂಗ್‌ ರಾಥೋಡ್‌ಡಬಲ್‌ ಟ್ರಾÂಪ್‌ ವಿಭಾಗದಲ್ಲಿ ರಜತ ಗೆದ್ದರು.

ಲಂಡನ್‌‌ 2012
ಸುಶೀಲ್‌ ಕುಮಾರ್‌, ಕುಸ್ತಿ: 2012ರಲ್ಲಿ ಲಂಡನ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಕುಸ್ತಿ ಸ್ಪರ್ಧೆಯ 66 ಕೆಜಿ ವಿಭಾಗದಲ್ಲಿ ಸುಶೀಲ್‌ ಕುಮಾರ್‌ ಬೆಳ್ಳಿ ಗೆದ್ದರು.

ಲಂಡನ್‌ 2012
ವಿಜಯ್‌ ಕುಮಾರ್‌, ಶೂಟಿಂಗ್‌ : 2012ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ ವಿಜಯ್‌ ಕುಮಾರ್‌ ಪುರುಷರ 25 ಮೀ. ರ್ಯಾಪಿಡ್‌ ಪಿಸ್ತೂಲ್‌ ಶೂಟಿಂಗ್‌ನಲ್ಲಿ ಬೆಳ್ಳಿ ಗೆದ್ದರು.

ರಿಯೋ, 2016
ಪಿ.ವಿ. ಸಿಂಧು, ಬ್ಯಾಡ್ಮಿಂಟನ್‌: ಸಿಂಧು 2016ರ ಬ್ರಿಜಿಲ್‌ನ ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದರು. ಇದು ಒಲಿಂಪಿಕ್ಸ್‌ ಬ್ಯಾಡ್ಮಿಂಟನ್‌ನಲ್ಲಿ ಭಾರತದ ಮೊದಲ ಪದಕವಾಗಿದೆ.

ಟೋಕಿಯೋ 2020
ಮೀರಾಬಾಯಿ, ವೇಯ್ಟ್‌ ಲಿಫ್ಟಿಂಗ್‌
2020ರ ಟೋಕಿಯೋ ಒಲಿಂಪಿಕ್ಸ್‌ ವೇಟ್‌ಲಿಫ್ಟಿಂಗ್‌ನಲ್ಲಿ 49 ಕೆಜಿ ವಿಭಾಗದಲ್ಲಿ ಮೀರಾಬಾಯಿ ಚಾನು ಬೆಳ್ಳಿ ಗೆದ್ದರು.

ಟೋಕಿಯೊ 2020
ರವಿಕುಮಾರ್‌ ದಹಿಯಾ, ಕುಸ್ತಿ
2020ರ ಜಪಾನ್‌ನ ಟೋಕಿಯೊ ಒಲಿಂಪಿಕ್ಸ್‌ ಕುಸ್ತಿಯ 57 ಕೇಜಿ ವಿಭಾಗದಲ್ಲಿ ರವಿಕುಮಾರ್‌ ದಹಿಯಾ ಬೆಳ್ಳಿ ಗೆದ್ದರು.

 

– ಮಾಹಿತಿ: ಎಚ್‌.ಪ್ರೇಮಾನಂದ ಕಾಮತ್‌

Advertisement

Udayavani is now on Telegram. Click here to join our channel and stay updated with the latest news.

Next