Advertisement

ಕಾಸರಗೋಡು ಜಿಲ್ಲೆಯಲ್ಲಿ ಒಲಿಂಪಿಕ್ಸ್‌ ದಿನಾಚರಣೆ

11:44 PM Jun 23, 2019 | Team Udayavani |

ಕಾಸರಗೋಡು: ಜಿಲ್ಲಾ ಕ್ರೀಡಾ ಮಂಡಳಿ ವತಿಯಿಂದ ಒಲಿಂಪಿಕ್ಸ್‌ ದಿನಾಚರಣೆ ನಡೆಯಿತು.

Advertisement

ಪಿಲಿಕೋಡ್‌ ಗ್ರಾಮ ಪಂಚಾಯತ್‌ನ ಕಾಲಿಕಡವು ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಕ್ರೀಡಾ ಸ್ಪರ್ಧೆಗಳು ನಡೆದುವು. ಬಾಸ್ಕೆಟ್ಬಾಲ್, ವೂಷು, ಕಳರಿಪಯಟ್, ಫುಟ್ಬಾಲ್, ವಾಲಿಬಾಲ್ ಇತ್ಯಾದಿ ಪಂದ್ಯಾಟಗಳು ಜರಗಿದವು.

ಮಂಡಳಿ ಜಿಲ್ಲಾ ಅಧ್ಯಕ್ಷ ಹಬೀಬ್‌ ರಹಮಾನ್‌ ಉದ್ಘಾಟಿಸಿದರು. ರಾಜ್ಯ ಕ್ರೀಡಾ ಮಂಡಳಿ ಸದಸ್ಯ ಟಿ.ವಿ. ಬಾಲನ್‌ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಮಿತಿ ಉಪಾಧ್ಯಕ್ಷ ಪಿ.ಪಿ. ಅಶೋಕನ್‌, ಸಿಬಂದಿ, ಕ್ರೀಡಾ ಪ್ರೇಮಿಗಳು ಉಪಸ್ಥಿತರಿದ್ದರು.

ಸಮಾರಂಭದ ಅಂಗವಾಗಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಿರಿಯ ಪ್ರಾಥಮಿಕ, ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಒಲಿಂಪಿಕ್ಸ್‌ ರಸಪ್ರಶ್ನೆ ಸ್ಪರ್ಧೆ ನಡೆಯಿತು. ಸಬ್‌ ಜಿಲ್ಲಾ ಮಟ್ಟದ ಸ್ಪರ್ಧೆಗಳ ವಿಜೇತರಿಗಾಗಿ ಈ ಸ್ಪರ್ಧೆ ಜರಗಿತು.

ತೃಕ್ಕ‌ರಿಪುರ ಬಸ್‌ ನಿಲ್ದಾಣ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಒಲಿಂಪಿಕ್ಸ್‌ ಕ್ರೀಡಾ ಜ್ಯೋತಿ ಪರ್ಯಟನೆ ಆರಂಭಗೊಂಡಿತು. ಶಾಸಕ ಎಂ. ರಾಜಗೋಪಾಲನ್‌ ಸಮಾರಂಭವನ್ನು ಉದ್ಘಾಟಿಸಿದರು. ಮಾಜಿ ಭಾರತೀಯ ಕ್ರೀಡಾಪಟು ಎಂ. ಸುರೇಶ್‌ ಕ್ರೀಡಾಜ್ಯೋತಿ ಪಡೆದುಕೊಂಡರು.

Advertisement

ಕ್ರೀಡಾಮಂಡಳಿ ಜಿಲ್ಲಾ ಸಮಿತಿ ಅಧ್ಯಕ್ಷ ಹಬೀಬ್‌ ರಹಮಾನ್‌ ಅಧ್ಯಕ್ಷತೆ ವಹಿಸಿ ದರು. ಜಿಲ್ಲಾ ಪಂಚಾಯತ್‌ ಅಧ್ಯಕ್ಷ ಎ.ಜಿ.ಸಿ. ಬಶೀರ್‌ ಮುಖ್ಯ ಅತಿಥಿಯಾಗಿ ದ್ದರು. ತೃಕ್ಕರಿಪುರ, ನಡಕ್ಕಾವ್‌, ಕಾಲಿಕ್ಕಡವು, ಚೆರುವತ್ತೂರು, ನೀಲೇಶ್ವರ, ಕಾಂಞಂ ಗಾಡ್‌, ಮಡಿಯನ್‌, ಪಾಲಕುನ್ನು, ಮೇಲ್ಪ ರಂಬ, ಚಂದ್ರಗಿರಿ, ಜಂಕ್ಷನ್‌ ಪ್ರದೇಶಗಳಲ್ಲಿ ಕ್ರೀಡಾಜ್ಯೋತಿಗೆ ಸ್ವಾಗತ ನೀಡಲಾಯಿತು.

ಕಾಸರಗೋಡು ನೂತನ ಬಸ್‌ ನಿಲ್ದಾಣ ಬಳಿ ಜರಗಿದ ಸಮಾರೋಪ ಸಮಾರಂಭವನ್ನು ಕಂದಾಯ ಸಚಿವ ಇ. ಚಂದ್ರಶೇಖರನ್‌ ಉದ್ಘಾಟಿಸಿದರು. ಶಾಸಕ ಎನ್‌.ಎ. ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದ್ದರು. ಕಣ್ಣೂರು ಡಿ.ಐ.ಜಿ. ಕೆ. ಸೇತುಮಾಧವನ್‌ ಮುಖ್ಯ ಅತಿಥಿಯಾಗಿದ್ದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜೇಮ್ಸ್‌ ಜೋಸೆಫ್‌ ಬಹುಮಾನ ವಿತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next