Advertisement

ಒಲಿಂಪಿಕ್ಸ್‌ ರದ್ದು ಊಹಿಸಲೂ ಅಸಾಧ್ಯ: ಟೋಕಿಯೋ ಗವರ್ನರ್‌

10:21 AM Mar 13, 2020 | Sriram |

ಟೋಕಿಯೋ: ವಿಶ್ವಾದ್ಯಂತ ಕೊರಾನಾ ವೈರಸ್‌ ಭೀತಿ ಹೆಚ್ಚುತ್ತಿರುವಂತೆಯೇ ಈ ವರ್ಷದ ಜು. 24ರಿಂದ ಆ.9ರವರೆಗೆ ನಿಗದಿಯಾಗಿರುವ ಒಲಿಂಪಿಕ್ಸ್‌ ರದ್ದುಗೊಳ್ಳುವ ಸಾಧ್ಯತೆಗಳಿವೆ ಎಂಬ ವದಂತಿಗಳ ನಡುವೆಯೇ ಇಂಥ ಬೆಳವಣಿಗೆಯನ್ನು ಊಹಿಸಲೂ ಅಸಾಧ್ಯ ಎಂದು ಟೋಕಿಯೋ ನಗರ ಗವರ್ನರ್‌ ಯೂರಿಕೋ ಕೊçಕೆ ಹೇಳಿದ್ದಾರೆ.

Advertisement

ಸದ್ಯದ ಸ್ಥಿತಿಯಲ್ಲಿ ಒಲಿಂಪಿಕ್ಸ್‌ ಕ್ರೀಡಾಕೂಟದ ಮೇಲೆ ಕೊರೊನಾ ಪರಿಣಾಮ ಬೀರಲಾರದು ಎಂದು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲವಾದರೂ ಕ್ರೀಡಾಕೂಟವನ್ನೇ ರದ್ದುಗೊಳಿಸಬಹುದಾದ ಪರಿಸ್ಥಿತಿ ನಿರ್ಮಾಣವಾಗಬಹುದು ಎಂಬುದನ್ನು ಊಹಿಸಲಸಾಧ್ಯ ಎಂದವರು ಹೇಳಿದರು.

ಕ್ರೀಡಾಕೂಟದ ಸಂಘಟಕರು ಒಲಿಂಪಿಕ್ಸ್‌ನ್ನು ನಿಗದಿಯಂತೆ ನಡೆಸಲು ತೀರ್ಮಾನಿಸಿರುವರಾದರೂ ಈ ಬಗ್ಗೆ ಅಂತಾರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿ(ಐಒಸಿ) ಅಂತಿಮ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಹೊಂದಿದೆ. ಒಲಿಂಪಿಕ್ಸ್‌ನ್ನು ಮುಂದೂಡುವ ಅಥವಾ ರದ್ದುಗೊಳಿಸುವ ಬಗ್ಗೆ ಈವರೆಗೆ ಯಾವುದೇ ಚರ್ಚೆಗಳು ನಡೆದಿಲ್ಲ ಎಂದವರು ತಿಳಿಸಿದರು.

ಕೊರಾನಾ ವೈರಸ್‌ ವಿಶ್ವಾದ್ಯಂತ ಪಸರಿಸುತ್ತಿರುವ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಐಒಸಿ ನಿರಂತರ ಸಂಪರ್ಕದಲ್ಲಿದೆ.

ಬಾಸ್ಕೆಟ್‌ಬಾಲ್‌ ಆಟಗಾರನಿಗೆ ಕೊರಾನಾ
ಕೊರಾನಾ ಸೋಂಕಿನ ಹಿನ್ನೆಲೆಯಲ್ಲಿ ಈಗಾಗಲೇ ಹಲವಾರು ಕ್ರೀಡಾಕೂಟಗಳನ್ನು ಮುಂದೂಡಲಾಗಿದ್ದರೆ ಇನ್ನು ಕೆಲವಷ್ಟನ್ನು ರದ್ದುಗೊಳಿಸಲಾಗಿದೆ. ಇಷ್ಟು ಮಾತ್ರವಲ್ಲದೆ ಕೆಲವು ಕ್ರೀಡಾಳುಗಳಿಗೂ ಕೊರೊನಾ ಸೋಂಕು ತಗಲಿರುವ ಶಂಕೆ ಇದೆ. ಇದೀಗ ಗುರುವಾರದಂದು ಆರಂಭವಾಗಬೇಕಿದ್ದ ಅಮೆರಿಕದ ಬಾಸ್ಕೆಟ್‌ಬಾಲ್‌ ಟೂರ್ನಮೆಂಟ್‌ನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಅಟಾ ಜಾಝ್ ಕ್ರೀಡಾಳು ಓರ್ವನಿಗೆ ಕೋವಿಡ್‌-19 ತಗಲಿರುವುದು ಪ್ರಾಥಮಿಕ ಪರೀಕ್ಷೆಯಲ್ಲಿ ದೃಢಪಟ್ಟ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

Advertisement

ಇಟಲಿಯಲ್ಲಿ ಈಗಾಗಲೇ ಎ.3ರ ವರೆಗೆ ಹಲವಾರು ಕ್ರೀಡಾಕೂಟಗಳನ್ನು ಎ. 3ರ ವರೆಗೆ ಮುಂದೂಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next