Advertisement

Olympics: ಶಾಟ್‌ಪುಟ್‌ನಲ್ಲಿ ಹ್ಯಾಟ್ರಿಕ್‌ ಚಿನ್ನ:ಅಮೆರಿಕದ ಕ್ರೂಸರ್‌ ದಾಖಲೆ

12:00 AM Aug 05, 2024 | Team Udayavani |

ಪ್ಯಾರಿಸ್‌: ಅಮೆರಿಕದ ಶಾಟ್‌ಪುಟರ್‌ ರಿಯಾನ್‌ ಕ್ರೂಸರ್‌ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕಗಳ ಹ್ಯಾಟ್ರಿಕ್‌ ಸಾಧಿಸಿದ ವಿಶ್ವದ ಮೊದಲ ಸಾಧಕನಾಗಿ ಮೂಡಿಬಂದಿದ್ದಾರೆ. ಅವರು 22.90 ಮೀಟರ್‌ ದೂರದ ಸಾಧನೆಯೊಂದಿಗೆ ಸತತ 3ನೇ ಒಲಿಂಪಿಕ್ಸ್‌ ಚಿನ್ನವನ್ನು ತಮ್ಮದಾಗಿಸಿಕೊಂಡರು.

Advertisement

ಅಮೆರಿಕದ ಮತ್ತೋರ್ವ ಆ್ಯತ್ಲೀಟ್‌ ಜೋ ಕೊವಾಕ್ಸ್‌ ಸತತ 3ನೇ ಒಲಿಂಪಿಕ್ಸ್‌ ಬೆಳ್ಳಿ ಪದಕವನ್ನು ಗೆದ್ದರು. ಜಮೈಕಾದ ರಾಜೀಂದ್ರ ಕ್ಯಾಂಬೆಲ್‌ ಅವರಿಗೆ ಕಂಚು ಒಲಿಯಿತು.

31 ವರ್ಷದ ವಿಶ್ವ ಚಾಂಪಿಯನ್‌ ಖ್ಯಾತಿಯ ಕ್ರೂಸರ್‌ ಈ ವರ್ಷದ ಆರಂಭದಲ್ಲಿ ಮಣಿಗಂಟಿನ ನೋವಿಗೆ ಸಿಲುಕಿದ್ದರು. ಆದರೆ ಪ್ಯಾರಿಸ್‌ನಲ್ಲಿ ಈ ಸಮಸ್ಯೆ ಕಾಡಲಿಲ್ಲ. “ಈ ವರ್ಷ ಅತ್ಯಂತ ಕಠಿನವಾಗಿತ್ತು. ಇಲ್ಲಿಗೆ ಬಂದು ಸ್ಪರ್ಧಿಸಿದ ನಾನು ನಿಜಕ್ಕೂ ಅದೃಷ್ಟಶಾಲಿ’ ಎಂಬುದಾಗಿ ರಿಯೋ ಮತ್ತು ಟೋಕಿಯೊ ಒಲಿಂಪಿಕ್ಸ್‌ ಚಾಂಪಿಯನ್‌ ಕೂಡ ಆಗಿರುವ ಕ್ರೂಸರ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next