Advertisement

ಮಹಿಳಾ ಗಾಲ್ಫ್: ಮೊದಲ ಸುತ್ತಲ್ಲಿ ಅದಿತಿ ಅದ್ಭುತ

09:14 PM Aug 04, 2021 | Team Udayavani |

ಟೋಕಿಯೊ: ಮಹಿಳಾ ಗಾಲ್ಫ್ ನಲ್ಲಿ ಕರ್ನಾಟಕದ ಅದಿತಿ ಅಶೋಕ್‌ ಅದ್ಭುತ ಆರಂಭ ಮಾಡಿದ್ದಾರೆ. ಅವರು ಮೊದಲ ಸುತ್ತಿನಲ್ಲಿ 2ನೇ ಸ್ಥಾನ ಪಡೆದಿದ್ದಾರೆ.

Advertisement

ರಿಯೋ ಒಲಿಂಪಿಕ್ಸ್‌ ಮೂಲಕ ಗಾಲ್ಫ್ ಜಗತ್ತಿಗೆ ಪರಿಚಿತರಾಗಿದ್ದ ಅದಿತಿ, ಈ ಬಾರಿ ವಿಶ್ವ ನಂ.1 ನೆಲ್ಲಿ ಕೊರ್ಡಾ ಜೊತೆಗೆ ಸ್ಥಾನ ಹಂಚಿಕೊಂಡಿದ್ದಾರೆ. ಅವರ ಅಂಕ 67. 66 ಅಂಕ ಗಳಿಸಿದ ಮ್ಯಾಡಲಿನ್‌ ಸ್ಯಾಗ್‌ಸ್ಟ್ರಾಮ್‌ ಮೊದಲ ಸ್ಥಾನದಲ್ಲಿದ್ದಾರೆ. ತನ್ನ ಸಾಧನೆ ಬಗ್ಗೆ ಸ್ವತಃ ಅದಿತಿ ಅಚ್ಚರಿ ಪಟ್ಟಿದ್ದಾರೆ.

ಆದರೆ ಇವರೊಂದಿಗೆ ಸ್ಪರ್ಧಿಸಿದ ದೀಕ್ಷಾ ದಾಗರ್‌ ಸಾಮಾನ್ಯ ಸ್ಪರ್ಧೆ ನೀಡಿ 56ನೇ ಸ್ಥಾನ ಪಡೆದಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next