Advertisement
ಅಂತೆಯೇ ಇಲ್ಲೊಬ್ಬರು ಬಾಕ್ಸರ್ ಇದ್ದಾರೆ. ಅವರು ಏಶ್ಯನ್ ಗೇಮ್ಸ್ ಕಂಚಿನ ಪದಕ ವಿಜೇತ, ಒಲಿಂಪಿಕ್ಸ್‌ನಲ್ಲಿ ದೇಶ ಪ್ರತಿನಿಧಿಸಿದ ಪ್ರತಿಭಾವಂತ. ಆದರೆ ಇಂದು ತುತ್ತಿನ ಕೂಳಿಗಾಗಿ ಕಾರು ಚಾಲಕ. ಬದುಕಿಗಾಗಿ ಬಂಡಿ ಎಳೆಯುವುದಕ್ಕಾಗಿ ಕೇವಲ 8 ಸಾವಿರ ರೂ.ಗೆ ಪಡೆದು ಸರ್ಕಸ್ ನಡೆಸುತ್ತಿರುವ ಬಾಕ್ಸರ್ ಬದುಕಿನ ನೋವಿನ ಕಥೆ ಇಲ್ಲಿದೆ ನೋಡಿ.
ಇದಾದ ಬಳಿಕ ಇವರು ಕ್ರೀಡಾಕೂಟದಲ್ಲಿ ಭವಿಷ್ಯ ಕಾಣದೇ ಸಂಪೂರ್ಣ ಕತ್ತಲೆಗೆ ಬಿದ್ದರು. ಸಿಂಗ್ ಬದುಕು ಎಡವಿದ್ದೆಲ್ಲಿ?
ಲಖಾ ಸಿಂಗ್ 1994ರಲ್ಲಿ ಭಾರತೀಯ ಸೇನೆಗೆ ಸೇರಿ ದ್ದರು. ಒಲಿಂಪಿಕ್ಸ್ ನಡೆದ 2 ವರ್ಷ ಬಳಿಕ ಲಖಾ ಸಿಂಗ್ ಜೀವನ ದಾರಿ ತಪ್ಪಿತು. ಅವರೇ ಹೇಳುವ ಪ್ರಕಾರ ಅವರನ್ನು ಅಪರಾಧಿಯಂತೆ ಕಾಣಲಾಯಿತಂತೆ. ಸ್ನೇಹಿತನ ಮೋಸದ ಬಲೆಗೆ ಸಿಲುಕಿ ಅಮೆರಿಕದಲ್ಲಿ ಸಿಕ್ಕಿಬಿದ್ದರಂತೆ. ಅಷ್ಟೇ ಅಲ್ಲ ವೃತ್ತಿಪರ ಬಾಕ್ಸಿಂಗ್‌ಗಾಗಿ ತಲೆತಪ್ಪಿಸಿಕೊಂಡಿದ್ದಾನೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಯಿತಂತೆ. ಬಳಿಕ 8 ವರ್ಷ ಕೂಲಿ ಕಾರ್ಮಿಕನಾಗಿ ದುಡಿದು ಹಣ ಸಂಗ್ರಹಿಸಿ ಹರಸಾಹಸ ಪಟ್ಟರಂತೆ. ಕೊನೆಗೆ ಭಾರತೀಯ ರಾಯಭಾರಿ ಕಚೇರಿ ಸಹಾಯ ಪಡೆದು ಭಾರತಕ್ಕೆ ಮರಳಿದ್ದರಂತೆ. ತನ್ನ ಬದುಕಿನ ಕಷ್ಟದ ದಿನಗಳನ್ನು ಆಂಗ್ಲ ಪತ್ರಿಕೆಯೊಂದರ ಎದುರು ಲಖಾ ಸಿಂಗ್ ತೆರೆದಿಟ್ಟದ್ದು ಹೀಗೆ.
Related Articles
Advertisement
ಸುತ್ತಮುತ್ತ ಯಾರೂ ನನಗೆ ಪರಿಚಿತರಿರಲಿಲ್ಲ. ಏಕಾಂಗಿಯಾಗಿ ಅಲೆದೆ. ಕೊನೆಗೆ ಕೆಲ ಏಷ್ಯಾ ಜನರ ಸಹಾಯದಿಂದ ಕ್ಯಾಲಿಫೋರ್ನಿಯಾಗೆ ಬಂದೆ. ಗ್ಯಾಸ್ ಸ್ಟೇಷನ್, ರೆಸ್ಟೋರೆಂಟ್ ಎಂದು ಬೇರೆ ಬೇರೆ ಕಡೆ ಕೆಲಸ ಮಾಡಿದೆ. ಹಣ ಸಂಗ್ರಹಿಸಿದೆ. ಭಾರತಕ್ಕೆ ಮರಳಲು ಇನ್ನಿಲ್ಲದ ಪ್ರಯತ್ನ ನಡೆಸಿದೆ. ಕೊನೆಗೂ ಭಾರತೀಯ ರಾಯಭಾರಿ ಕಚೇರಿ ಸಹಾಯ ಪಡೆದು ಭಾರತಕ್ಕೆ ಬಂದೆ. ಅಷ್ಟರಲ್ಲಿ ನನ್ನನ್ನು ಯಾವುದೇ ತನಿಖೆಗೆ ಒಳಪಡಿಸದೆ ಸೇನೆಯಿಂದ ಕಿತ್ತು ಹಾಕಲಾಗಿತ್ತು’ ಎಂದು ತಿಳಿಸಿದರು.
ನನ್ನ ನೋವಿನ ಕೂಗು ಕೇಳುತ್ತಿಲ್ಲ…ದಿನನಿತ್ಯದ ಜೀವನ ನಡೆಸುವುದಕ್ಕೂ ತೊಂದರೆ ಅನುಭವಿಸುತ್ತಿದ್ದೇನೆ. ಸಂಬಂಧಪಟ್ಟವರಿಗೆ ನನ್ನ ನೋವಿನ ಕೂಗು ಕೇಳಿಲ್ಲ. ದಿನನಿತ್ಯ ಹೊಟ್ಟೆ ಹೊರೆಯಲು ಟ್ಯಾಕ್ಸಿ ಓಡಿಸುವ ಕಷ್ಟ ತಪ್ಪಿಲ್ಲ. ಹಲವು ಬಾರಿ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.
– ಲಖಾ ಸಿಂಗ್, ಮಾಜಿ ಬಾಕ್ಸರ್