Advertisement
ಸಮೀಕ್ಷೆ ಪ್ರಕಾರ ಅಮೆರಿಕ 112 ಪದಕಗಳನ್ನು ಗೆಲ್ಲುವ ಸಾಧ್ಯತೆ ಇದೆ-39 ಚಿನ್ನ, 32 ಬೆಳ್ಳಿ ಮತ್ತು 41 ಕಂಚು. ಚೀನಕ್ಕೆ 86 ಪದಕಗಳು ಒಲಿಯಬಹುದು-34 ಚಿನ್ನ, 27 ಬೆಳ್ಳಿ ಹಾಗೂ 25 ಕಂಚು. “ನೀಲ್‌ಸನ್ಸ್ ಗ್ರೇಸ್‌ನೋಟ್ ಇ ನ್ಪೋರ್ಟ್ಸ್’ಈ ಸಮೀಕ್ಷೆ ನಡೆಸಿದೆ.
Related Articles
ಮತ್ತೆ ಪ್ಯಾರಿಸ್ ಸಮೀಕ್ಷೆಗೆ ಬರೋಣ. ಅಮೆರಿಕ ಮತ್ತು ಚೀನದ ಬಳಿಕ ಪದಕ ಪಟ್ಟಿಯನ್ನು ಅಲಂಕರಿಸುವ ದೇಶಗ ಳೆಂದರೆ ಬ್ರಿಟನ್, ಫ್ರಾನ್ಸ್, ಆಸ್ಟ್ರೇಲಿಯ, ಜಪಾನ್, ಇಟಲಿ, ಜರ್ಮನಿ, ನೆದ ರ್ಲೆಂಡ್ಸ್ ಮತ್ತು ದಕ್ಷಿಣ ಕೊರಿಯಾ.
ಸಾಮಾನ್ಯವಾಗಿ ಆತಿಥೇಯ ದೇಶ ಒಲಿಂಪಿಕ್ಸ್ ಪದಕ ಬೇಟೆಯಲ್ಲಿ ಮುಂಚೂಣಿಯಲ್ಲಿರುತ್ತದೆ ಎಂಬುದಕ್ಕೆ ಹಲವು ನಿದರ್ಶನಗಳಿವೆ. ಈ ಬಾರಿ ಫ್ರಾನ್ಸ್ ಸರದಿ.
Advertisement
ಅದು ಟೋಕಿಯೊ ಒಲಿಂಪಿಕ್ಸ್ ಗಿಂತ 3 ಪಟ್ಟು ಹೆಚ್ಚು ಪದಕಗಳನ್ನು ಗೆಲ್ಲುವ ಸಾಧ್ಯತೆ ಗೋಚರಿಸುತ್ತದೆ. ಸುಮಾರು 60 ಪದಕಗಳು ಫ್ರಾನ್ಸ್ ಪಾಲಾಗಬಹುದು. ಇದರಲ್ಲಿ 27 ಚಿನ್ನ ಎಂದು ಅಂದಾಜಿಸಲಾಗಿದೆ. 3 ವರ್ಷಗಳ ಹಿಂದೆ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಆತಿಥೇಯ ಜಪಾನ್ 58 ಪದಕ (27 ಚಿನ್ನ) ಗೆದ್ದು ದಾಖಲೆ ಸ್ಥಾಪಿಸಿತ್ತು. ಈ ಬಾರಿ ಕುಸಿತ ಕಾಣಲಿದೆ ಎನ್ನುತ್ತಿದೆ ಸಮೀಕ್ಷೆ.