Advertisement
ಕಾಲೇಜಿನಲ್ಲಿ ಪ್ರಾಜೆಕ್ಟ್ ಕೊಟ್ಟಿದ್ದಾರೆ, “ಹಳೇ ಸಾಮಾನುಗಳನ್ನು ಬಳಸಿ ಏನಾದರೂ ಪ್ರಾಡಕ್ಟ್ ಮಾಡ್ಕೊಂಡು ಬನ್ನಿ’ ಅಂತ. ಏನ್ ಮಾಡ್ಲಿ ಅಂತ ಯೋಚನೆ ಮಾಡುವಾಗ ನೆನಪಾಗಿದ್ದು ನಮ್ಮ ಮನೆಯ “ಅಟ್ಟ’! ಬೇಡದೆ ಇರೋ ಹಳೇ ಸಾಮಾನುಗಳನ್ನು ಇಡೋ ಜಾಗ ಅದು. ಒಂದಿಷ್ಟು ಹಳೇ ಪೈಪುಗಳು ಸಿಕ್ಕಿದ್ರೂ ಸಾಕು ಅಂದುಕೊಂಡು ಅಟ್ಟ ಹತ್ತಿದೆ. ಸಾಮಾನುಗಳನ್ನು ಹುಡುಕುವಾಗ ಕಣ್ಣಿಗೆ ಬಿದ್ದಿದ್ದು ನಾನು ಚಿಕ್ಕವಳಿರುವಾಗ ಆಡುತ್ತಿದ್ದ ಗೊಂಬೆ. ಆ ಗೊಂಬೆಯ ಒಂದು ಕೈ ಮುರಿದುಹೋಗಿತ್ತು. ಕಣ್ಣುಗಳೆರಡು ಕಿತ್ತುಹೋಗಿದ್ದವು. ಅದಕ್ಕೆ ತೊಡಿಸಿದ್ದ ಬಟ್ಟೆ ಹರಿದುಹೋಗಿತ್ತು. ಆದ್ರೂ ಏನೂ ಆಗಿಲ್ಲವೇನೋ ಅನ್ನೋ ಥರಾ ಅದು ಅಟ್ಟದಲ್ಲೇ ತಣ್ಣಗೆ ಕುಳಿತುಬಿಟ್ಟಿತ್ತು.
Related Articles
Advertisement
ಅಡುಗೆ ಸೆಟ್ಟಿನ ಮೇಲಿದ್ದ ಕಣ್ಣು ಪುಸ್ತಕದ ರಾಶಿ ಮೇಲೆ ಹೋಯಿತು, ಶಿರಸಿಗೆ ಹೋದಾಗಲೆಲ್ಲಾ ತುಂತುರು ಕತೆ ಪುಸ್ತಕ ಬೇಕು ಅಂತ ಪುಸ್ತಕದ ಅಂಗಡಿ ಮುಂದೆ ಹೋಗಿ ನಿಂತುಕೊಂಡುಬಿಡುತ್ತಿದ್ದೆ. ಆ ಅಂಗಡಿಯವನಿಗೆ ಇಂದಿಗೂ ನನ್ನ ನೆನಪಿದೆ. ತುಂತುರು ಜೊತೆ ನನ್ನ ಕನ್ನಡ ಶಾಲೆಯ ಪುಸ್ತಕಗಳು, ಗ್ರೀಟಿಂಗ್ ಕಾರ್ಡ್‌ಗಳು ಎಲ್ಲಾ ಹಾಗೆ ಇವೆ. ನಾನು ದೊಡ್ಡವಳಾಗುತ್ತಿದ್ದ ಹಾಗೆ ಅಡುಗೆ ಆಟದ ಮೇಲೆ ಬೇಜಾರು ಬಂದಿತು. ಅಕ್ಕಪಕ್ಕದ ಮನೆಗಳಲ್ಲಿ ಹುಡುಗಿಯರು ಇಲ್ಲದೇ ಇದ್ದಿದ್ದರಿಂದ ಅಡುಗೆ ಆಟ ಆಡಲು ಯಾರೂ ಜೊತೆ ಸಿಕ್ಕಿರಲಿಲ್ಲ. ಆಮೇಲೆ ತಮ್ಮನ ಜೊತೆ ಕ್ರಿಕೆಟ್ ಆಡೋಕೆ ಶುರುಮಾಡಿದೆ. ಮನೆ ಮುಂದೆ ವಿಶಾಲವಾದ ಅಂಗಳವಿದ್ದಿದ್ದರಿಂದ ಬಾಲ… ಕಳೆದುಹೋಗುತ್ತಿರಲಿಲ್ಲ. ನಂಗೆ ಬೌಲಿಂಗ್‌ಗಿಂತ ಬ್ಯಾಟಿಂಗ್ ಮೇಲೆ ಆಸೆ ಜಾಸ್ತಿ. ಆದ್ರೆ ತಮ್ಮ ಬ್ಯಾಟಿಂಗ್ ಮಾಡೋಕೆ ಅವಕಾಶಾನೇ ಕೊಡುತ್ತಿರಲಿಲ್ಲ. ಅದಕ್ಕಾಗಿ ಜಗಳ ಮಾಡಿಕೊಂಡ ಮೇಲೆ ಒಂದು ತೀರ್ಮಾನಕ್ಕೆ ಬಂದಿದ್ವಿ. ಒಬ್ಬೊಬ್ಬರಿಗೆ 3 ಓವರ್ ಅಂತ ರೂಲ್ ಮಾಡಿಕೊಂಡು ಆಟ ಆಡುತ್ತಿದ್ವಿ.
ತುಂಬಾ ಆಟಗಳನ್ನು ಆಡುತಿದ್ದ ಕಾರಣಕ್ಕೊ ಏನೋ, ರಾತ್ರಿ, ಟ್ರೋಫಿಗಳನ್ನು ಎತ್ತಿದ ಹಾಗೆ, ಜನರೆಲ್ಲಾ ಚಪ್ಪಾಳೆ ಹೊಡೆದ ಹಾಗೆ, ಶಿಳ್ಳೆ ಹಾಕಿದ ಹಾಗೆಲ್ಲಾ ಕನಸುಗಳು ಬೀಳತೊಡಗಿದವು. ಅಷ್ಟೇ ಅಲ್ಲ, ರಾಹುಲ… ದ್ರಾವಿಡ್‌ನ ಮೀಟ್ ಮಾಡಿದ ಹಾಗೆ, ಒಲಿಂಪಿಕ್ಸ್ನಲ್ಲಿ ಬಂಗಾರದ ಪದಕ ಗೆದ್ದ ಹಾಗಿನ ಕನಸುಗಳೂ ಬೀಳುತ್ತಿದ್ದವು! ಆಟ ಎಂದರೆ ಎಷ್ಟು ಇಷ್ಟವೆಂದರೆ ಮಳೆ ಬರ್ತಾ ಇರಲಿ, ಸುಡೋ ಬಿಸಿಲಿರಲಿ, ಯಾರದ್ರೂ ಆಡೋಕೆ ಬರ್ತಿಯಾ ಅಂತಾ ಕೇಳಿದ್ರೆ ಸಾಕು ಅಮ್ಮನಿಗೆ ಹೇಳಿ ಓಡುತಿ¨ªೆ.
ಬಾಲ್ಯದ ದಿನಗಳಲ್ಲಿ ನನ್ನೊಳಗೊಂದು ಮುಗ್ಧತೆ, ಮುಖದ ಮೇಲೊಂದು ನಿಷ್ಕಲ್ಮಷ ನಗು ಇರುತ್ತಿತ್ತು. ತುಂಬಾ ಚೆನ್ನಾಗಿತ್ತು ಆ ದಿನಗಳು. ಮನುಷ್ಯ ಎಷ್ಟೇ ಬೆಳೆದರೂ ಅವನ ಮನಸ್ಸಿನ ಮೂಲೆಯಲೊಂದು ಮಗು ಅಡಗಿರುತ್ತೆ ಅಂತ ನಾನು ತಿಳಿದಿದ್ದೀನಿ! ಈಗಲೂ ಆಡಲು ಮನಸ್ಸಾದಾಗ ಗೆಳತಿಯರನ್ನು ಕರೆಯುತ್ತೇನೆ. ಅವರು, “ಇಷ್ಟು ದೊಡ್ಡವಳಾಗಿದ್ದೀಯಾ, ಈಗೆಂತಾ ಆಟ ಆಡ್ತೀಯೆ ನೀನು?’ ಅಂತ ಮರುಪ್ರಶ್ನೆ ಕೇಳಿ ತಣ್ಣೀರೆರೆಚಿಬಿಡುತ್ತಾರೆ. ವಿಪರ್ಯಾಸ ಅಂದರೆ “ಆಟ ಆಡೋಕೆ ನಾವೇನು ಮಕ್ಕಳಾ?’ ಎಂದು ಹೇಳುವವರು ಮೊಬೈಲು ಹಿಡಿದುಕೊಂಡು ಆಂಡ್ರಾಯ್ಡ ಆಟಗಳಲ್ಲಿ ಮುಳುಗಿರುತ್ತಾರೆ! ನಾನಂತೂ ಆ ಮಗುವಿನ ನಿಷ್ಕಲ್ಮಶ ನಗುವನ್ನು ನನ್ನಲ್ಲಿ ಉಳಿಸಿಕೊಳ್ಳುವ ಪ್ರಯತ್ನದಲ್ಲಿದ್ದೇನೆ.
ಇಷ್ಟೆಲ್ಲಾ ಆಲೋಚನೆಗಳು ಹರಿಯುವಷ್ಟರಲ್ಲಿ ಅಮ್ಮ “ಊಟಕ್ಕೆ ಬಾರೇ…’ ಎಂದು ಕರೆದಿದ್ದು ಕೇಳಿಸಿತು. ನಾನು ಆಲೋಚನಾ ಸರಣಿಯಿಂದ ಹೊರಬಂದೆ. ಅಟ್ಟದಿಂದ ಇಳಿದು ಬಂದೆ. ಊಟ ಮುಗಿಸಿ ಮತ್ತೆ ಅಟ್ಟ ಹತ್ತಬೇಕು ಅಂದುಕೊಂಡೆ. ಇಳಿಯುವಾಗ ಕಣ್ಣು ಕಿತ್ತುಹೋಗಿರೊ ಗೊಂಬೆ ನನ್ನನ್ನೇ ನೋಡಿ ನಗುತ್ತಿದ್ದ ಹಾಗನ್ನಿಸಿತು.
ಮೇಘಾ ಹೆಗಡೆ ಕತ್ರಿಮನೆ