Advertisement

103 ವರ್ಷದ ಅಜ್ಜಿ ಜಮೀನು ಕಳೆದಿದೆ!

04:57 PM Feb 21, 2021 | Team Udayavani |

ಕಮಲಾಪುರ: ನಮ್ಮ ನಡೆ ಹಳ್ಳಿಕಡೆ ಯೋಜನೆಯಡಿ ಸಾರ್ವಜನಿಕರ ಸಮಸ್ಯೆ ಆಲಿಸಿ ಸ್ಥಳದಲ್ಲೇ ಪರಿಹರಿಸಲು ತಹಶೀಲ್ದಾರ್‌ ಅಂಜುಮ್‌ ತಬಸುಮ್‌ ಡೊಂಗರಗಾಂವನಲ್ಲಿ ವಾಸ್ತವ್ಯ ಹೂಡಿದ್ದು, 103  ವರ್ಷದ ಅಜ್ಜಿ ಅಣ್ಣೆಮ್ಮ ನಾಗಪ್ಪ ಮೂಲಗೆ ತಮ್ಮ ಜಮೀನು ಕಳೆದಿದ್ದು ಹುಡುಕಿಕೊಡುವಂತೆ ಮನವಿ ಸಲ್ಲಿಸಿದ್ದು ಸಾರ್ವಜನಿಕರ ಗಮನ ಸೆಳೆಯಿತು.

Advertisement

ಪೂರ್ವಾರ್ಜಿತ ಆಸ್ತಿ 133/1, ಸರ್ವೇ ಸಂಖ್ಯೆ 3 ಎಕರೆ 20 ಗುಂಟೆ ಜಮೀನು ಉಳುಮೆ ಮಾಡುತ್ತಿದ್ದು, ಕಂದಾಯ ಇಲಾಖೆ ದಾಖಲೆಯಿಂದ ಮಾಯವಾಗಿದೆ. ಈ ಜಮೀನು ಕಳೆದ 1988-89ರಲ್ಲಿ ನನ್ನ ಪತಿ ನಾಗಪ್ಪ ಮೂಲಗೆ ಹೆಸರಿನಲ್ಲಿತ್ತು. ನಂತರದ ವರ್ಷದಿಂದ ಇದುವರೆಗೆ ಜಮೀನಿನ ಪಹಣಿ ಬರುತ್ತಿಲ್ಲ. ಈ ಕುರಿತು ಅನೇಕ ಬಾರಿ ತಹಶೀಲ್ದಾರ್‌ ಕಾರ್ಯಾಲಯಕ್ಕೆ ಅಲೆದರೂ ಪ್ರಯೋಜನವಾಗಿಲ್ಲ. ನಂತರ ನಾಲ್ಕು ವರ್ಷದ ಹಿಂದೆ ವಿಭಾಗೀಯ ಅಧಿಕಾರಿಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಈ ಕುರಿತು ಸಮಸ್ಯೆ ಪರಿಹರಿಸಲು ತಹಶೀಲ್ದಾರ್‌ಗೆ ಆದೇಶಿಸಿದ್ದರೂ ಈ ವರೆಗೂ ಕ್ರಮ ಕೈಗೊಂಡಿಲ್ಲ ಎಂದು ತಿಳಿಸಿದರು. ಆಗ ತಹಶೀಲ್ದಾರ್‌ ಅಂಜುಮ್‌ ತಬಸುಮ್‌ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಸಾಮಾಜಿಕ ಭದ್ರತಾ ಯೋಜನೆಯ 125 ಅರ್ಜಿಗಳಲ್ಲಿ 98 ಸ್ಥಳದಲ್ಲೆ ಮಂಜೂರು ಮಾಡಲಾಗಿದೆ. 27ತಿರಸ್ಕೃತಗೊಂಡಿವೆ. ಪಹಣಿ ತಿದ್ದುಪಡಿ 11, ಪೌತಿ ಖಾತೆ 6, ಜಾತಿ ಆದಾಯ ಪ್ರಮಾಣ ಪತ್ರ 35, ಜನನ ಪ್ರಮಾಣ ಪತ್ರ 1, ಕುಡಿಯುವ ನೀರಿನ ಸಮಸ್ಯೆ 1, ಪ್ರಧಾನ ಮಂತ್ರಿ ಕಿಸಾನ ಸಮ್ಮಾನ 6, 371 (ಜೆ) ಪ್ರಮಾಣ ಪತ್ರ 6  ಅರ್ಜಿ ಸಲ್ಲಿಸಲಾಗಿದ್ದು, ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಹಶೀಲ್ದಾರ್‌ ತಿಳಿಸಿದರು.

ಅಂಗವಿಕಲರಿಗೆ ತ್ರಿಚಕ್ರ ಬೈಸಿಕಲ್‌, ವೀಲ್‌ ಚೇರ್‌, ಅಂಧರ ಸ್ಟಿಕ್‌, ಚುನಾವಣಾ ಗುರುತಿನ ಸೀಟಿ  ವಿತರಿಸಲಾಯಿತು. ಗ್ರೇಡ್‌ 2 ತಹಶೀಲ್ದಾರ್‌ ಗಂಗಾಧರ ಪಾಟೀಲ, ಶಿಕ್ಷಣ ಇಲಾಖೆ ಕ್ಷೇತ್ರ ಸಮನ್ವಯಾಧಿ ಕಾರಿ ಡಾ| ಶಾಂತಾಬಾಯಿ ಬಿರಾದಾರ, ಮಹಾಂತೇಶ ಮುಡಬಿ, ಪ್ರಸನ್‌ ಜೋಯಿಲ್‌, ನಿಸಾರ ಅಹಮ್ಮದ್‌, ಕಂದಾಯ ನಿರೀಕ್ಷಕ ರಘುನಂದನ್‌ ದ್ಯಾಮಣಿ, ಮಕುºಲ್‌ ಪಟೇಲ್‌, ಗ್ರಾ.ಪಂ ಸಿಬ್ಬಂ  ಶಿವಕುಮಾರ ಜನಕಟ್ಟಿ, ವೈದ್ಯಾಧಿಕಾರಿ ರೇಖಾ, ಪಶು ವೈದ್ಯಾಧಿ ಕಾರಿ ಮನೋಜ, ಮಂಜುನಾಥ ಬಿರಾದಾರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next