Advertisement

ಒಲಿಂಪಿಕ್ಸ್‌ನಲ್ಲಿ ಉದ್ದೀಪನ ಬಲೆಗೆ ಬಿದ್ದ ಚೀನಾ ವೇಟ್‌ಲಿಫ್ಟರ್

03:45 AM Jan 14, 2017 | Team Udayavani |

ನವದೆಹಲಿ: 2008ರ ಬೀಜಿಂಗ್‌ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಚೀನಾದ ಮೂರು ಮಹಿಳಾ ವೇಟ್‌ಲಿಫ್ಟರ್‌ಗಳು ಉದ್ದೀಪನ ಮದ್ದು ಸೇವಿಸಿರುವುದು ಪತ್ತೆಯಾಗಿದೆ. 

Advertisement

ಹೀಗಾಗಿ ಅಂತಾರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿ(ಐಒಸಿ) ಮೂವರನ್ನು ಅನರ್ಹಗೊಳಿಸಿದೆ. ಎಲ್ಲರಿಗೂ 1 ವರ್ಷ ಅಂತಾರಾಷ್ಟ್ರೀಯ ಟೂರ್ನಿಯಿಂದ ನಿಷೇಧ ಹೇರಲಾಗಿದೆ.

ಕ್ಯಾಯೋ ಲೀ (75 ಕೆಜಿ), ಚೀನ್‌ ಕ್ಸಿಕ್ಸಿಯಾ(48 ಕೆಜಿ), ಲಿವು ಚುನ್‌ಹೊನಗ್‌ (69 ಕೆಜಿ) ಉದ್ದೀಪನ ಮದ್ದು ಪರು ಪರೀಕ್ಷೆಯಲ್ಲಿ ಸಿಕ್ಕಿಬಿದ್ದ ಅಥ್ಲೀಟ್‌ಗಳಾಗಿದ್ದಾರೆ. ಬೀಜಿಂಗ್‌ನಲ್ಲಿ ಚೀನಾ 51 ಚಿನ್ನ, 21 ಬೆಳ್ಳಿ, 28 ಕಂಚು ಸೇರಿದಂತೆ 100 ಪದಕ ಗೆದ್ದು, ಪದಕ ಪಟ್ಟಿಯಲ್ಲಿ ನಂ.1 ಸ್ಥಾನ ಪಡೆದಿತ್ತು. 2008ರ ಬೀಜಿಂಗ್‌ ಮತ್ತು 2012ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡ ಅಥ್ಲೀಟ್‌ಗಳ ಮಾದರಿಯನ್ನು ಹೊಸ ತಂತ್ರಜ್ಞಾನದ ಮೂಲಕ ಮರುಪರೀಕ್ಷೆ ನಡೆಸಾಗುತ್ತಿದೆ. ಹೀಗಾಗಿ ರಷ್ಯಾ, ಚೀನಾ ಸೇರಿದಂತೆ ವಿವಿಧ ರಾಷ್ಟ್ರಗಳ ಅಥ್ಲೀಟ್‌ಗಳು ಸಿಕ್ಕಿಬೀಳುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next