Advertisement

Olympics ಆಟಗಾರ ಈಗ ಸ್ವಾಮೀಜಿ!

03:33 PM Jul 19, 2024 | Team Udayavani |

ಚೆನ್ನೈ: ಕ್ರೀಡೆಯಿಂದ ನಿವೃತ್ತರಾದ ಬಳಿಕ ಆಟಗಾರರು ಒಂದೋ ಕ್ರೀಡೆಯ ವಿವಿಧ ಕ್ಷೇತ್ರ ಗಳಲ್ಲಿ ತಮ್ಮನ್ನು ತೊಡಗಿಸಿ ಕೊಳ್ಳುತ್ತಾರೆ, ಇಲ್ಲವೇ ಸಂಪೂರ್ಣವಾಗಿ ನೇಪಥ್ಯಕ್ಕೆ ಸರಿಯುತ್ತಾರೆ. ಆದರೆ ಇಲ್ಲೊಬ್ಬರು ಎಲ್ಲ ವನ್ನೂ ತ್ಯಜಿಸಿ ಸ್ವಾಮೀಜಿಯಾಗಿದ್ದಾರೆ!

Advertisement

ಇವರ ಮೂಲ ಹೆಸರು ಅಮರ ನಾಥ್‌ ನಾಗರಾಜನ್‌. ಹೆತ್ತವರು ಖ್ಯಾತ ಕ್ರಿಕೆಟಿಗ ಲಾಲಾ ಅಮರನಾಥ್‌ ಅವರ ಕಟ್ಟಾ ಅಭಿಮಾನಿಯಾದ್ದರಿಂದ ಮಗನಿಗೆ ಈ ಹೆಸರು ಇರಿಸಿದ್ದರು. ಈಗಿನ ಹೆಸರು ಸ್ವಾಮಿ ನಟೇಶಾನಂದ ಸರಸ್ವತಿ. ಕೊಯಮತ್ತೂರಿನ ಆಶ್ರಮ ವೊಂದ ರಲ್ಲಿದ್ದಾರೆ. ಅವರಿಗೀಗ 70 ವರ್ಷ.

ಅಮರನಾಥ್‌ ನಾಗರಾಜನ್‌ ಅವರ ಊರು, ತಮಿಳುನಾಡಿನ ಥೇಣಿ ಜಿಲ್ಲೆಯ ಪೆರಿಯಾಕುಲಂ. ಆರಂಭ ದಲ್ಲಿ ಹಾಕಿ ಹಾಗೂ ಆ್ಯತ್ಲೆಟಿಕ್ಸ್‌ನಲ್ಲಿ ಆಸಕ್ತಿ ತೋರಿದರು. ಆದರೆ ಬಾಸ್ಕೆಟ್‌ಬಾಲ್‌ ಹುಚ್ಚು ಹಿಡಿದಾಗ ಬೇರೆಲ್ಲ ಕ್ರೀಡೆಗಳನ್ನು ಮೂಲೆಗೆ ತಳ್ಳಿದರು.

ಒಮ್ಮೆಯಷ್ಟೇ ಸ್ಪರ್ಧೆ
ಒಲಿಂಪಿಕ್ಸ್‌ ಇತಿಹಾಸದಲ್ಲಿ ಭಾರತ ಒಮ್ಮೆ ಮಾತ್ರ ಬಾಸ್ಕೆಟ್‌ಬಾಲ್‌ ಅರ್ಹತೆ ಪಡೆದಿತ್ತು. ಅದು 1980ರ ಮಾಸ್ಕೊ ಒಲಿಂಪಿಕ್ಸ್‌. ಅಮರ ನಾಥ್‌ ನಾಗರಾಜನ್‌ ಕೂಡ ತಂಡದ ಸದಸ್ಯ ರಾಗಿದ್ದರು. ಒಲಿಂಪಿಕ್ಸ್‌ ಅರ್ಹತಾ ಪಂದ್ಯಾ ವಳಿಯೂ ಆಗಿದ್ದ 1979ರ ಏಷ್ಯಾ ಕಪ್‌ನಲ್ಲಿ ಭಾರತ 5ನೇ ಸ್ಥಾನ ಪಡೆದಿತ್ತು. ಅಂದು ಅಗ್ರ 4 ತಂಡ ಗಳಿ ಗಷ್ಟೇ ಅವಕಾಶವಿತ್ತು. ಅಮೆರಿಕ ಮಾಸ್ಕೊ ಒಲಿಂಪಿಕ್ಸ್‌ ಪಂದ್ಯಾವಳಿ ಯನ್ನು ಬಹಿಷ್ಕರಿಸಿದ್ದರಿಂದ ಈ ಅವಕಾಶ ಭಾರತದ್ದಾಗಿತ್ತು.

“ನಮ್ಮ ಪಾಲಿಗೆ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದೇ ಹೆಮ್ಮೆ ಹಾಗೂ ಖುಷಿಯ ಸಂಗತಿ. 60 ಸಾವಿರ ವೀಕ್ಷಕರ ಸ್ಟೇಡಿಯಂನಲ್ಲಿ ನಾವು ಆಡಿ ದೆವು. ಯಾವುದೇ ನಿರೀಕ್ಷೆ ಇರಲಿಲ್ಲ. ಎಲ್ಲ ಏಳೂ ಪಂದ್ಯ ಗಳಲ್ಲಿ ಸೋತೆವು…’ ಎಂದರು.1982ರ ಏಷ್ಯಾಡ್‌ನ‌ಲ್ಲಿ ನಾಗ ರಾಜನ್‌ ಅವರೇ ಭಾರತದ ಬಾಸ್ಕೆಟ್‌ಬಾಲ್‌ ತಂಡದ ನಾಯಕರಾಗಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next