Advertisement

Sullia ಮಗ ಮತ್ತು ಸೊಸೆ ವಿರುದ್ಧ ವೃದ್ಧೆ ದೂರು: ಸಹಾಯಕ ಆಯುಕ್ತರಿಂದ ಮಾತುಕತೆ

12:15 AM Jun 22, 2024 | Team Udayavani |

ಸುಳ್ಯ: ಮಗ ಮತ್ತು ಸೊಸೆ ತನ್ನನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ವೃದ್ಧೆಯೋರ್ವರು ತನ್ನ ಪುತ್ರಿಯರ ಜತೆಗೆ ಸುಳ್ಯ ತಾಲೂಕು ಕಚೇರಿಗೆ ಆಗಮಿಸಿ ಧರಣಿ ಕುಳಿತ ಘಟನೆ ಸುಳ್ಯದಲ್ಲಿ ನಡೆದಿದೆ.

Advertisement

ಮಂಡೆಕೋಲು ಗ್ರಾಮದ ಕಲ್ಲಡ್ಕದ ಪೆರಾಜೆಯ ಶೇಷಮ್ಮ ಅವರು ಕೆಲವು ವಾರಗಳ ಹಿಂದೆ ಸುಳ್ಯ ತಹಶೀಲ್ದಾರ್‌ಗೆ ಮಗನ ವಿರುದ್ಧ ದೂರು ನೀಡಿ ದ್ದರು. ಅಂದು ತಹಶೀಲ್ದಾರ್‌ ನೇತೃತ್ವದಲ್ಲಿ ಅಧಿಕಾರಿಗಳು ಸಮಾಲೋಚಿಸಿ ಮಗನಿಗೆ ಹಿತವಚನ ನೀಡಿ ಮಂಡೆ ಕೋಲಿನ ಮನೆಗೆ ಬಿಟ್ಟು ಬಂದಿದ್ದರು. ಅಂದಿನಿಂದ ವೃದ್ಧೆ ಅದೇ ಮನೆಯಲ್ಲಿದ್ದು, ಮದುವೆ ಮಾಡಲಾಗಿರುವ ಪುತ್ರಿಯರು ಒಬ್ಬರಂತೆ ಇದ್ದು ನೋಡಿಕೊಳ್ಳುತ್ತಿದ್ದರು. ಆದರೂ ಮಗ ಮತ್ತು ಸೊಸೆ ವರ್ತನೆ ಬದಲಾಗಲಿಲ್ಲ ಎಂದು ವೃದ್ಧೆಯು ಗುರು ವಾರ ತನ್ನ ಮೂವರು ಪುತ್ರಿ ಯರ ಜತೆಗೆ ಬಂದು ಧರಣಿ ಕುಳಿತು, ಸಹಾಯಕ ಆಯುಕ್ತರು ಆಗಮಿಸಿ ನಮ್ಮ ಸಮಸ್ಯೆಯನ್ನು ಪರಿಹರಿಸ ಬೇಕು ಎಂದು ಪಟ್ಟು ಹಿಡಿದಿದ್ದರು.

ಎಸಿಯಿಂದ ಮಾತುಕತೆ
ಸಂಜೆ ವೇಳೆಗೆ ಮಂಗಳೂರಿನಿಂದ ಆಗಮಿಸಿದ ಪುತ್ತೂರು ಸಹಾಯಕ ಆಯುಕ್ತ ಜುಬಿನ್‌ ಮೊಹಪಾತ್ರ ಅವರು, ವೃದ್ಧೆಯ ಆರೋಗ್ಯ ವಿಚಾ ರಿಸಿದರು. ವೃದ್ಧೆಯ ಪುತ್ರ ಹಾಗೂ ಪುತ್ರಿಯರ ಅಹವಾಲನ್ನೂ ಆಲಿ ಸಿ ದರು. ತಹಶೀಲ್ದಾರ್‌, ಸಿಡಿಪಿಒ ಅವರಿಂದಲೂ ಮಾಹಿತಿ ಪಡೆ ದರು. ಕಾನೂನು ರೀತಿಯಲ್ಲಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.

ತಾಯಿಯನ್ನು ಮಕ್ಕಳು ನೋಡಿ ಕೊಳ್ಳಬೇಕು. ಅಲ್ಲದೇ ಅವರ ಆರೋಗ್ಯಕ್ಕೆ ಪ್ರಥಮ ಆದ್ಯತೆ ನೀಡಿ ಆರೋಗ್ಯ ವಿಚಾರಿಸಬೇಕಾದುದು ಮಕ್ಕಳ ಕರ್ತವ್ಯ ಎಂದು ಬುದ್ಧಿಮಾತು ಹೇಳಿದರು. ಘಟನೆ ಬಗ್ಗೆ ಮನೆಗೆ ತೆರಳಿ ವರದಿ ನೀಡುವಂತೆ ತಹಶೀಲ್ದಾರ್‌ ಹಾಗೂ ಸಿಡಿಪಿಒಗೆ ಸೂಚಿಸಿದರು. ರಾತ್ರಿ ವರೆಗೂ ಮನೆಗೆ ತೆರಳದೇ ಕಚೇರಿ ಹೊರಾಂಗಣದಲ್ಲೇ ಇದ್ದ ವೃದ್ಧೆ ಹಾಗೂ ಅವರ ಪುತ್ರಿಯರನ್ನು ಅಧಿಕಾರಿಗಳು ಸಮಾಧಾನಪಡಿಸಿ, ಒಂದು ವಾರದೊಳಗೆ ಸಮಸ್ಯೆಗೆ ಪರಿಹಾರ ಕೊಡಿಸುವ ಭರವಸೆ ನೀಡಿ ದರು. ಬಳಿಕ ಪ್ರತಿಭಟನೆ ಹಿಂಪಡೆದು ಅಲ್ಲಿಂದ ತೆರಳಿದರು.

Advertisement

Udayavani is now on Telegram. Click here to join our channel and stay updated with the latest news.

Next